ಶಿರಸಿಯಲ್ಲಿ 5ಕೋಟಿರೂ. ಮೌಲ್ಯದ ಅಂಬರ್ ಗ್ರೀಸ್ ವಶ ಇಬ್ಬರು ಆರೋಪಿಗಳ ಬಂಧನ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಶಿರಸಿ ಮರಾಠಿಕೊಪ್ಪದಲ್ಲಿ ಸೋಮವಾರ ತಡರಾತ್ರಿ ಪೊಲೀಸ್ ರು ನಡೆಸಿದ ಕಾರ್ಯಾಚರಣೆಯಲ್ಲಿ ಬಹುಬೆಲೆ ಬಾಳುವ 5ಕೋಟಿರೂ.ಮೌಲ್ಯದ 4.950 ಕೆ.ಜಿ.ತೂಕದ ಅಂಬರ್ ಗ್ರೀಸ್(ತಿಮಿಂಗಲದ ವಾಂತಿ)ಯನ್ನು ವಶಪಡಿಸಿಕೊಳ್ಳಲಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ 5 ಕೋಟಿರೂ.ಮೌಲ್ಯದ4.950 ಕೆ.ಜಿ.ಅಂಬರ್ ಗ್ರೀಸ್,10 ಲಕ್ಷರೂ.ಮೌಲ್ಯದ 100 ಗ್ರಾಂ ಅಂಬರ್ ಗ್ರೀಸ್ ನಂತಹ ವಸ್ತು,1.5ಲಕ್ಷರೂ.ಮೌಲ್ಯದ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದು,ಆರೋಪಿಗಳಾದ ಅಂಕೋಲಾ ಆವರ್ಸದ ಸಂತೋಷ ಬಾಲಚಂದ್ರ ಕಾಮತ್ ಹಾಗೂ ಶಿರಸಿ ಮರಾಠಿಕೊಪ್ಪದ ರಾಜೇಶ ಮಂಜುನಾಥ ನಾಯ್ಕನನ್ನು ಬಂಧಿಸಲಾಗಿದೆ.ಇನ್ನೋರ್ವ ಆರೋಪಿ ಹಾವೇರಿಯ ಅನ್ನಪೂರ್ಣ ಎನ್ನುವವರನ್ನು ಬಂಧಿಸಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಅಂಬರ್ ಗ್ರೀಸ್?
ಇಂಗ್ಲೀಷ್ ನಲ್ಲಿ ಅಂಬರ್ ಗ್ರೀಸ್ ಎಂದೂ ಕನ್ನಡದಲ್ಲಿ ತಿಮಿಂಗಲದ ವಾಂತಿ ಎಂದು ಕರೆಸಿಕೊಳ್ಳುವ ವಸ್ತು ತಿಮಿಂಗಲದಿಂದ ಉತ್ಪನ್ನವಾಗುತ್ತದೆ.

ಮೀನುಗಳನ್ನು ಬೇಟೆಯಾಡುವ ತಿಮಿಂಗಲಗಳು ಕೆಲವು ಮೀನುಗಳ ಎಲುಬುಗಳು ಜೀರ್ಣವಾಗದೆ ಅವುಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ.ತಿಂಗಳುಗಟ್ಟಲೆ ಇದನ್ನು ಸಹಿಸಿಕೊಳ್ಳುವ ತಿಮಿಂಗಲಗಳು ನಂತರ ತಡೆಯಲಾರದೆ ವಾಂತಿ ಮಾಡುತ್ತವೆ.ತಿಮಿಂಗಲದ ಹೊಟ್ಟೆಯಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಿಂದ ಈ ಆಹಾರಗಳು ಮೇಣದಂತೆ ಗಟ್ಟಿಯಾಗಿ ಹೊರಬರುತ್ತಧೆ ಇದನ್ನೆ ಅಂಬರ್ ಗ್ರೀಸ್ ಎನ್ನುತ್ತಾರೆ.

ಎಲ್ಲ ತಿಮಿಂಗಲಗಳ ವಾಂತಿಗಳು ಮೌಲ್ಯವನ್ನು ಹೊಂದಿರುವುದಿಲ್ಲ.ಸ್ಟೇರ್ವವೆಲ್ ಪ್ರಭೇದದ ತಿಮಿಂಗಲಗಳ ಅಂಬರ್ ಗ್ರೀಸ್ ಬೆಲೆಬಾಳುವಂತಹದ್ದು.
ಸುಗಂಧ ದ್ರವ್ಯ ತಯಾರಿಕೆಯಲ್ಲಿ,ಕೆಲವು ಔಷಧಗಳ ತಯಾರಿಕೆಯಲ್ಲಿ ಇವುಗಳನ್ನು ಬಳಸಲಾಗುತ್ತದೆ.ಅರಬ್ ಮತ್ತು ಚೀನಾದಂತಹ ಹಲವು ದೇಶಗಳಲ್ಲಿ ಈ ವಸ್ತುವಿಗೆ ಅಪಾರ ಬೇಡಿಕೆ ಇದೆ ಹಾಗೂ ಬಹಳ ಮೌಲ್ಯವೂ ಇದೆ.

About the author

Adyot

Leave a Comment