ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಭಾನ್ಕುಳಿ ಗೋಸ್ವರ್ಗದಲ್ಲಿ ಮೂರು ದಿನದಿಂದ ನಡೆಯುತ್ತಿರುವ ಶಂಕರಪಂಚಮಿ ಉತ್ಸವದಲ್ಲಿ “ವೇದೋ ನಿತ್ಯಮಧೀಯತಾಂ” ವಿಷಯವನ್ನಾಧರಿಸಿ ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡಿದರು.
ವೇದವು ಅಪೌರುಷೇಯವಾಗಿದ್ದು ಅದು ಮನುಷ್ಯರ ರಚನೆಯಾಗಿರದೆ ದೇವವಾಣಿಯಾಗಿದೆ. ಒಂದೊAದು ಮಂತ್ರದ ಹಿಂದೂ ದೊಡ್ಡ ದೊಡ್ಡ ತಪಸ್ಸಿದೆ. ಕಾಡ್ಗಿಚ್ಚು ಹಬ್ಬಿದ ಸಂಸಾರ ತಾಪದಿಂದ ಕಾಪಾಡಲೆಂದು ಮೌನ ತ್ಯಾಗ ಮಾಡಿ ಶಂಕರನು ಶಂಕರಾಚಾರ್ಯರ ರೂಪ ಧರಿಸಿ ಧರಣಿಯಲ್ಲಿ ಅವತರಿಸಿದ್ದಾನೆ
ಶ್ರೀ ರಾಮನಂತಹ ರಾಜ, ಶಂಕರಾಚಾರ್ಯರAತಹ ಗುರು ಸಿಕ್ಕಾಗ ಬದುಕಿಗೆ ವಸಂತ ಬರುತ್ತದೆ. ೧೨೦೦ ವರ್ಷಗಳು ಸಂದರೂ ಶಂಕರರ ಪ್ರಭಾವ ಅಳಿದಿಲ್ಲ, ಕುಗ್ಗಿಲ್ಲ. ಮನೆಗಳನ್ನಲ್ಲದೇ, ಊರನ್ನಲ್ಲದೇ ರಾಜ್ಯ-ದೇಶವನ್ನಲ್ಲದೇ ಪ್ರಪಂಚವನ್ನೇ ಬೆಳಗಿದ ದೀಪವಾಗಿದ್ದಾರೆ.
ಸಂತರ ಮಹತಿ ಮಹಾತ್ಮರಿಗೆ ಮಾತ್ರ ಅರಿವಿಗೆ ಬರುತ್ತದೆ. ಸಂತ ಶಿಶುನಾಳ ಶರೀಫರು ಶಂಕರಾಚಾರ್ಯರ ಕುರಿತು ಶಂಕರನೇ ಅವತರಿಸಿ ದಾರುಣಿಗೆ ಶಂಕರಾಚಾರಿಯಾಗಿ ಬಂದನು ಎಂದಿದ್ದಾರೆ. ರಾಗ,ದ್ವೇಷ,ಕಾಮ,ಕ್ರೋಧ,ಅಹಂಕಾರಗಳಿAದ ಕೊಳೆಯಾಗಿದ್ದನ್ನು ತೊಳೆದು ಕಿಂಕರರಾದ ನಮ್ಮನ್ನು ಉದ್ಧರಿಸಲು ತತ್ವಜ್ಞಾನದ ಊಟವ ಉಣಿಸಿದ ಶಂಕರರು ಬೆನ್ನು ಬಿದ್ದವರ ಬಿಡದೆ ರಕ್ಷಿಸುತ್ತ ಈ ಭವಜಲದಿ ದಾಟಿಸಿದರು ಎಂದೂ ಶಂಕರರನ್ನು ಕೊಂಡಾಡಿದ್ದಾರೆ ಎಂದು ಹೇಳಿದರು.
ಇಂದು ಕಲಿಯುವುದಕ್ಕೆಲ್ಲ ಅಧ್ಯಯನ ಎನ್ನುತ್ತೇವೆ. ಗುರುಮುಖೇನ ಬಂದಿದ್ದನ್ನು ಶಿಷ್ಯ ಉಚ್ಛರಿಸಿದರೆ ಅದು ಅಧ್ಯಯನವೆನಿಸಿಕೊಳ್ಳುತ್ತದೆ. ಯಾರು ವೇದಾಧ್ಯಯನ ಮಾಡುತ್ತಾರೊ ಅವರು ತಪಸ್ಸು ಮಾಡಿದಂತೆ. ಅಂತವರ ಉಗುರುತುದಿಯಿಂದ ಕೂದಲ ತುದಿಯವರೆಗೂ ಪವಿತ್ರವಾಗುತ್ತದೆ. ಪ್ರಜ್ವಲಿಸುತ್ತಿರುವ ಬೆಂಕಿ ಹಸಿ ಕಟ್ಟಿಗೆಯನ್ನೂ ಸುಡುವಂತೆ ವೇದಜ್ಞನು ಸಂಚಿತವಾದ ಪಾಪವನ್ನು ಸುಡುತ್ತಾನೆ. ವೇದವು ಮುತ್ತು ರತ್ನಗಳುಳ್ಳ ಭಂಡಾರ. ವೈದಿಕ ಪರಂಪರೆಯಲ್ಲಿ ಹುಟ್ಟಿ ವೇದವನ್ನು ಬಿಟ್ಟು ಬೇರೇನನ್ನೋ ಕಲಿತರೆ ಅವನು ಪತಿತನಾಗುತ್ತಾನೆ, ಆ ಕುಲವು ನಾಶವಾಗುತ್ತದೆ ಎನ್ನಲಾಗಿದೆ.
