ಪ್ರಕೃತಿ ಮತ್ತು ಸಂಸ್ಕೃತಿಯ ಜೊತೆಗೆ ನಾವು ಬೆಳೆಯಬೇಕು–ರಾಘವೇಶ್ವರ ಶ್ರೀ
ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಭಾನ್ಕುಳಿ ಗೋಸ್ವರ್ಗದಲ್ಲಿ ಗೋದಿನ ಗೋವಿಗಾಗಿ ಆಲೆಮನೆ ಕಾರ್ಯಕ್ರಮ ನಡೆಯುತ್ತಿದೆ.
ಶನಿವಾರ ಹವ್ಯಕಮಹಾಸಭಾ ಸಹಯೋಗದಲ್ಲಿ ಪ್ರತಿಬಿಂಬ ಮತ್ತು ವಿದ್ಯಾಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದ ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಪ್ರಕೃತಿಯ ಬಗ್ಗೆ,ಸಂಸ್ಕೃತಿಯ ಬಗ್ಗೆ ನಮ್ಮ ಯುವಜನಾಂಗ ಅಜ್ಞಾನವನ್ನು ಹೊಂದಿದ್ದು ಪ್ರಕೃತಿ ಮತ್ತು ಸಂಸ್ಕೃತಿಯ ಜೊತೆಗೆ ನಾವು ಬೆಳೆಯಬೇಕು.ಭೂಮಿಯ ಮೆಲೆ ಜನಿಸುವ ಪ್ರತಿಯೊಂದು ಜೀವಿಯು ಬೆಳೆಯುತ್ತದೆ ಅದರಲ್ಲಿ ಕೆಲವು ಕಮರಿ ಹೋಗುತ್ತದೆ ಆದರೆ ಸರಿಯಾದ ರೀತಿಯಲ್ಲಿ ಅದನ್ನು ಬೆಳೆಸಿದರೆ ಅದು ಉತ್ತಮವಾಗಿ,ಸಮೃದ್ಧಿಯಾಗಿ ಬೆಳೆಯುತ್ತದೆ ಅದೇ ರೀತಿ ನಾವು ನಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ ತುಂಬಿದರೆ ಅವರು ಉತ್ತಮ ಪ್ರಜೆಗಳಾಗುತ್ತಾರೆ.
ಸಮಾಜದಲ್ಲಿ ಸಾಕಷ್ಟು ಪ್ರತಿಭೆಗಳಿವೆ ಅವುಗಳನ್ನು ಗುರುತಿಸುವ ವೇದಿಕೆ ಅವಶ್ಯಕ ಆ ಕೆಲಸವನ್ನು ಹವ್ಯಕಮಹಾಸಭಾ ಮಾಡಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಸರಕಾರ ಅವಶ್ಯಕ ಕಾನೂನು,ವ್ಯವಸ್ಥೆ ರೂಪಿಸುವುದು ಸರಕಾರದ ಕೆಲಸ ಅದೇ ರೀತಿ ನಮ್ಮ ಸಂಸ್ಕೃತಿಯೊಂದಿಗೆ ನಾವು ಉಳಿಯಬೇಕಾದರೆ ಮಠಗಳು ಬೇಕು ಹೀಗಾಗಿ ಸಮಾಜದ ಮುನ್ನಡೆಗೆ ಈ ಎರಡೂ ಅವಶ್ಯಕವಾಗಿದೆ ಎಂದು ಹೇಳಿದರು.
ಗೋಸೇವೆಗೆ ಅವಕಾಶ ಕಲ್ಪಿಸುವ ಕರ್ನಾಟಕ ಬ್ಯಾಂಕ್ನ ಈ ಹುಂಡಿ ಲೋಕಾರ್ಪಣೆ ಮಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಆಧುನಿಕ ಜೀವನಶೈಲಿ ನಮ್ಮ ಪರಂಪರೆಯ ದಿಕ್ಕನ್ನು ಬದಲಿಸುತ್ತಿದೆ ಇದನ್ನು ತಡೆಯಲು ಸಹಕಾರಿ ತತ್ವ ಅಳವಡಿಸಿಕೊಂಡು ಸಾಮೂಹಿಕ ಚಟುವಟಿಕೆ ನಡೆಸವಂತಾಗಿದೆ. ಗೋಸ್ವರ್ಗದಲ್ಲಿ ಸಂಪ್ರದಾಯ,ಸಂಸ್ಕೃತಿ ಉಳಿಸುವ ಕೆಲಸವಾಗುತ್ತಿದೆ. ಗೋವು ನಮ್ಮ ಜೀವನದ ಒಂದು ಭಾಗವಾಗಿದೆ ಇಲ್ಲಿ ಗೋವಿಗಾಗಿ ಇದೇ ಪ್ರಥಮವಾಗಿ ಅಷ್ಟಾಂಗ ಸೇವೆ ನಡೆದಿರುವುದು ಮೆಚ್ಚುವಂತಹದ್ದಾಗಿದೆ.
