ಆದ್ಯೋತ್ ಸುದ್ದಿನಿಧಿ
ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ಕಾರವಾರದಲ್ಲಿ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ಮಾತನಾಡಿ,
ಈಡೀ ಕರ್ನಾಟಕವನ್ನು ಸುತ್ತಾಡಿದ್ದು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ.150ಕ್ಕೂ ಹೆಚ್ಚು ಸ್ಥಾನದಲ್ಲಿ ನಾವು ಗೆಲುವು ಸಾಧಿಸಲಿದ್ದೆವೆ. ದ್ವೇಷದ ರಾಜಕಾರಣವನ್ನು ಮಾಡುತ್ತಿರುವ ಕಾಂಗ್ರೆಸ್ ಮುಸ್ಲಿಂರಿಗೆ ಇಷ್ಟವಿಲ್ಲದಿದ್ದರೂ ಟಿಪ್ಪುಜಯಂತಿ ಮಾಡುವ ಮೂಲಕ ಹಿಂದೂ- ಮುಸ್ಲಿಂರನ್ನು ಒಡೆಯುವ ಕೆಲಸ ಮಾಡಿದೆ.ಪಿ ಎಪ ಐ ನ ಎರಡು ಸಾವಿರ ಕಾರ್ಯಕರ್ತರನ್ನ ಬಿಡುಗಡೆಗೊಳಿಸಿದವರು ಸಿದ್ರಾಮಣ್ಣ. ಅತಿಹೆಚ್ಚು ಹಿಂದೂಗಳ ಹತ್ಯೆಯಾಗಿರುವುದು ಸಿದ್ದರಾಮಯ್ಯ ಕಾಲದಲ್ಲಿ. ಅಂದು ಅವರು ಯಾರ ಮನೆಗೂ ಹೋಗಿಲ್ಲ, ಯಾವ ಪೊಲೀಸರನ್ನೂ ಕೇಳಿಲ್ಲ, ಯಾರ ಬಂಧನವೂ ಆಗಿಲ್ಲ.
ಶೃಂಗೇರಿಯಲ್ಲಿ ಗೋಹಂತಕನೊಬ್ಬನ ಎನ್ ಕೌಂಟರ್ ಆದಾಗ ಅವರ ಮನೆಗೆ 10 ಲಕ್ಷ ಕೊಟ್ಟಿದ್ದರು. ಆ ಮೂಲಕ ಜನರ ಭಾವನೆಗಳನ್ನ ಕೆರಳಿಸಿ ಮತೀಯ ಗಲಭೆಗಳಿಗೆ ಅವಕಾಶ ಮಾಡಿಕೊಟ್ಟರು. ರಕ್ತಸಿಕ್ತ ಆಡಳಿತ ನಡೆಸಿದ ಉದಾಹರಣೆಯಿದ್ದರೆ ಅದು ಸಿದ್ರಾಮಣ್ಣ. ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ನಲ್ಲಿ ಸಿದ್ದರಾಮಯ್ಯ, ಡಿಕೆಶಿಯವರು, ಕಾಂಗ್ರೆಸ್ ನವರು ಬೆಂಬಲವಾಗಿ ನಿಂತಿದ್ದರು. ಇವರು ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತವರು. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲಿ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದರು. ಇವತ್ತಿಗೂ ಕಾಂಗ್ರೆಸ್ ಅವರನ್ನ ಉಚ್ಛಾಟನೆ ಮಾಡಿಲ್ಲ. ಪಿಎಫ್ಐ, ಕೆಎಫ್ ಡಿಯನ್ನ ನಿಷೇಧ ಮಾಡಿದರೂ ಪ್ರಶ್ನಿಸುತ್ತಾರೆ. ಇವರದೇ ಶಾಸಕನ ಮೇಲೆ ಚೂರಿ ಇರಿತವಾಗಿತ್ತು ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಜವಾಬ್ದಾರಿ ಇಲ್ಲದ ಮನುಷ್ಯ ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡುವುದು ಅವರಿಗೆ ಶೋಭೆಯಲ್ಲ.ಅವರ ರಕ್ತದಲ್ಲೇ ಬ್ರಾಹ್ಮಣ ವಿರೋಧ ಇದೆ.ರಾಮಕೃಷ್ಣ ಹೆಗಡೆಯವರ ಕಾಲದಿಂದಲೇ ದಾಳಿ ಮಾಡುತ್ತಾ ಬಂದವರು. ಈಗ ಬಾಯಲ್ಲಿ ನೇರವಾಗಿ ಹೇಳಿದ್ದಾರೆ.ಮೂರು ಜಿಲ್ಲೆಗಳನ್ನಿಟ್ಟುಕೊಂಡು ಇಡೀ ರಾಜ್ಯ ಗೆಲ್ಲುವ ಕನಸು ಕಾಣುತ್ತಾರೆ. ಈ ಬಾರಿ 20 ಸ್ಥಾನ ಗೆಲ್ಲುವುದೂ ಕಷ್ಟ.ಉಕ ಜಿಲ್ಲೆಯಲ್ಲಿ ಈಗ 5 ಕ್ಷೇತ್ರದಲ್ಲಿ ನಾವು ಇದ್ದೆವೆ ಬರುವ ಚುನಾವಣೆಯಲ್ಲಿ ಹಳಿಯಾಳ ಸೇರಿದಂತೆ ಎಲ್ಲಾ 6 ಕ್ಷೇತ್ರವನ್ನು ನಾವು ಗೆಲ್ಲಲಿದ್ದೆವೆ ಎಂದು ಹೇಳಿದರು