ಆದ್ಯೋತ್ ಸುದ್ದಿನಿಧಿ:
ಫ್ರಾನ್ಸ್ ದೇಶದಲ್ಲಿರುವ ಕನ್ನಡಿಗ ಸಮಾನಮನಸ್ಕ ಕನ್ನಡಿಗರು ರಚಿಸಿಕೊಂಡಿರುವ ಫ್ರಾನ್ಸ್ ಕನ್ನಡ ಬಳಗದವರು ಪ್ಯಾರೀಸ್ ನಲ್ಲಿ
ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
ಯಕ್ಷಗಾನಕಲೆಯನ್ನು ಯುರೋಪ್ ನಲ್ಲಿ ಪಸರಿಸುವ ಉದ್ದೇಶದಿಂದ ಯುರೋಪಿನಾದ್ಯಂತ ಯಕ್ಷಗಾನ ಪ್ರದರ್ಶನವನ್ನು ಕೊಡುತ್ತಾ ಬಂದಿರುವ ಜರ್ಮನಿಯ ಯಕ್ಷಮಿತ್ರರು ತಂಡದವರು
ಪ್ಯಾರೀಸ್ ನಲ್ಲಿ ಪ್ರಾನ್ಸ್ ಕನ್ನಡಬಳಗದವರು ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾರ್ತವೀರ್ಯಾರ್ಜುನ ಪ್ರಸಂಗದ ದೃಶ್ಯವನ್ನು ಪ್ರದರ್ಶಿಸಿದರು.
ಅಪೂರ್ವ ಬೆಳೆಯೂರು ಕಾರ್ತವೀರ್ಯನಾಗಿ ಹಾಗೂ ಮಧುಶ್ರೀ ದೇವರಾಜ್ ಸಖಿಯಾಗಿ ಉತ್ತಮವಾಗಿ ಅಭಿನಯಿಸಿದರು.
#####
#####
ಫ್ರಾನ್ಸ್ ಕನ್ನಡ ಬಳಗವು 2013 ಡಿಸಂಬರನಲ್ಲಿ ಸ್ಥಾಪನೆಯಾಗಿದ್ದು 2017ರಲ್ಲಿ ಫ್ರೆಂಚ್ ಸರ್ಕಾರದಿಂದ ಅಧಿಕೃತವಾಗಿ ನೋಂದಣಿ ಪಡೆದಿದೆ.
ಎಪ್.ಕೆ.ಬಿ. ಎಂದು ಕರೆಸಿಕೊಳ್ಳುವ ಪ್ರಾನ್ಸ್ ಕನ್ನಡ ಬಳಗದ ಮುಖ್ಯ ಉದ್ದೇಶ ಫ್ರಾನ್ಸ್ ನಲ್ಲಿ ನೆಲೆಸಿರುವ ಕನ್ನಡಿಗರನ್ನು ಹಾಗೂ ಕನ್ನಡ ಸಂಸ್ಕೃತಿ, ಕಲೆ ಮತ್ತು ಭಾಷೆಯಲ್ಲಿ ಆಸಕ್ತಿಯುಳ್ಳವರನ್ನು ಒಟ್ಟು ಸೇರಿಸಿ, ಸಾಂಸೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳ ಮೂಲಕ ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವುದು.
ಎಪ್.ಕೆ.ಬಿ.ಯು ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ಜೊತೆಗೆ ಕನ್ನಡ ದಿವಸ, ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಹಾಗು ಇನ್ನಿತಿರ ಹಬ್ಬಗಳ ಅಚರಣೆ ಮತ್ತು ಈ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇವೆಲ್ಲರ ಜೊತೆಗೆ, ಕನ್ನಡ ಸಿನಿಮಾಗಳನ್ನು ಕೂಡ ಫ್ರಾನ್ಸ್ ನಲ್ಲಿ ಪ್ರದರ್ಶಿಸುತ್ತಿದೆ.
ಫ್ರಾನ್ಸ್ ಕನ್ನಡ ಬಳಗದ ಹಾಲಿ ಅಧ್ಯಕ್ಷರು ಚಂದ್ರಶೇಖರ ವೆಂಕಟರಾಮಪ್ಪ,ಉಪಾಧ್ಯಕ್ಷರು ಮಲ್ಲಿಕಾರ್ಜುನ ಉಪಾಧ್ಯಕ್ಷರು,ಸಾಗರ ಉದಯಕುಮಾರ- ಕಾರ್ಯದರ್ಶಿ,ಕೃಷ್ಣ ಶಿವಲಿಂಗಯ್ಯ-ಖಜಾಂಚಿ
#####