ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಸ್ಥಳೀಯ ನಿವೃತ್ತ ನೌಕರರ ಸಂಘ,ಲಯನ್ಸ್ ಸಂಸ್ಥೆ,ಟಿಎಂಎಸ್ ಸಹಯೋಗದಲ್ಲಿ ಮಂಗಳೂರು ದೇರಳೆಕಟ್ಟೆಯ ಕೆ.ಎಸ್.ಹೆಗಡೆ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಎಲಬು ಮತ್ತು ಕೀಲು ಪರೀಕ್ಷಾ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು
ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದರು. ಮಂಗಳೂರು ದೇರಳಕಟ್ಟೆಯ ಕೆ.ಎಸ್.ಹೆಗಡೆ ಆಸ್ಪತ್ರೆಯ ನುರಿತ ತಜ್ಞವೈದ್ಯರಾದ ಡಾ.ವಿಕ್ರಮ ಶೆಟ್ಟಿ,ಡಾ.ಸಿದ್ದಾರ್ಥ ಶೆಟ್ಟಿ,ಡಾ.ವಿನಯ,ಡಾ.ಪೃಥ್ವಿ ರೋಗಿಗಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ,ಸಲಹೆ,ಸೂಚನೆ ನೀಡಿದರು.
ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ವಿಕ್ರಮ ಶೆಟ್ಟಿ ಮಾತನಾಡಿ,ಈ ಜಿಲ್ಲೆಯಿಂದ ಸಾಕಷ್ಟು ರೋಗಿಗಳು ನಮ್ಮ ಆಸ್ಪತ್ರೆಗೆ ಬರುತ್ತಾರೆ ಕೆಲವರು ಹಣಕಾಸಿನ ತೊಂದೆಯುಳ್ಳವರಾಗಿರುತ್ತಾರೆ ಅಂತಹವರಿಗೆ ಈ ರೀತಿಯ ಶಿಬಿರ ಮಾಡುವುದರಿಂದ ಪ್ರಯೋಜನವಾಗುತ್ತದೆ ಸರಕಾರ ಯಶಸ್ವಿನಿ ಯೋಜನೆಯನ್ನು ಪುನಃ ಜಾರಿಗೆ ತಂದಿದೆ ಇದರಿಂದ ಸಾಕಷ್ಟು ಅನುಕೂಲವಾಗಿದ್ದು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪತ್ರ ತರುವ ತೊಂದರೆ ಈಗ ಇಲ್ಲವಾಗಿದೆ. ಸಹಕಾರಿ ಸಂಘದ ಪತ್ರ,ಆದಾರ ಕಾರ್ಡ,ಹಣ ಪಾವತಿಸಿದ ರಸಿತಿ ಇವಿಷ್ಟು ತಂದರೆ ಸರಕಾರದ ಸೌಲಭ್ಯದ ಮೂಲಕ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನಿಮಗೆ ಸಿಗಲಿದೆ. ಎಂದು ಹೇಳಿದರು.
ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಲೆಸರ ಮಾತನಾಡಿ, ಕಲಿಯುಗದಲ್ಲಿ ವೈದ್ಯರೇ ದೇವರು ಎಂದು ಹೇಳುತ್ತಾರೆ ಅದೇ ರೀತಿ ಸಾಕಷ್ಟು ವೈದ್ಯರು ರೋಗಿಗಳ ಬಗ್ಗೆ ಖಾಳಜಿವಹಿಸುತ್ತಾರೆ.ಕೆಎಸ್ಹೆಗಡೆ ಆಸ್ಪತ್ರೆಯಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಿಬಿರ ಏರ್ಪಡಿಸುವ ಮೂಲಕ ವೈದ್ಯಕೀಯವನ್ನು ಸಮಾಜಮುಖಿಯಾಗಿಸಿದ್ದಾರೆ ಎಂದು ಹೇಳಿದರು.
ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ,ಇಂದು ಬಡವರಿಗೆ ರೋಗ ಬಂದರೆ ಚಿಕಿತ್ಸೆ ದುಬಾರಿಯಾಗುತ್ತಿದೆ ಇಂತಹ ಸಮಯದಲ್ಲಿ ಕೆಎಸ್ಹೆಗಡೆ ಆಸ್ಪತ್ರೆಯ ತಜ್ಞ ವೈದ್ಯರು ಇಂತಹ ಶಿಬಿರವನ್ನು ಮಾಡುವ ಮೂಲಕ ನಾವು ಬಡವರ ಪರವಾಗಿದ್ದೆವೆ ಎಂದು ತೋರಿಸಿದ್ದಾರೆ ಅವರ ಸೇವಾ ಕಾರ್ಯಕ್ಕೆ ನಮ್ಮ ತಾಲೂಕಿನ ಹಲವು ಸಂಸ್ಥೆಗಳು ಕೈಜೋಡಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಲಯನ್ಸ್ ಅಧ್ಯಕ್ಷ ಆರ.ಎಂ.ಪಾಟೀಲ ಮಾತನಾಡಿದರು. ವೇದಿಕೆಯಲ್ಲಿ ಡಾ.ಸಿದ್ದಾರ್ಥ ಶೆಟ್ಟಿ, ಟಿಎಂಎಸ್ ನಿರ್ದೇಶಕ ಜಿ.ಎಂ.ಭಟ್ಟ ಖಾಝಿನಮನೆ ಉಪಸ್ಥಿತರಿದ್ದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಪ್ರಾಸ್ತಾವಿಕ ಮಾತನಾಡಿ,ಕೆ.ಎಸ್.ಹೆಗಡೆ ಆಸ್ಪತ್ರೆಯ ವೈದ್ಯರಿಂದ ನಮ್ಮ ಭಾಗದ ಜನರಿಗೆ ಸಾಕಷ್ಟು ಪ್ರಯೋಜನವಾಗಿದೆ.ಅಲ್ಲಿಯ ವೈದ್ಯರ ಖಾಳಜಿ ಮೆಚ್ಚುವಂತಹದ್ದು ನಮ್ಮ ಭಾಗದಿಂದ ರೋಗಿಗಳು ಅಲ್ಲಿಗೆ ಬೆಳಿಗ್ಗೆ ಐದುಗಂಟೆಗೆ ಹೋಗಿ ತಲುಪಿರುತ್ತೆವೆ ಅಲ್ಲಿ ಪ್ರೇಶಪ್ ಆಗಲು ಕೋಣೆಯ ವ್ಯವಸ್ಥೆ ಇಲ್ಲ ದಯವಿಟ್ಟು ಇಲ್ಲಿ ಒಂದು ರೂಂ ವ್ಯವಸ್ಥೆ ಮಾಡಿ ಮಹಿಳೆಯರಿಗಂತೂ ಇದರಿಂದ ಬಹಳ ಅನುಕೂಲವಾಗುತ್ತದೆ ಎಂದು ಹೇಳಿದರು
ಡಾ.ವಿಕ್ರಮ ಶೆಟ್ಟಿ ಈಗಾಗಲೇ ಒಪಿಡಿ ವಿಸ್ತರಣೆ ಮಾಡಲಾಗುತ್ತಿದೆ ಇನ್ನು ಕೆಲವೇ ದಿನದಲ್ಲಿ ಪ್ರೆಶಪ್ ರೂಂ ಆಗುತ್ತದೆ ಎಂದು ಭರವಸೆ ನೀಡಿದರು.
ಲ.ಜಿ.ಜಿ.ಹೆಗಡೆ ಬಾಳಗೋಡು ನಿರೂಪಣೆ ಮಾಡಿದರು.