ಸಿದ್ದಾಪುರದಲ್ಲಿ ಫೆ.14ರಂದು ಎಲಬು,ಕೀಲು,ತಪಾಸಣಾ ಶಿಬಿರ

ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಲಯನ್ಸ್ ಬಾಲಭವನದಲ್ಲಿ ಫೆ.14 ರಂದು
ಸ್ಥಳೀಯ ನಿವೃತ್ತ ನೌಕರರ ಸಂಘ,ಲಯನ್ಸ ಕ್ಲಬ್ ಹಾಗೂ ಟಿ.ಎಂ.ಎಸ್.ಸಹಯೋಗದಲ್ಲಿ ಉಚಿತ ಎಲುವು ಮತ್ತು ಕೀಲು ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಘಟಕರಾದ ಸಿ.ಎಸ್.ಗೌಡರ್ ತಿಳಿಸಿದ್ದಾರೆ

ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.
ಮಂಗಳೂರು ದೇರಳಕಟ್ಟೆಯ ಕೆ.ಎಸ್.ಹೆಗಡೆ ಆಸ್ಪತ್ರೆಯ ನುರಿತ ವೈದ್ಯರುಗಳಾದ ಡಾ|ವಿಕ್ರಮ ಶೆಟ್ಟಿ, ಡಾ| ಸಿದ್ಧಾರ್ಥ ಶೆಟ್ಟಿ, ಡಾ| ವಿನಯಕುಮಾರ್ ಹಾಗೂ ಡಾ| ಪ್ರಥ್ವಿ ಕೆ.ಪಿ.ತಪಾಸಣೆ ನಡೆಸುವರು. ಫೆ.14ರ ಮಧ್ಯಾಹ್ನ 2ರಿಂದ 5ರವರೆಗೆ ತಪಾಸಣಾ ಶಿಬಿರ ನಡೆಯಲಿದ್ದು ಹಿಂದಿನ ಹಾಗೂ ಹೊಸ ರೋಗಿಗಳ ತಪಾಸಣೆ ನಡೆಸಲಾಗುವದು. ಅಲ್ಲದೇ ಯಶಸ್ವಿನಿ ಯೋಜನೆಯ ಕುರಿತು ವಿವರವಾದ ಮಾಹಿತಿಯನ್ನು ನೀಡುವರು. ಹೆಲ್ತ ಕಾರ್ಡ ನೋಂದಾವಣೆಯನ್ನು ಮಾಡಲಾಗುವದು. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಲಯನ್ಸ ಕ್ಲಬ್ ಅಧ್ಯಕ್ಷ ಆರ್.ಎಂ.ಪಾಟೀಲ, ನಿವೃತ್ತ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಎನ್.ವಿ.ಹೆಗಡೆ, ಎ.ಕೆ.ನಾಯ್ಕ, ವಾಸುದೇವ ಶೇಟ್ ಉಪಸ್ಥಿತರಿದ್ದರು.
######
ಸಿದ್ದಾಪುರ ಹಲಸಗಾರಿನಲ್ಲಿ ಕಬ್ಬಡಿ ಪಂದ್ಯಾವಳಿ
ಸಿದ್ದಾಪುರ ತಾಲೂಕಿನ ಹಲಸಗಾರಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯನ್ನು ಶ್ರೀಪಾದ ಹೆಗಡೆ ಕಡವೆ ಉದ್ಘಾಟಿಸಿದರು.
ತಾಲೂಕಿನ ಹಲಸಗಾರಿನ ಭೂತೇಶ್ವರ ಗೆಳೆಯರ ಬಳಗ ಹಾಗೂ ಊರವ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಮ್ಯಾಟ್ ಮಾದರಿಯ ಹೊನಲು ಬೆಳಕಿನ ಸೂರ್ಯಟ್ರೋಪಿ ಕಬಡ್ಡಿ ಪಂದ್ಯಾವಳಿಯಲ್ಲಿ ಕಾನಸೂರು ಸಮೀಪದ ಮಲೇನಳ್ಳಿ ತಂಡ ಪ್ರಥಮ ಸ್ಥಾನ ಹಾಗೂ ಕೋಲಸಿರ್ಸಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಮೂರು ಮತ್ತು ನಾಲ್ಕನೇ ಸ್ಥಾನವನ್ನು ಹಲಸಗಾರ ಹಾಗೂ ಶಿರಳಗಿ ಸಮೀಪದ ಅಂದಳ್ಳಿ ತಂಡ ತಮ್ಮದಾಗಿಸಿಕೊಂಡಿದೆ. ಪಂದ್ಯಾವಳಿಯಲ್ಲಿ ೨೪ತಂಡಗಳು ಪಾಲ್ಗೊಂಡಿದ್ದವು.
ಪಂದ್ಯಾವಳಿಯನ್ನು ಶ್ರೀಪಾದ ರಾಮಕೃಷ್ಣ ಹೆಗಡೆ ಕಡವೆ ಉದ್ಘಾಟಿಸಿದರು. ಕ್ರೀಡಾಂಗಣವನ್ನು ಕೋಲಸಿರ್ಸಿ ಗ್ರಾಪಂ ಉಪಾಧ್ಯಕ್ಷ ವಿನಾಯಕ ಕೆ.ಆರ್.ಉದ್ಘಾಟಿಸಿದರು. ಗೌರೀಶ ಎಂ.ನಾಯ್ಕ ಹಲಸಗಾರ ಅಧ್ಯಕ್ಷತೆವಹಿಸಿದ್ರು. ಹಾರ್ಸಿಕಟ್ಟಾ ಗ್ರಾಪಂ ಸದಸ್ಯರಾದ ಅನಂತ ಹೆಗಡೆ ಹೊಸಗದ್ದೆ, ಅಶೋಕ ನಾಯ್ಕ ಹಾರ್ಸಿಕಟ್ಟಾ, ಕೋಲಸಿರ್ಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಂಜಪ್ಪ ಎಂ.ಜಿ, ನಿವೃತ್ತ ದೈಹಿಕ ಶಿಕ್ಷಕ ಕೆ.ಟಿ.ನಾಯ್ಕ ಹಳಿಯಾಳ, ಅಶೋಕ ಎಂ.ನಾಯ್ಕ ಹಳಿಯಾಳ, ಮಂಜುನಾಥ ಹೆಗಡೆ ಕಲ್ಮನೆ, ಶಿಕ್ಷಕ ಅರವಿಂದ ನಾಯ್ಕ, ಲಕ್ಷö್ಮಣ ರಾಮ ನಾಯ್ಕ, ಮಂಜುನಾಥ ಇತರರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಯೋದ ದಿನೇಶ ಗಣಪತಿ ನಾಯ್ಕ ಹಲಸಗಾರ ಅವರನ್ನು ಮಂಜುನಾಥ ನಾಯ್ಕ ಹಲಸಗಾರ ಅವರು ಗೌರವಿಸಿದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಪೂರ್ವದಲ್ಲಿ ಹುತ್ಗಾರ ಸಕಿಪ್ರಾ ಶಾಲೆಯ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.

About the author

Adyot

Leave a Comment