ಬಿಜೆಪಿ ಹಿಂದುಳಿದವರ್ಗಗಳ ಸಮಾವೇಶ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಬಿಜೆಪಿ ಹಿಂದುಳಿದವರ್ಗಗಳ ಮೋರ್ಚಾ ಸಮಾವೇಶ ಮಂಗಳವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯ ಸಚೀವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ,ಕಳೆದ ಕೆಲವು ವರ್ಷಗಳಿಂದ ತಾಕತ್ತು ಉಳ್ಳ ಪ್ರದಾನಮಂತ್ರಿಗಳು ದೇಶವನ್ನು ಆಳುತ್ತಿದ್ದು ದೇಶದ ಜನರ ಬಹುದಿನದ ಕನಸಾದ ರಾಮಮಂದಿರ ನಿರ್ಮಾಣ,ಕಾಶ್ಮೀರದಲ್ಲಿ 370 ವಿಧಿ ರದ್ದತಿ,ಪೌರತ್ವ ಕಾಯ್ದೆಯ ಜಾರಿಯಂತಹ ಕ್ಲಿಷ್ಟ ಸಮಸ್ಯೆಗೆ ಪರಿಹಾರ ಸಿಗುತ್ತಿದೆ ರಾಮಮಂದಿರ ನಿರ್ಮಾಣಕ್ಕೆ ಮುಂದಾದರೆ,370ವಿಧಿ ರದ್ದು ಪಡಿಸಿದರೆ ರಕ್ತದ ಓಕುಳಿ ಹರಡುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳೊಬ್ಬರು ಹೇಳುತ್ತಿದ್ದರು ಆದರೆ ಇದೆರಡನ್ನು ನಮ್ಮ ಹೆಮ್ಮೆಯ ಪ್ರದಾನಿಗಳು ಮಾಡಿತೋರಿಸಿದ್ದಾರೆ ಆದರೆ ರಕ್ತದ ಓಕುಳಿ ಹರಡುವವರು ಕಾಣಿಸಲಿಲ್ಲ ಇದೇ ಮಾಜಿಮುಖ್ಯಮಂತ್ರಿಗಳು ಲಸಿಕೆ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿದರು ಆದರೆ ಎಲ್ಲರಿಗಿಂತ ಮೊದಲು ತಾವೇ ಹೋಗಿ ಲಸಿಕೆ ಹಾಕಿಸಿಕೊಂಡು ಬಂದರು ಇಂತಹವರ ಬಗ್ಗೆ ಜನರಿಗೆ ಗೊತ್ತಿದೆ. ಜಗತ್ತೆ ಅಚ್ಚರಿಪಡುವಂತೆ ನಾವು 100ಕೋಟಿ ಲಸಿಕೆ ನೀಡಿದ್ದೆವೆ. ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಾಗುತ್ತಿದೆ.ರೈತಸಮ್ಮಾನ ಯೋಜನೆ ರೈತರಿಗೆ ನೆರವಾದರೆ ಸಂಧ್ಯಾಸುರಕ್ಷಾ ಯೋಜನೆ ಎಲ್ಲಾವರ್ಗದ ವೃದ್ಧರಿಗೆ ವಯಸ್ಸಾದ ನಂತರ ನೆರವು ನೀಡುತ್ತದೆ ರೈತಮಕ್ಕಳಿಗೆ ಶಿಕ್ಷಣ ಯೋಜನೆಗೆ 2000ಕೋಟಿರೂ.ನೀಡಲಾಗಿದೆ ಸೈನಿಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಿದೆ ಒಟ್ಟಾರೆ ದೇಶ ಬಿಜೆಪಿಯ ಕೈಯಲ್ಲಿ ಸುರಕ್ಷಿತವಾಗಿದೆ ಎನ್ನುವುದು ಜನರಿಗೆ ಮನದಟ್ಟಾಗಿದೆ ಎಂದು
ಹೇಳಿದರು.

ಸಮಾಜದಲ್ಲಿ ಈಗಲೂ ಅಸ್ಪøಶ್ಯತೆ ನಡೆಯುತ್ತಿದೆ ಇದನ್ನು ತೊಡೆದುಹಾಕುವುದು ಬಿಜೆಪಿ ಮತ್ತು ಆರ್.ಎಸ್.ಎಸ್.ಗೆ ಮಾತ್ರ ಸಾಧ್ಯ ಇದಕ್ಕಾಗಿ ನಮ್ಮ ಸರಕಾರ ಅಂತ್ಯೋದಯ ಕಾ
ರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಎಂದು ಹೇಳಿದರು.