ಕಷ್ಟಗಳು,ಸಮಸ್ಯೆಗಳು ನಮ್ಮನ್ನು ನಿರಂತರವಾಗಿ ಕಾಡುತ್ತಿರುತ್ತದೆ ಇದನ್ನು ಎದುರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ನಾವು ಮಾಡುವ ಕೆಲಸ ದೇವರ ಕೆಲಸ ಎಂದು ತಿಳಿದು ವಿಶಾಲ ದೃಷ್ಠಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಹವ್ಯಕಮಹಾಸಭೆಯ ಉಪಾಧ್ಯಕ್ಷ ಆರ.ಎಂ.ಹೆಗಡೆ ಬಾಳೆಸರ,ಹವ್ಯಕಮಹಾಸಭೆ ರಚನೆಯಾಗಿ ೮೧ ವರ್ಷವಾಗಿದ್ದು ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ ವಿಕೇಂದ್ರೀಕರಣ ತತ್ವವನ್ನು ಅಳವಡಿಸಿಕೊಂಡಿರುವ ಮಹಾಸಭೆಗೆ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಲು ಅನುಕೂಲವಾಗಲು ಕಚೇರಿಯ ಅವಶ್ಯಕತೆ ಇದೆ ಶಿರಸಿ-ಸಿದ್ದಾಪುರ ಭಾಗದಲ್ಲಿ ಸರಕಾರ ನಿವೇಶನವನ್ನು ನೀಡಬೇಕಾಗಿದೆ. ಇದರಿಂದ ಕಚೇರಿ ಪ್ರಾರಂಭಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ,ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ
ಆರ್.ಎಸ್. ಹೆಗಡೆ ಹರಗಿ ಉಪಸ್ಥಿತರಿದ್ದರು.
ಗಣಪತಿ ಹೆಗಡೆ ಗುಂಜಗೋಡು ನಿರೂಪಣೆ ಮಾಡಿದರು. ಸತೀಶ ಹೆಗಡೆ ದಂಪತಿಗಳು ಸಭಾಪೂಜೆ ನಡೆಸಿದರು
——
ವಿಶ್ವೇಶ್ವರ ಹೆಗಡೆ ಕಾಗೇರಿಯವರಲ್ಲಿ ಯೋಗಿಗಳಿಗೆ ಬೇಕಾಗುವ ಎಲ್ಲಾ ಲಕ್ಷಣಗಳೂ ಇದೆ. ಆದರೆ ಅವರು ಸರಕಾರದಲ್ಲಿದ್ದಾರೆ ಆಧ್ಯಾತ್ಮ,ಯೋಗ ಪರಂಪರೆಯ ರಾಜರ್ಷಿಯಂತಹವರು ಇಂದು ಸಮಾಜಕ್ಕೆ ಅವಶ್ಯಕ.ಆದ್ಯಾತ್ಮಿಕ ತಳಹದಿ ಇಲ್ಲದವನು ಜನನಾಯಕರಾಗಲು ಸಾಧ್ಯವಿಲ್ಲ ವಿಶ್ವೇಶ್ವರ ಇಂತಹ ಅಪರೂಪದ ಜನನಾಯಕನ ರವಿವಾರ ನಡೆಯಲಿರುವ ಎಲ್ಲಾ ಸಮಾಜದ,ಪಕ್ಷಾತಿತ ಸಮಾರಂಭ ಯಶಸ್ವಿಯಾಗಲಿ.ಎಂದು
ರಾಘವೇಶ್ವರ ಶ್ರೀ ಹೇಳಿದರು.
#######################