ವೇದದ ಸಾರವನ್ನು ಅರ್ಥೈಸಿಕೊಂಡು ನಿರಂತರ ಆವರ್ತನ ಮಾಡಬೇಕು. ಅದಿಲ್ಲದಿದ್ದರೆ ವೇದ ಅವರನ್ನು ಬಿಟ್ಟು ಹೋಗುತ್ತದೆ ವೇದವು ಎಲ್ಲದ್ದಕ್ಕೂ ತಾಯಿಬೇರು. ವೇದಾಧ್ಯಯನ ಮಾಡಿ ಮರೆತವನಿಗೆ ಭ್ರೂಣಹತ್ಯೆಯ ಪಾಪ, ನೀಚ ಜನ್ಮದ ಪ್ರಾಪ್ತಿ ಎನ್ನಲಾಗಿದೆ. “ವೇದೋ ನಿತ್ಯಮಧೀಯತಾಂ” ಎಂಬAತೆ ನಮಗೆ ಬಂದ ಮಂತ್ರವನ್ನು ಪ್ರತಿದಿನವೂ ಪಠಿಸಬೇಕು. ಪಾಕಿಸ್ತಾನದ ಪರ್ವೇಜ, ಅಮೇರಿಕದ ಆಂಟನಿ ವೇದಾಧ್ಯಯನ ಮಾಡುವುದಕ್ಕಿಂತ ನಮ್ಮ ಮಕ್ಕಳನ್ನು ವೇದಾಧ್ಯಯನಕ್ಕೆ ಕಳಿಸಬೇಕು ಎಂದು ಹೇಳಿದರು.
ವೇ.ಶೇಷಗಿರಿ ಭಟ್ಟ ಸಂಪೆಕಟ್ಟೆ, ಮಂಜುನಾಥ ಭಟ್ಟ ಗೋಕರ್ಣ, ಶಶಿಧರ ಭಟ್ಟ ಇಡಗುಂಜಿ, ಪ್ರಶಾಂತ ಭಟ್ಟ ತೇನಿ-ತಮಿಳುನಾಡು, ಗಣಪತಿ ಭಟ್ಟ ಕಬ್ರೆ, ಮಂಜುನಾಥ ಭಟ್ಟ ಜಲಗದ್ದೆ, ರಾಜೇಂದ್ರ ಭಟ್ಟಶಿರಸಿ, ಅಲೋಕ ಭಟ್ಟಸಿದ್ದಾಪುರ ರುದ್ರಘನ ಪಾರಾಯಣ ನಡೆಸಿಕೊಟ್ಟರು.ವೇ.ಮೂ.ಮಂಜುನಾಥ ಭಟ್ಟ ಹುಲಿಮನೆ ಪೌರೋಹಿತ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸುನೀಲ ನಾಯ್ಕ ಭಟ್ಕಳ, ಪ್ರಮೋದ ಹೆಗಡೆ ಯಲ್ಲಾಪುರ, ಮಾಜಿ ಸಂಸದ, ಮಾಜಿ ಶಾಸಕ ಮಂಜುನಾಥ ಕುನ್ನೂರ ಶಿಗ್ಗಾಂವ, ದಾನಿಗಳಾದ ಎನ್.ಎಚ್.ಇಲ್ಲೂರ, ಕುಮಾರಸ್ವಾಮಿ ವರ್ಮುಡಿ, ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಶಂಕರ ಪಂಚಮಿ ಸಮಿತಿ ಅಧ್ಯಕ್ಷ ಮಂಜುನಾಥ ಭಟ್ಟ ಕವ್ಲಮನೆ, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ ಚಟ್ನಳ್ಳಿ ಮುಂತಾದವರುಪಾಲ್ಗೊಂಡಿದ್ದರು. ಸಿದ್ದಾಪುರ ಭಾನ್ಕುಳಿ ರಾಮದೇವ ಮಠ ಗೋಸ್ವರ್ಗದಲ್ಲಿ ನಡೆದ ಶಂಕರ ಪಂಚಮಿಯಲ್ಲಿ ಮಂಗಳವಾರ ಶತರುದ್ರ ಹವನ ಜರುಗಿತು.
ವೇ.ಕೃಷ್ಣ ಭಟ್ಟರು ಅಡವಿತೋಟ, ಮಂಜುನಾಥ ಭಟ್ಟರು ಹುಲಿಮನೆ, ನಂದಕುಮಾರ ಭಟ್ಟರು ಹುಲಿಮನೆ ಸೇರಿದಂತೆ ೨೦ ಕ್ಕೂ ಹೆಚ್ಚು ಋತ್ವಿಜರು ಪಾಲ್ಗೊಂಡಿದ್ದರು. ಭಾನ್ಕುಳಿ ರಾಮದೇವಮಠ ಸಮಿತಿ ಅಧ್ಯಕ್ಷ ಎಂ.ಎA.ಹೆಗಡೆ ಮಗೇಗಾರ ದಂಪತಿಗಳು ಪೂಜಾ ಕಾರ್ಯನೆರವೇರಿಸಿದರು.