ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡರ “ಸಿದ್ದಾಪುರ ತಾಲೂಕು ದರ್ಶನ, ಸ್ವಾತಂತ್ರ್ಯ ಹೋರಾಟದ ಕಥನ” ಹಾಗೂ “ಸಾಹಿತ್ಯದಲ್ಲಿ ಸಮಕಾಲೀನತೆ” ಕೃತಿಗಳ ಲೋಕಾರ್ಪಣೆ ಸಮಾರಂಭ ನಡೆಯಿತು
ಸಾಹಿತ್ಯದಲ್ಲಿ ಸಮಕಾಲೀನತೆ ಕೃತಿ ಬಿಡುಗಡೆಗೊಳಿಸಿದ ಆಶಾಕಿರಣ ಟ್ರಸ್ಟ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಮಾತನಾಡಿ, ದೇಶದ ಗಡಿ ಕಾಯುವ ಸೈನಿಕರಿಗೆ ಇರುವ ಗೌರವದಂತೆ ಸ್ವಾತಂತ್ರö್ಯ ಯೋಧರನ್ನು ಸಹ ಗೌರವಿಸಬೇಕು. ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಕೆಲಸವಾಗಬೇಕು. ಆ ಮೂಲಕ ಭವಿಷ್ಯದ ಕುಡಿಗಳಲ್ಲಿ ದೇಶ ಸೇವೆಗೆ ಪ್ರೇರಣೆ ಮೂಡುವಂತಾಗಬೇಕು.ಸಿದ್ದಾಪುರ ತಾಲೂಕಿನಲ್ಲಿ ಸ್ವಾತಂತ್ರö್ಯ ಹೋರಾಟ ಸಶಕ್ತವಾಗಿತ್ತು ಜಾತಿ ಬೇಧವಿಲ್ಲದೆ ಸುಮಾರು ಒಂದು ಸಾವಿರ ಜನರು ಸ್ವಾತಂತ್ರö್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು ತಮ್ಮ ಮನೆಮಠಗಳನ್ನು ಕಳೆದು ಕೊಂಡು ನಿರ್ಗತಿಕರಾದ ಸಾಕಷ್ಟು ಕುಟುಂಬಗಳೂ ಇದ್ದವು ಅವುಗಳನ್ನು ಗುರುತಿಸುವ ಕೆಲಸವಾಗಿರಲಿಲ್ಲ ಈಗ ಜಿ.ಜಿ.ಹೆಗಡೆಯವರು ಈ ಕೆಲಸವನ್ನು ಸಮರ್ಥವಾಗಿ ಮಾಡಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿ ಸಮಾಜದ ಆಗು ಹೋಗುಗಳನ್ನು ಕಟ್ಟಿಕೊಡುತ್ತಾನೆ.ಸಾಹಿತ್ಯ ಜೀವಂತವಾಗಿದ್ದಲ್ಲಿ ಸಮಾಜ ಪ್ರಜ್ಞಾಶೀಲವಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ನಡೆಸುವುದಕ್ಕಷ್ಟೇ ಸೀಮಿತವಾಗದೇ ಸಮಾಜಮುಖಿಯಾದ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಕೃತಿಯನ್ನು ಬಿಡುಗಡೆಗೊಳಿಸಿದ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಮಾತನಾಡಿ, ಜೀವನದಲ್ಲಿ ಉಂಡಿರುವ ಸಿಹಿ ಕಹಿ ಸಾಹಿತ್ಯದ ಮೂಲಕ ವ್ಯಕ್ತವಾಗುತ್ತದೆ. ಸ್ವಾತಂತ್ರö್ಯ ಹೋರಾಟದಲ್ಲಿ ನಮ್ಮ ತಾಲೂಕಿನ ಸಾವಿರಾರು ಜನರು ಭಾಗವಹಿಸಿದ್ದರು ಆದರೆ ಈ ಹೋರಾಟವನ್ನು ಗುರುತಿಸುವ ಹಾಗೂ ದಾಖಲಿಸುವ ಕೆಲಸ ಆಗಿರಲಿಲ್ಲ ಈಗ ಸಿದ್ದಾಪುರ ಸ್ವಾತಂತ್ರö್ಯ ಹೋರಾಟ ಕುರಿತ ಐತಿಹಾಸಿಕ ಕೃತಿ ಹೊರತಂದಿದ್ದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ಪ್ರಕಾಶಕ ಜೀನಹಳ್ಳಿ ಸಿದ್ದಲಿಂಗಪ್ಪ ಮೈಸೂರು ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ ಇತಿಹಾಸವನ್ನು ಕಟ್ಟಿಕೊಡುವುದು ಒಂದು ತಪಸ್ಸಿನಂತೆ. ಸಿದ್ದಾಪುರದ ಸ್ವಾತಂತ್ರö್ಯ ಯೋಧರ ಇತಿಹಾಸ ಕುರಿತು ದಾಖಲೀಕರಣವಾಗಬೇಕು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನಕ್ಕೆ ಸೀಮಿತವಾಗದೇ ಶಾಲೆಗಳತ್ತ ಸಾಹಿತಿಗಳು, ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು, ಅಕ್ಷರೋತ್ಸವದಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡುಬAದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಆರ್.ಕೆ.ಹೊನ್ನೇಗುಂಡಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ತಮ್ಮಣ್ಣ ಬೀಗಾರ, ಲಯನ್ಸ ಅಧ್ಯಕ್ಷ ಆರ್.ಎಂ.ಪಾಟೀಲ, ತಾಲೂಕಾ ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ, ತಾಲೂಕಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ವಿಶ್ರಾಂತ ಪ್ರಾಧ್ಯಾಪಕ ಜಿ.ಎಂ.ಹೆಗಡೆ ಬಾಳೇಸರ, ಚಿಂತಕ ಅಶೋಕ ಹೆಗಡೆ ಮಾವಿನಗುಂಡಿ ಮಾತನಾಡಿದರು.
ಹಾಳದಕಟ್ಟಾ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.ಕೃತಿಕಾರ ಜಿ.ಜಿ.ಹೆಗಡೆ ಬಾಳಗೋಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಂ.ಆರ್.ಭಟ್ಟ ನಿರ್ವಹಿಸಿದರು, ಶಿಕ್ಷಕ ಜಿ.ಜಿ.ಹೆಗಡೆ ವಂದಿಸಿದರು.