ಆದ್ಯೋತ್ ಸುದ್ದಿನಿಧಿ:
ಈಗಾಗಲೇ ಕಾಂಗ್ರೆಸ್ ಕಡೆಗೆ ಮುಖ ಮಾಡಿರುವ
ಅರಸೀಕೆರೆ ಕ್ಷೇತ್ರದ ವಿಧಾನ ಸಭಾ ಸದಸ್ಯ ಶಿವಲಿಂಗೇಗೌಡ ರವಿವಾರ ಶಿರಸಿಗೆ ಆಗಮಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಯವರಿಗೆ ರಾಜೀನಾಮೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಪಿಎಂಸಿ ಸದಸ್ಯ ರಾಮಚಂದ್ರ, ಜಿ.ಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡ, ಸುರೇಶ ಚಗಚಗೇರಿ, ಈಶ್ವರಪ್ಪ ಚಗಚಗೇರಿ, ಮಾಜಿ ಉಪಾಧ್ಯಕ್ಷ ಬಿಳೆ ಚೌಡಯ್ಯರು, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗಂಡಸಿ ಅಯ್ಯಣ್ಣ, ಬಾಣಾವರ ರವಿ ಶಂಕರ, ಜಿ.ಕೆ. ಸತೀಶ, ಲೋಕೇಶ, ಬಿ.ಎಂ.ಧರ್ಮಣ್ಣ, ಪ್ರಜ್ಚಲ್, ಹೆಗ್ಗಡ ಮಂಜಣ್ಣ, ನಾಗರಹಳ್ಳಿ ದೇವರಾಜು, ಜಿ.ಎಂ.ರಂಗನಾಥ ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು.