ದಾಂಡೇಲಿ ಎತ್ತಿನಗಾಡಿ ದುರಂತ ಓರ್ವ ಸಾವು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಎತ್ತಿನಗಾಡಿ ದುರಂತ ನಡೆದಿದ್ದು ಯುವಕನೊರ್ವ ಮೃತಪಟ್ಟಿದ್ದಾನೆ.
ಬೈಲಹೊಂಗಲ ಮೂಲದ ಈರಣ್ಣ ಶಿವಬಸಪ್ಪ ದೂಪದಾಳ ಬ ಯುವಕ ಮೃತಪಟ್ಟವನಾಗಿದ್ದು ಉಳವಿ ಚನ್ನಬಸವಣ್ಣನ ದರ್ಶನಕ್ಕೆ ಬರುವಾಗ ಈ ಘಟನೆ ನಡೆದಿದೆ.

ಮೃತ ಈರಣ್ಣ ಗಾಡಿಯನ್ನು ಓಡಿಸುತ್ತಿದ್ದು ಆತನ ಸಂಬಂಧಿಗಳು ನಡೆದುಕೊಂಡು ಬರುತ್ತಿದ್ದರು.ಈ ಸಮಯದಲ್ಲಿ ಎತ್ತಿನ ಗಾಡಿಯು ರಸ್ತೆಯ ಪಕ್ಕಕ್ಕೆ ಸರಿದು ಸಣ್ಣದಾದ ಚರಂಡಿಗೆ ಇಳಿದಿದೆ ಈ ಸಂದರ್ಭದಲ್ಲಿ ಎತ್ತಿನ ಗಾಡಿಯ ಚಕ್ರ ಮೈಲಿಗಲ್ಲಿಗೆ ಅಪ್ಪಳಿಸಿದೆ. ಎತ್ತಿನ ಗಾಡಿ ನಡೆಸುತ್ತಿದ್ದ ಈರಣ್ಣ ಆಯತಪ್ಪಿ ಕೆಳಕ್ಕೆ ಬೀಳುತ್ತಿದ್ದಂತೆ ಎತ್ತಿನ ಗಾಡಿಯ ಚಕ್ರ ಆತನ ಎದೆಯ ಮೇಲೆ ಹರಿದು ಸ್ಥಳದಲ್ಲಿಯೇ ದಾರುಣವಾಗಿ ಮೃತ ಪಟ್ಟಿದ್ದಾನೆ. ಘಟನೆಯಲ್ಲಿ ಏತ್ತುಗಳು ಮತ್ತು ಎತ್ತಿನ ಗಾಡಿ ಸುಮಾರು 2೦
ಅಡಿ ದೂರಕ್ಕೆ ಸಾಗಿ ಪಕ್ಕದ ಸಣ್ಣ ಗುಡ್ಡಕೆ ವಾಲಿಕೊಂಡು ನಿಂತಿದೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿ.ಎಸ್.ಐ ಕೃಷ್ಣ ಅರಿಕೆರೆ, ಸಿಪಿಐ ಬಿ.ಎಸ್ ಲೋಕಾಪುರ ಭೇಟಿ ನೀಡಿದ್ದಾರೆ.

About the author

Adyot

Leave a Comment