ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಜಗದ್ಗುರು ಮುರಘರಾಜೇಂದ್ರ ಅಂಧರ ಶಾಲೆಯಲ್ಲಿ ಆಶಾಕಿರಣ ಟ್ರಸ್ಟ್ ರಜತಮಹೋತ್ಸವ ಹಾಗೂ ಜನಪದ ಕಲೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಸಚೀವ ಸುನಿಲಕುಮಾರ ಮಾತನಾಡಿ,ನಮ್ಮ ನಾಡಿನ ನಶಿಸಿ ಹೋಗುತ್ತಿರುವ ಕಲಾಪ್ರಕಾರವನ್ನು ಉಳಿಸುವ ಉದ್ದೇಶದಿಂದ ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಎನ್ನುವ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ ಈಡೀ ರಾಜ್ಯದಲ್ಲಿ ಇಂತಹ ಅಭಿಯಾನವನ್ನು ಹೋಬಳಿ ಮಟ್ಟದಲ್ಲಿ ಪ್ರದರ್ಶಿಸಿ ಅಲ್ಲಿ ಆ ಯ್ಕೆ ಆದವುಗಳನ್ನು ರಾಜ್ಯಮಟ್ಟದಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗುತ್ತದೆ ಸುಮಾರು ಹತ್ತು ದಿನಗಳ ತರಬೇತಿಯನ್ನು ನಿಡಲಾಗುತ್ತದೆ ಯುವ ಪೀಳಿಗೆ ಪ್ರತಿಭೆ ಇದ್ದರು ಪ್ರದರ್ಶನಕ್ಕೆ ಅವಕಾಶವಿಲ್ಲದೆ ಮುರುಟಿ ಹೋಗಬಾರದು ನಮ್ಮ ಹೆಮ್ಮೆಯ ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆಗೆ ದಾಟಿಸಿ ನಮ್ಮ ಕಲೆಯನ್ನು ಉಳಿಸುವುದರ ಜೊತೆಗೆ ಎಲ್ಲಾ ವ್ಯಕ್ತಿಗಳಿಗೂ ತಲುಪುವ ವ್ಯವಸ್ಥೆ ಮಾಡಲಾಗುತ್ತದೆ ತನ್ಮೂಲಕ ಉತ್ತಮ ನಾಗರೀಕ ಸಮಾಜದ ನಿರ್ಮಾಣಕ್ಕೆ ಮುಂದಾಗುತ್ತಿದೆ ಎಂದು ಹೇಳಿದರು.
ಆಶಾಕಿರಣ ಟ್ರಸ್ಟ್ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿದೆ ಅಂಧಮಕ್ಕಳಿಗೆ ಬೆಳಕನ್ನು ನೀಡುವ ಕೆಲಸ ಮಾಡುತ್ತಿದೆ. ಸಮಾಜದ ಜವಾಬ್ದಾರಿಯನ್ನು ಸಮರ್ಥವಾಗಿ ಮಾಡುತ್ತಿದೆ ಎಲ್ಲವನ್ನೂ ಸರಕಾರ ಮಾಡಲು ಸಾಧ್ಯವಾಗುವುದಿಲ್ಲ ಸಮಾಜದ ಸಂಘಟನೆಗಳು ಒಳ್ಳೆಯ ಕೆಲಸಕ್ಕೆ ಮುಂದಾದರೆ ಸರಕಾರ
ಕೈಜೋಡಿಸುತ್ತದೆ ಎಂದು ಹೇಳಿದರು.
