ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಟಿಎಂಎಸ್ ದಿಂದ ಎಪಿಎಂಸಿ ಆವಾರದಲ್ಲಿ ಕಿರಾಣಿ ಅಂಗಡಿ ಸಮೀಪ ಹಣ್ಣು ತರಕಾರಿ ಮಾರಾಟ ವಿಭಾಗವನ್ನು ಆರಂಭಿಸಲಾಯಿತು.
ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಂಗಡಿಯನ್ನು ಉದ್ಘಾಟಿಸಿ, ಈ ವಿಭಾಗವು ಗ್ರಾಹಕರಿಗೆ ವಿಶೇಷವಾಗಿ ಹಳ್ಳಿಯಿಂದ ಬಂದಿರುವ ಸದಸ್ಯ ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಲಿದೆ. ಗುಣಮಟ್ಟ, ಶುಚಿತ್ವವನ್ನು ಕಾಪಾಡಿಕೊಂಡು ಮಾರಾಟದ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ. ಜಿ. ನಾಯ್ಕ ಹಾದ್ರಿಮನೆ, ನಿರ್ದೇಶಕರುಗಳಾದ ಕೆ.ಕೆ. ನಾಯ್ಕ ಸುಂಕತ್ತಿ, ಜಿ.ಎಂ. ಭಟ್ಟ ಕಾಜಿನಮನೆ, ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ, ಉಪವ್ಯವಸ್ಥಾಪಕ ಪ್ರಸನ್ನ ಭಟ್ಟ ಕೆರೆಹೊಂಡ, ಹಾಗೂ ಜಿ. ಜಿ. ಹೆಗಡೆ ಬಾಳಗೋಡ, ಎಂ. ಎಸ್. ಭಟ್ಟ ರವೀಂದ್ರನಗರರವರು ಉಪಸ್ಥಿತರಿದ್ದರು.
ಡಿ.ಪಿ. ಭಟ್ಟ ಹಣಜಿಬೈಲು ಪೂಜಾ ಕಾರ್ಯ ನೆರವೇರಿಸಿದರು. ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.