ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯ ಆವರಣದಲ್ಲಿರುವ ಶಾಸಕರ ಕಾಯಾಲಯವನ್ನು ಗುರುವಾರ ಶಾಸಕ ಭೀಮಣ್ಣ ನಾಯ್ಕ ಪೂಜಾವಿಧಾನದೊಂದಿಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಣ್ಣ ನಾಯ್ಕ,ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದು ಬಹಳಷ್ಟು ಜನರು ನಿರೀಕ್ಷೆ ಇಟ್ಟುಕೊಂಡು ನನ್ನ ಗೆಲುವಿಗೆ ಶ್ರಮಿಸಿದ್ದಾರೆ ಅವರೆಲ್ಲರ ನಿರೀಕ್ಷೆಗೆ ತಕ್ಕಂತೆ ನಾನು ಕೆಲಸ ಮಾಡುತ್ತೆನೆ. ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಹದಗೆಟ್ಟಿವೆ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಿದ್ದೆನೆ. ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಶರಾವತಿ ನದಿಯಿಂದ ನೀರು ತರುವ ಯೋಜನೆಯ ವ್ಯವಸ್ಥೆ ಮಾಡಲಾಗುವುದು.
ಆರೋಗ್ಯ,ನೀರು,ಶಿಕ್ಷಣದ ಬಗ್ಗೆ ಆದ್ಯತೆ ನೀಡಲಾಗುವುದು ನಮ್ಮ ಸರಕಾರ ಜನಪರ ಕೆಲಸವನ್ನು ಮಾಡುವ ಸರಕಾರವಾಗಿದೆ ನಮ್ಮ ಜಿಲ್ಲೆಯ ಮಂಕಾಳ ವೈದ್ಯ ಸಚೀವರಾಗಿದ್ದಾರೆ ಅವರ ಸಹಕಾರದೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಜನರ ಕೆಲಸವನ್ನು ಮಾಡುತ್ತಿದ್ದೆ ಈಗ ಜನರ ಪ್ರತಿನಿಧಿಯಾಗಿದ್ದೆನೆ ಇನ್ನಷ್ಟು ಜನಪರ ಕೆಲಸವನ್ನು ಮಾಡುತ್ತೆನೆ ಈ ಕಚೇರಿಯಲ್ಲಿ ಒಬ್ಬರು ಸಿಬ್ಬಂದಿ ಇರುತ್ತಾರೆ ಸಾರ್ವಜನಿಕರಿಗೆ ಈ ಕಚೇರಿಯ ಬಾಗಿಲು ತೆರೆದಿರುತ್ತದೆ ಜನರು ತಮ್ಮ ಸಮಸ್ಯೆಗಳನ್ನು ಇಲ್ಲಿ ನಿರ್ಭೀತರಾಗಿ ಹೇಳಬಹುದು ಎಂದು ಭೀಮಣ್ಣ ನಾಯ್ಕ ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯಪರಿಷತ್ ವತಿಯಿಂದ ಶಾಸಕ ಭೀಮಣ್ಣ ನಾಯ್ಕರನ್ನು ಸನ್ಮಾನಿಸಲಾಯಿತು
ಭೀಮಣ್ಣ ನಾಯ್ಕ ಅಭಿನಂದನಾ ಸಮಾರಂಭ
ಸಿದ್ದಾಪುರ ಪಟ್ಟಣದ ರಾಘವೇಂದ್ರಮಠದಲ್ಲಿ ಶಾಸಕರಾಗಿ ಆಯ್ಕೆಗೊಂಡಿರುವ ಭೀಮಣ್ಣ ನಾಯ್ಕರ ಅಭಿನಂದನಾ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ,3೦ ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ನಿಮ್ಮೆಲ್ಲರ ಸಹಕಾರದಿಂದ ಭೀಮಣ್ಣ ನಾಯ್ಕ ಗೆದ್ದು ಬಂದಿದ್ದಾರೆ. ಬರುವ 3 ವರ್ಷಗಳಲ್ಲಿ ಕ್ಷೇತ್ರದಲ್ಲಿ ಹಿಂದೆ0ದೂ ಆಗದ ಅಭಿವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಂತೆ ಕೇಂದ್ರದಲ್ಲಿಯೂ ಸಹ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇಲ್ಲದಿದ್ದರೆ ನಾವೆಲ್ಲ ಶ್ರೀಮಂತರ ಜೀತದಾಳಾಗಿ ಕೆಲಸ ಮಾಡುವ ಪರಿಸ್ಥಿತಿ ಬರಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಭೀಮಣ್ಣ ನಾಯ್ಕ, ಅಧಿಕಾರ ದಾಹ ನನ್ನಲಿಲ್ಲ. ಅಭಿವೃದ್ಧಿ ಮಾಡುವ ಉದ್ದೇಶದಿಂದ ಬಂದಿದ್ದೇನೆ. ಯಾವ ಉದ್ದೇಶಕ್ಕೆ ಮತ ಹಾಕಿ ಆರಿಸಿದ್ದೀರೋ ಅದಕ್ಕಾಗಿ ಎಲ್ಲರೂ ಸೇರಿ ಕೆಲಸ ಮಾಡೋಣ. ರಾಜಕೀಯದಲ್ಲಿ ಹಲವಾರು ಏಳು ಬೀಳುಗಳನ್ನು ನೋಡಿ ಅನೇಕ ಬಾರಿ ನಿಂತು ಸೋತಿದ್ದೇನೆ. ನಿಮ್ಮ ಶ್ರಮದಿಂದ ಇಂದು ಆಯ್ಕೆಯಾಗಿದ್ದೇನೆ. ಈ ಗೆಲುವನ್ನು ಧೈರ್ಯ, ಶಕ್ತಿ ನೀಡಿದ ರಾಜಕೀಯ ಗುರು ಬಂಗಾರಪ್ಪ ಹಾಗೂ ಅಕ್ಕ ಶಕುಂತಲಾರವರಿಗೆ ಸಮರ್ಪಿಸುತ್ತೇನೆ. ಕಾರ್ಯ ಕರ್ತರ ಸಹಕಾರ, ಹಿರಿಯರಆಶೀರ್ವಾದ, ಅಧ್ಯಕ್ಷರ ಶ್ರಮ ನನ್ನನ್ನು ಗೆಲ್ಲಿಸಿದೆ. ಸ್ವಾರ್ಥಕ್ಕಾಗಿ ರಾಜಕಾರಣ ಅಲ್ಲ. ಬಂಗಾರಪ್ಪ ಹೇಳಿದಂತೆ ನೊಂದವರ ಪರವಾಗಿ ಕೆಲಸ ಮಾಡಲು ಬಂದಿದ್ದೇನೆ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ವಿ ಎನ್ ನಾಯ್ಕ ಬೇಡ್ಕಣಿ, ವೀರಭದ್ರ ನಾಯ್ಕ ಮಳವಳ್ಳಿ, ಆರ್ ಎಂ ಹೆಗಡೆ ಬಾಳೇಸರ, ಎಸ್ ಆರ್ ಹೆಗಡೆ, ಶ್ರೀಪಾದ ಹೆಗಡೆ ಕಡವೆ, ಸೀಮಾ ಭಟ್, ಕೆ ಜಿ ನಾಗರಾಜ್, ನಾಸಿರ್ ವಲ್ಲಿ ಖಾನ್, ಪ್ರಶಾಂತ ಎಸ್ ನಾಯ್ಕ ಮುಂತಾದವರು ಇದ್ದರು.