ಆದ್ಯೋತ್ ಸುದ್ದಿನಿಧಿ:
ಇತ್ತೀಚೆಗೆ ನಿಧನರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರಶ್ರೀ ಅವರ ಚಿತಾಭಸ್ಮವನ್ನು ರವಿವಾರ ಗೋಕರ್ಣದ
ಅರಬ್ಬಿ ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು.
ಸಿದ್ದೇಶ್ವರಶ್ರೀಗಳ ಇಚ್ಚೆಯಂತೆ ಅವರ ಪಾರ್ಥೀವ ಶರರೀರವನ್ನು ದಹನ ಮಾಡಲಾಗಿತ್ತು ಅಲ್ಲದೆ ತನ್ನ ಚಿತಾ ಭಸ್ಮವನ್ನು ಕೂಡಲ ಸಂಗಮ ಹಾಗೂ ಸಮುದ್ರಕ್ಕೆ ಅರ್ಪಿಸಬೇಕು ಎಂದು ಶ್ರೀಗಳು ಲಿಖಿತವಾಗಿ ಬರೆದಿದ್ದರು.ಅದರಂತೆ ಚಿತಾಭಸ್ಮವನ್ನು ಜ್ಞಾನ ಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ
ನೂರಾರು ಜನರು ಗೋಕರ್ಣಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಭಸ್ಮವನ್ನು ವಿಸರ್ಜಿಸಿದರು.
ಗೋಕರ್ಣದಲ್ಲೆ ವಾಸ್ತವ್ಯ ಹೂಡಿರುವ ಭಕ್ತರು ಸೋಮವಾರ ಕೆಲವು ಧಾರ್ಮಿಕ ವಿಧಿ-ವಿಧಾನವನ್ನು ನಡೆಸಲಿದ್ದಾರೆ.