ಉ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಆಘಾತ

ಆದ್ಯೋತ್ ಸುದ್ದಿನಿಧಿ;
ಉತ್ತರಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ಬಂಡಾಯದ ಬಿಸಿ ತಗುಲುತ್ತಿದೆ.ಹಿರಿಯ ನಾಯಕರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರನ್ನು ರಾಜಕೀಯವಾಗಿ ಬೆಳೆಸಲು ಹೊರಟ ಪರಿಣಾಮ ಕಾರ್ಯಕರ್ತರಲ್ಲಿ ಅಸಮಧಾನ ಹುಟ್ಟು ಹಾಕಿದೆ.

ಕುಮಟಾ ಕ್ಷೇತ್ರದಲ್ಲಿ ಮಾರ್ಗರೆಟ್ ಆಳ್ವಾ ಪುತ್ರ ನಿವೇದಿತಾ ಆಳ್ವಾರಿಗೆ ಟಿಕೇಟ್ ನೀಡಿದ್ದು ಮಾಜಿ ಶಾಸಕಿ ಶಾರದಾ ಶೆಟ್ಟಿ,ಶಿವಾನಂದ ಹೆಗಡೆ ಕಡತೋಕಾ ಸೇರಿದಂತೆ 5-6ಜನ ಟಿಕೆಡ್ ಆಕಾಂಕ್ಷಿಗಳು ಬಂಡಾಯ ಎದ್ದಿದ್ದಾರೆ‌ ಶಿವಾನಂದ ಹೆಗಡೆ ಕಡತೋಕಾ ಒಂದು ಹೆಜ್ಜೆ ಮುಂದೆ ಹೋಗಿದ್ದು ಉತ್ತರಕನ್ನಡ
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರ ಆಪ್ತವಲಯದಿಂದ ಕೇಳಿಬರುತ್ತಿದ್ದು ಇದರಿಂದ
ಕಾಂಗ್ರೆಸ್ ಗೆ ಮುಳುವಾಗಲಿದೆ.

ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಆದರೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಅರಣ್ಯ ಹಕ್ಕು ಹೋರಾಟಗಾರ ರವೀಂದ್ರ ನಾಯ್ಜ ಹಾಗೂ ವೆಂಕಟೇಶ ಹೆಗಡೆ ಹೊಸಬಾಳೆ ಮುನಿಸಿಕೊಂಡಿದ್ದಾರೆ.ವೆಂಕಟೇಶ ಹೆಗಡೆ ಹೊಸಬಾಳೆ ಈಗಾಗಲೇ ಪಕ್ಷೇತರರಾಗಿ ನಾಮಪತ್ರ ಸಲ್ಲುಸಿದ್ದು ರವೀಂದ್ರ ನಾಯ್ಕ ಕೂಡಾ ಪಕ್ಷೇತರನಾಗಿ ಸ್ಪರ್ಧಿಸುತ್ತೆನೆ ಎನ್ನುತ್ತಿದ್ದಾರೆ ಇದರ ಪರಿಣಾಮ ಕಾಂಗ್ರೆಸ್ ಮೇಲಾಗಲಿದೆ.

ಜಿಲ್ಲೆಯ ಕುಮಟಾ ಕ್ಷೇತ್ರ ಹೊರತು ಪಡಿಸಿ ಉಳಿದ ಐದು ಕ್ಷೇತ್ರದಲ್ಲಿ ಅದೇ ಹಳೆಯ ಮುಖವನ್ನೆ ಕಣಕ್ಕಿಳಿಸಿದ್ದು ಸದ್ಯ
ಕಾರ್ಯಕರ್ತರಲ್ಲಿ ಉತ್ಸಾಹ ಕಂಡು ಬರುತ್ತಿಲ್ಲ. ಚುನಾವಣೆ ಸಮೀಪ ಬಂದಂತೆ ಕಾವು ಏರಬಹುದು ಎನ್ನಲಾಗುತ್ತಿದೆ.

About the author

Adyot

Leave a Comment