ಆದ್ಯೋತ್ ಸುದ್ದಿನಿಧಿ:
ವಸತಿಯ ಆಸರೆ,ಆರೋಗ್ಯ ಸಂಪತ್ತು,ಶಿಕ್ಷಣವೇ ಆಧುನಿಕ ಶಕ್ತಿ,ರೈತ ಚೈತನ್ಯ,ಯುವ ನವ ಮಾರ್ಗ ಹಾಗೂ ಮಹಿಳಾ ಸಬಲೀಕರಣ ಎಂಬ ಐದು ಯೋಜನೆಯ ಉದ್ದೇಶದ ಬಗ್ಗೆ ಜನರಿಗೆ ತಿಳಿಸಲು ಹಮ್ಮಿಕೊಂಡಿರುವ ಜೆಡಿಎಸ್ ನಾಯಕ
ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ.
ಪ್ರಸಿದ್ದ ಗೋಕರ್ಣ ಕ್ಷೇತ್ರದಿಂದ ಪಂಚರತ್ನ ಯಾತ್ರೆ ಪ್ರಾರಂಭಿಸಿದ
ಕುಮಾರಸ್ವಾಮಿ ಮಾತನಾಡಿ,ನನ್ನನ್ನು ಬ್ರಾಹ್ಮಣ ವಿರೋಧಿ,ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ ಆದರೆ ರಾಜ್ಯದ ಜನತೆಗೆ ಕುಮಾರಸ್ವಾಮಿ ಏನು ಎನ್ನುವುದು ತಿಳಿದಿದೆ.ಜೆಡಿಎಸ್ 20 ಸ್ಥಾನ ಗೆಲ್ಲುವುದು ಕಷ್ಟ ಎಂದು ನಳಿನಕುಮಾರ ಕಟೀಲು ಭವಿಷ್ಯ ನುಡಿಯುತ್ತಾರೆ ಆದರೆ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆಯಲಿದೆ ಉಕ ಜಿಲ್ಲೆಯಲ್ಲಿ ಎರಡು ಸ್ಥಾನಗಳನ್ನು ಗೆಲ್ಲಲಿದ್ದೆವೆ.ಚುನಾವಣೆಯ ನಂತರ ಕಟೀಲು ಜ್ಯೊತೀಷ್ಯ ಹೇಳಲು ಹೋಗುತ್ತಾರೆ.
ರಾಮಕೃಷ್ಣ ಹೆಗಡೆಯವರನ್ನು ಮುಖ್ಯಮಂತ್ರಿ ಮಾಡಿದ್ದು ದೇವೆಗೌಡರು ನಳಿನಕುಮಾರ ಕಟಿಲರಿಗೆ ರಾಜಕೀಯ ಗೊತ್ತಿಲ್ಲ ಕಟಿಲು ಹೆಸರನ್ನು ಪಿಟಿಲು ಅಂತಾ ಹೆಸರು ಇಟ್ಟುಕೊಳ್ಳಲಿ ಅವರಿಂದ ಯಾವುದೇ ಪ್ರಮಾಣ ಪತ್ರ ಪಡೆಯುವ ಅವಶ್ಯಕತೆ ನಮಗೆ ಇಲ್ಲ ಈ ನಾಡಿನ ಬಡ ಜನರ ಏಳಿಗೆ ಕುರಿತು ಪಂಚರತ್ನ ಯೋಜನೆಯಲ್ಲಿ ರೂಪಿಸುತ್ತೇವೆ. ಧರ್ಮ ಪಾಲನೆ ಮಾಡುವುದನ್ನು ಬಿ.ಜೆ.ಪಿ ಯಿಂದ ಕಲಿಯುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಗಾಂಧೀಜಿಯನ್ನು ಕೊಂದ ಸಮುದಾಯಕ್ಕೆ ಸೇರಿದ ಬ್ರಾಹ್ಮಣರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬಾರದು ಎಂದು ಹೇಳಿರುವ ಬಗ್ಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ ಖಂಡಿಸಿದೆ ಈ ಬಗ್ಗೆ ಇಲ್ಲಿಯೇ ಸ್ಪಷ್ಟನೆ ನೀಡಬೇಕು ಎಂದು ಗೋಕರ್ಣದ ಪುರೋಹಿತ ನರಸಿಂಹ ಉಪಾಧ್ಯಾಯ ಆಗ್ರಹಿಸಿದರು.
“ಕುಮಾರ ಸ್ವಾಮಿಯವರೆ ದೇವೆಗೌಡರಿಗೆ ಹಿಂದೆ ಸನ್ಮಾನ ಮಾಡಿದ್ದೇವೆ ನಿಮ್ಮ ಆಡಳಿತ ಖುಷಿ ನೀಡಿದೆ ಆದರೆ ಮೊನ್ನೆ ನೀವು ನೀಡಿದ ಹೇಳಿಕೆ ಬೇಸರ ತಂದಿದೆ. ಅದಕ್ಕೆ ಇಲ್ಲೆ ಸ್ಪಷ್ಟೀಕರಣ ನೀಡಬೇಕು”
ನಾನು ಸಂಪೂರ್ಣ ಬ್ರಾಹ್ಮಣ ಸಮುದಾಯ ಉದ್ದೇಶಿಸಿ ಹೇಳಿದ ಮಾತಲ್ಲಾ ಯಾರ ಬಗ್ಗೆ ಹೇಳಬೇಕೋ ಅವರನ್ನೇ ಉದ್ದೇಶಿಸಿ ಹೇಳಿದ್ದೇನೆ ಬಿಜೆಪಿಯವರಿಗೆ ನನ್ನ ಮಾತನ್ನು ಅರಗಿಸಿಕೊಳ್ಳಲು ತಿಂಗಳುಗಳೇ ಬೇಕು ಬ್ರಾಹ್ಮಣ ಮಹಸಭಾ ಸಮಾಜಕ್ಕೆ ಬೆಂಗಳೂರಿನಲ್ಲಿ 8 ಕೋಟಿ ಬೆಲೆ ಬಾಳುವ ಜಾಗ ಕೊಟ್ಟವನು ನಾನು.ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಎರಡನೇ ಬಾರಿ ಮುಖ್ಯಮಂತ್ರಿ ಆದಾಗ 25 ಕೋಟಿ ರೂ.ನೀಡಿದ್ದೇನೆ ಬಿ.ಜೆ.ಪಿ ಸರಕಾರ ಈ ಸಮುದಾಯಕ್ಕೆ ಏನು ನೀಡಿದೆ ಹೇಳಲಿ ನಮಗೆ ಸಾವರ್ಕರ್ ಮನಸ್ಥಿತಿ ಬೇಡ ಹಿಂದೆ ಶೃಂಗೇರಿ ಚಂದ್ರಮೌಳೇಶ್ವರ ದೇವಸ್ಥಾನ ಖಾಲಿ ಮಾಡಿಸಿದ ಸಂಸ್ಕೃತಿ ಬೇಡ ಬ್ರಾಹ್ಮಣರೂ ಸೇರಿದಂತೆ ಎಲ್ಲರ ಏಳಿಗೆ ಬಯಸುವವನು ನಾನು ಎಂದು ಸ್ಪಷ್ಟೀಕರಣ ನೀಡಿದರು.
ಕುಮಟಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ,ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಸೇರಿದಂತೆ ಜೆಡಿಎಸ್ ಹಲವು ನಾಯಕರು ಉಪಸ್ಥಿತರಿದ್ದರು.