ರಜತಮಹೋತ್ಸವ ಸಭಾಭವನದ ಶಂಕುಸ್ಥಾಪನೆ ನಡೆಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಒಳ್ಳೆಯದನ್ನು ಮಾಡಿ ಎಂದು ಹೇಳುವುದು ಸುಲಭ ಆದರೆ ಅದನ್ನು ಆಚರಣೆಗೆ ತರುವುದು ಕಷ್ಟ ಬಹಳಷ್ಟು ಜನರಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎನ್ನುವ ಹಂಬಲ ಇರುತ್ತದೆ ಕೆಲವರು ವಯಕ್ತಿಕವಾಗಿ ಒಳ್ಳಯೆ ಕೆಲಸಗಳನ್ನು ಮಾಡುತ್ತಿದ್ದಾರೆ ಆದರೆ ಇಂತಹ ವ್ಯಕ್ತಿಗಳ ಸಂಘಟನೆಯಾದರೆ ಸಾಮಾಜಿಕ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು
ಅಧ್ಯಕ್ಷತೆವಹಿಸಿದ್ದ ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ.ರವಿ ಹೆಗಡೆ ಮಾತನಾಡಿ,ಕ್ರೀಯಾಶೀಲ ಬುದ್ದಿ ಪ್ರಾಮಾಣಿಕ ಪ್ರಯತ್ನ ಇರುವಲ್ಲಿ ಸಾಮಾಜಿಕ ಚಟುವಟಿಕೆಗಳು ನಡೆಯುತ್ತದೆ ಇಂತಹ ಪ್ರಯತ್ನ ಆಶಾಕಿರಣ ಟ್ರಸ್ಟ್ ಅಂಧರ ಶಾಲೆ ನಡೆಸುವುದರ ಜೊತೆಗೆ ವಿಶೇಷ ಚೇತನರಿಗೆ,ಮಹಿಳೆಯರಿಗೆ ಅನುಕೂಲವಾಗುವ ಹಲವು ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತಿದೆ ಇಲ್ಲಿಯ ಭಾಷಾಪ್ರಯೋಗಾಲಯ ದಕ್ಷಣಭಾರತದಲ್ಲೆ ಪ್ರಥಮವಾಗಿದೆ ಇದರ ಉಪಯೋಗ ಪಡೆದ ಇಲ್ಲಿಯ ಅಂಧವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಚಲನಚಿತ್ರ ನಟ ಡಾ.ಶ್ರೀನಾಥ,ನಿರ್ನಳ್ಳಿ ರಾಮಕೃಷ್ಣ,ಕವಿ ಬಿ.ಆರ್.ಲಕ್ಷ್ಮಣರಾವ್,ಟ್ರಸ್ಟ್ ಉಪಾಧ್ಯಕ್ಷ ಸಿ.ಎಸ್.ಗೌಡರ್ ನಾಗರಾಜ ಧೋಶೆಟ್ಟಿ ಉಪಸ್ಥಿತರಿದ್ದರು.
ಟ್ರಸ್ಟ್ನ ಸದಸ್ಯ ಜಿ.ಜಿ.ಹೆಗಡೆ ಬಾಳಗೋಡು ನಿರೂಪಣೆ ಮಾಡಿದರು.ವಿದ್ಯಾರ್ಥಿ ನಾಗರಾಜ ಮರಾಠೆ ಸ್ವಾಗತಿಸಿದರು. ವಿದ್ಯಾರ್ಥಿ-ವಿದ್ಯಾಥಿನಿಯರು ಪ್ರಾರ್ಥನೆ ಹಾಡಿದರು.
ಇದೇಸಂಧರ್ಭದಲ್ಲಿ ಟ್ರಸ್ಟ್ನ ಗೌರವಕಾರ್ಯದರ್ಶಿ ಕೇಶವ ಶಾನಭಾಗ ದಂಪತಿಗಳನ್ನು ಇಲ್ಲಿಯ ಹಳೆಯವಿದ್ಯಾರ್ಥಿ ಕ್ಲಾಟ್ ಪರೀಕ್ಷೆಯಲ್ಲಿ ಉತ್ತೀರ್ಣನಾದ ಲಕ್ಷ್ಮೀಶಮರಾಠೆಯವರನ್ನು ಸನ್ಮಾನಿಸಲಾಯಿತು.