ಸಂಸದ ಅನಂತಕುಮಾರ ಹೆಗಡೆ ಮಾತನಾಡಿ, ರಾಜಕೀಯವೆಂದರೆ ಕೇವಲ ಓಟು ಪಡೆಯುವುದಷ್ಟೆ ಅಲ್ಲ ಸಮುದಾಯಕ್ಕೆ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸಮಾಡುವುದು ರಾಜಕೀಯವೇ ಆಗಿದೆ. ಪ್ರಮುಖ ಜಾತಿಗಳು ರಾಜಕೀಯ ಆಟಗಳನ್ನು ಆಡುತ್ತವೆ ಇದರಿಂದ ಸಣ್ಣ ಸಣ್ಣ ಜಾತಿಗೆ ಅನ್ಯಾಯವಾಗುತ್ತದೆ ನಮ್ಮ ಜಾತಿಯವನು ಮುಖ್ಯಮಂತ್ರಿಯಾಗಬೇಕು,ಪ್ರದಾನಮಂತ್ರಿಯಾಗಬೇಕು ಎಂಬುದನ್ನು ಬಿಡಬೇಕು ಹಿಂದೂಧರ್ಮದವರು ಅಧಿಕಾರ ಹಿಡಿಯಬೇಕು ಎನ್ನುವುದು ನಮಗಿರಬೇಕು ರಾಜಕೀಯ ಎಂದರೆ ಯಾವುದೋ ಎರಡು ದೊಡ್ಡ ಸಮುದಾಯಗಳ ಡೊಂಬರಾಟ ಎಂದು ಅನಿಸುತ್ತಿದೆ. ನಾವು ಹೊರಟಿರುವುದು ಕೇವಲ ನಮ್ಮ ಸರ್ಕಾರದ ರಚನೆಯಾಗಬೇಕು ಅಂತ ಅಲ್ಲ ಸಮಗ್ರ ಹಿಂದೂ ಸಮಾಜದ ಸಂಘಟನೆ ಯಾಗಬೇಕು ಸಮಗ್ರ ಹಿಂದೂ ಸಮಾಜ ಸತ್ವಶಾಲಿ ಯಾಗಬೇಕು. ಬಿಜೆಪಿ ಕೇವಲ ಮತಕ್ಕಾಗಿ ಹಲವಾರು ಮೋರ್ಚಾ ಗಳನ್ನು ಮಾಡಿದೆ ಎಂದರೆ ಅದು ಖಂಡಿತವಾಗಿಯೂ ಅಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ,ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ,ಬಿಜೆಪಿ ಹಿಂದುಳಿದವರ್ಗಗಳ ಮೋರ್ಚಾ ತಾಲೂಕಾಧ್ಯಕ್ಷ ಬಲರಾಮ ನಾಮಧಾರಿ ಮಾತನಾಡಿದರು.
ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಪ್ರಾಸ್ತಾವಿಕ ಮಾತನಾಡಿದರು. ಮಂಡಳ ಅಧ್ಯಕ್ಷ ನಾಗರಾಜ ನಾಯ್ಕ ಬೆಡ್ಕಣಿ ಸ್ವಾಗತಿಸಿದರು.ಕೃಷ್ಣಮೂರ್ತಿ ಕಡಕೇರಿ ನಿರೂಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಸಾಧಕರಾದ ಮಂಜುನಾಥ ನಾಯ್ಕ,ಲೀಲಾವತಿ ಕೊಂಡ್ಲಿ,ರಮೇಶ ಕೇಶವ ರಾಯ್ಕರ್,ಪ್ರಶಾಂತ ಗೌಡರ್‍ರನ್ನು ಸನ್ಮಾನಿಸಲಾಯಿತು.
ಪಕ್ಷದ ಹಿರಿಯ ಕಾರ್ಯಕರ್ತರನ್ನೂ ಸನ್ಮಾನಿಸಲಾಯಿತು.

About the author

Adyot

Leave a Comment