ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ರವೀಂದ್ರ ನಾಯ್ಕ ಸುದ್ದಿಗೋಷ್ಠಿ ನಡೆಸಿದರು.
ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಮತದಾರರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಗೆಲುವು ನಿಶ್ಚಿತವಾಗಿದೆ ಎಂದು
ರವೀಂದ್ರ ನಾಯ್ಕ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಆಡಳಿತ ವಿರೋಧಿ ಅಲೆ ರಾಜ್ಯಾದ್ಯಂತ ಇದ್ದು, ಜನರು ಬಿಜೆಪಿ ಪಕ್ಷವನ್ನು ತೀರಸ್ಕರಿಸಲಿದ್ದಾರೆ.ತೀವ್ರ ತgಹÀದ ಬೆಲೆ ಏರಿಕೆ, ದವಸ ಧಾನ್ಯಗಳ ಬೆಲೆ ನಿಯಂತ್ರಣದಲ್ಲಿಲ್ಲ ,ದಿನ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಸಿಲೆಂಡರ್ ಬೆಲೆ ೧೯೬೫ ರಿಂದ ೨೦೧೩ರವರೆಗೆ ೫೫ರೂ. ನಿಂದ ೩೫೦ರವರೆಗೆ ಇತ್ತು ಆದರೆ ಬಿಜೆಪಿ ಸರಕಾರ ಬಂದಮೇಲೆ ೧೪೦೦ರೂ.ಗೆ ಏರಿದೆ. ಬ್ರಷ್ಟಾಚಾರವಂತೂ ಮೇರೆ ಮೀರಿದ್ದು ಜನರು ಭ್ರಮನಿರಸನ ಹೊಂದಿದ್ದಾರೆ.
ತಾಲೂಕಿನ ಎಷ್ಟೋ ಗ್ರಾಮಗಳಿಗೆ ರಸ್ತೆಯಿಲ್ಲ,ಕುಡಿಯಲು ನೀರಿಲ್ಲ ಮೂಲಭುತ ಸೌಲಭ್ಯವೂ ಇಲ್ಲ ಈ ಬಗ್ಗೆ ಮಾತನಾಡಿದರೆ ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಭೀವೃದ್ಧಿ ಆಗಲಿಲ್ಲ ಎನ್ನುವವರನ್ನು ಮಾನಸಿಕ ಅಸ್ವಸ್ಥರು ಎಂದು ಹೇಳುತ್ತಾರೆ. ಸಭಾಧ್ಯಕ್ಷದಂತಹ ಉನ್ನತ ಜವಾಬ್ದಾರಿ ಸ್ಥಾನದಲ್ಲಿರುವವರು ಸಂವಿಧಾನ ವಿರೋಧ ಶಬ್ಧ ಪ್ರಾಯೋಗಿಸಿರುವುದು ಖಂಡನಾರ್ಹ. ಇಂತಹ ಹೇಳಿಕೆಗಳು ಅವರಿಂದ ಬರುತ್ತಿರುವುದು ಅವರ ಅಸಹಾಯಕತೆಗೆ ದ್ಯೋತಕವಾಗಿದೆ ಸೋಲಿನ ಸುಳಿವು ಅವರಿಗೆ ಈಗಾಗಲೇ ದೊರಕಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಹಿರಿಯ ನಾಯಕ ದೀಪಕ ಹೆಗಡೆ ದೊಡ್ಡೂರು ಮಾತನಾಡಿ ಸುಳ್ಳು ಭರವಸೆ ಮೂಡಿಸುತ್ತಾ, ಜನರಿಗೆ ಮರಳು ಮಾಡಿ, ಮತ ಗಳಿಸುವ ಪ್ರವೃತ್ತಿಯನ್ನ ಬಿಜೆಪಿ ಪಕ್ಷವು ಬಿಡಬೇಕು. ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೇಸ್ ಪಕ್ಷವು ಭರವಸೆ ನೀಡಿದ್ದಕ್ಕಿಂತ ಹೆಚ್ಚಿನ ಕಾರ್ಯವನ್ನು ಜರುಗಿಸಿದೆ ಈ ದಿಶೆಯಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಅಲೆಯಲ್ಲ ಬಿರುಗಾಳಿಯ ರೀತಿಯಲ್ಲಿ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಅಜಿರಾ ಬೇಗಂ ಕಾನಗೋಡ, ಶ್ರೀಪತಿ ಮಾಸ್ತಾö್ಯ ನಾಯ್ಕ ಸುರಗಾಲ, ಕೆರಿಯಾ ಗೌಡ ಕಟ್ಟಿಕೈ, ಮಾಭ್ಲೇಶ್ವರ ನಾಯ್ಕ ಹುಲಿಮನೆ, ಬಿ.ಡಿ. ನಾಯ್ಕ ಇಟಗಿ, ರಾಘು ನಾಯ್ಕ ಕವಂಚೂರು, ಸುಮಿತ್ರಾ ನಾಯ್ಕ ಶಿರಳಗಿ, ಜಯಂತ ನಾಯ್ಕ ಬನಗಟ್ಟಿ, ಚಂದ್ರ ಮರಾಠಿ ಕೊಡಿಗದ್ದೆ, ಜಿಬಿ ನಾಯ್ಕ ಕಡಕೇರಿ, ಅಜ್ಯಪ್ಪ ನಾಯ್ಕ ಕಾನಗೋಡ, ವಿನಾಯಕ ಕೊಂಡ್ಲಿ, ಅಣ್ಣಪ್ಪ ಶಿರಳಗಿ, ಮಹೇಶ ಹರಕನಹಳ್ಳಿ, ದಿನೇಶ್ ನಾಯ್ಕ ಬೇಡ್ಕಣಿ, ಸುನೀಲ್ ನಾಯ್ಕ ಸಂಪಖAಡ ಮುಂತಾದವರು ಉಪಸ್ಥಿತರಿದ್ದರು.
ಖ್ಯಾತ ಚಿತ್ರನಟ ಶಿವರಾಜ್ಕುಮಾರ್ ಮೇ.4 ಗುರುವಾರ
ಮುಂಜಾನೆ ಸಿದ್ಧಾಪುರದಲ್ಲಿ ಹಾಗೂ ಸಾಯಂಕಾಲ ೩ ಗಂಟೆಗೆ ಶಿರಸಿಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕರ ಪರವಾಗಿ ರೋಡ್ ಶೋ ಮಾಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕಾಗಿ ದೀಪಕ ಹೆಗಡೆ ದೊಡ್ಡೂರು ಕೋರಿದರು.
ಇದೇ ಸಂದರ್ಭದಲ್ಲಿ ರವಿಂದ್ರ ನಾಯ್ಕ ಬೆಲೆ ಏರಿಕೆಯ ಕರಪತ್ರ ಬಿಡುಗಡೆಗೊಳಿಸಿದರು.