#######
ಇದೇ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿ,ಒಂದು ಕಾಲದಲ್ಲಿ ಅಂಗವೈಕಲ್ಯವನ್ನು, ಅಂಧತ್ವವನ್ನು ಶಾಪವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದು ಅಂತಹ ಪರಿಸ್ಥಿತಿ ಕಾಣುತ್ತಿಲ್ಲ. ವಿಕಲಚೇತನರ ಪಂಚೇಂದ್ರಿಯಗಳಲ್ಲಿ ಒಂದು ಇಂದ್ರಿಯ ಶಕ್ತಿಹೀನವಾಗಿದ್ದರೆ ಉಳಿದೆಲ್ಲಾ ಇಂದ್ರಿಯಗಳೂ ಬಲಿಷ್ಠವಾಗಿರುತ್ತವೆ.ಉತ್ತರಕನ್ನಡ, ಕರಾವಳಿ, ಮಲೆನಾಡಿನ ಜನರಲ್ಲಿ ಹುಟ್ಟಿನಿಂದಲೇ ಕಲೆ ಸಂಸ್ಕೃತಿಯ ಕಾಳಜಿ ಅಧಿಕವಾಗಿರುತ್ತದೆ. ಉತ್ತರಕನ್ನಡದವರು ಎಲ್ಲಿದ್ದರೂ ನವರಸಗಳನ್ನೊಳಗೊಂಡ ಅಪ್ರತಿಮ ಕಲೆ ಯಕ್ಷಗಾನವನ್ನು ಮರೆಯುವುದಿಲ್ಲ. ಕವಿ ಜಗತ್ತಿಗೆ ಪ್ರೀತಿಯನ್ನು ಮಾತ್ರ ಕೊಡಬಲ್ಲ. ಕವಿ ಹೇಳಿದ್ದು ಕೇಳುಗರ ಮನಕ್ಕೆ ಮುಟ್ಟಿದರೆ ಸಾರ್ಥಕತೆ ಬರುತ್ತದೆ ಎಂದ ಅವರು ಸ್ವರಚಿತ “ಸುಬ್ಬಾ ಭಟ್ಟರ ಮಗಳೇ” ಗೀತೆಯನ್ನು ಹಾಡಿದರು.
ಮುಖ್ಯ ಅತಿಥಿ ನ್ಯಾಯಾಧೀಶ ತಿಮ್ಮಯ್ಯ ಜಿ.ಮಾತನಾಡಿ ವಿಕಲಚೇತನರಲ್ಲಿ ನಾವು ಯಾರಿಗಿಂತಲೂ ಕಡಿಮೆಯಲ್ಲ ಎಂಬ ಕಿಚ್ಚಿರಬೇಕು. ಸಾಧನೆ ಮಾಡುವ ತುಡಿತವಿದ್ದವರು ವಿಕಲಾಂಗರಲ್ಲ. ಜಾತಿವಾದ, ಕೋಮುವಾದ, ಸಮಾಜಘಾತುಕ ಕಾರ್ಯಮಾಡುವವರು ನಿಜವಾಗಿ ಅಂಧರು. ಸಂವಿಧಾನ ಎಲ್ಲರಿಗೂ ವಿಶೇಷ ಹಕ್ಕು ಕರ್ತವ್ಯವನ್ನು ನೀಡಿದೆ ಎಂದು ಹೇಳಿ
ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಆಶಾಕಿರಣ ಟ್ರಸ್ಟಿನ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನಮನೆ, ಮಕ್ಕಳ ಸಾಧನೆಯಲ್ಲಿ ನಮ್ಮ ಸೇವೆ ಸಾರ್ಥಕತೆ ಪಡೆದಿದೆ. ಬೇರೆಯವರ ನೋವು ನಮಗೆ ಅರ್ಥವಾದರೆ ನಾವು ಮನುಷ್ಯರಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಾಧಕರಾದ ಜೋಯಲ್ ಫರ್ನಾಂಡಿಸ್, ಶ್ರೀಧರ ತಿಮ್ಮಪ್ಪ ಹರಗಿ, ವಿದೂಷಿ ವಸುಧಾ ಶರ್ಮ ಅವರುಗಳನ್ನು ಸನ್ಮಾನಿಸಲಾಯಿತು. ಆಶಾಕಿರಣ ಟ್ರಸ್ಟಿನ ಉಪಾಧ್ಯಕ್ಷ ಸಿ.ಎಸ್.ಗೌಡರ್, ಖಜಾಂಚಿ ನಾಗರಾಜ ದೋಶೆಟ್ಟಿ, ಟ್ರಸ್ಟಿ ಜಿ.ಜಿ.ಹೆಗಡೆ ಬಾಳಗೋಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಧಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ
ಅನೂಷಾ ಸ್ವಾಗತಿಸಿದಳು. ಶಿಕ್ಷಕಿ ಲತಾ ಮಡಿವಾಳ ನಿರ್ವಹಿಸಿದರು.ಮಧುರಾ ವಂದಿಸಿದಳು.