ಆದ್ಯೋತ್ ಸುದ್ದಿನಿಧಿ:
ರಾಷ್ಟ್ರೀಯ ಈಡಿಗ ಮಹಾಮಂಡಳಿ ಕರ್ನಾಟಕ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕರವರು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಸಮುದಾಯದ ಹಿರಿಯ ರಾಜಕಾರಣಿ ಮತ್ತು ಕಾಂಗ್ರೆಸ್ ಪಕ್ಷದ ಮುತ್ಸದಿ ರಾಜಕಾರಣಿಯಾಗಿರುವ ಮತ್ತು ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಭ್ರಷ್ಟಾಚಾರ ರಹಿತ ರಾಜಕಾರಣಿಯಾಗಿರುವ ಬಿ. ಕೆ ಹರಿಪ್ರಸಾದ್ ರವರನ್ನು ಕಾಂಗ್ರೆಸ್ ಪಕ್ಷ ಕಡೆಗೆಣಿಸಿರುವುದು ಸಮುದಾಯ ಸಹಿಸುವುದಿಲ್ಲ ಆದ್ದರಿಂದ ಕೂಡಲೇ ಬಿ.ಕೆ. ಹರಿಪ್ರಸಾದ್ ರವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ವೀರಭದ್ರ ನಾಯ್ಜ ಆಗ್ರಹಿಸಿದರು.
ಕರ್ನಾಟಕ ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ 250 ಕೋಟಿ ರೂ ನೀಡುವುದಾಗಿ ಹೇಳಿರುವುದನ್ನು ಕೂಡಲೇ ಜಾರಿಗೆ ತರಬೇಕು ಹಾಗೂ ನಾರಾಯಣ ಗುರು ಈಡಿಗ ನಿಗಮಕ್ಕೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಬೇಕು.ಬಿಜೆಪಿ ಸರ್ಕಾರದ ಕುಲಶಾಸ್ತ್ರ ಅಧ್ಯಯನವನ್ನು ಕೂಡಲೇ ಪ್ರಾರಂಭ ಮಾಡಬೇಕು ಮತ್ತು ಈಡಿಗ ಸಮಾಜವನ್ನು ಎಸ್ ಟಿ(ST) ಮೀಸಲಾತಿಗೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು
ಬ್ರಹ್ಮಶ್ರೀ ನಾರಾಯಣ ಗುರು ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದಲ್ಲಿ ನಿರ್ಮಾಣ ಮಾಡಬೇಕು ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ನಮ್ಮ ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಐಎಎಸ್,ಐಪಿಎಸ್,
ಕೆ.ಎಎಸ್ ತರಬೇತಿ ಕೇಂದ್ರಗಳನ್ನು ಉತ್ತರ ಕನ್ನಡ ಹಾಗೂ ಮಂಗಳೂರು ಜಿಲ್ಲೆಯಲ್ಲಿ ಪ್ರಾರಂಭಿಸಬೇಕು 12 ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಗುರುತಿಸಿಕೊಂಡಿರುವ ನಮ್ಮ ಸಮುದಾಯದ ಶ್ರೀ ಹೆಂಡದ ಮಾದಯ್ಯನವರ ಜಯಂತಿ ಆಚರಣೆ ಮಾಡಬೇಕು ಈಡಿಗ ಸಮುದಾಯದ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಹಿಂದಿನ ಸರ್ಕಾರ ನೀಡಿದ ಕಾನೂನು ಗೊಂದಲಗಳನ್ನು ದೂರ ಮಾಡಿ ದೇವಸ್ಥಾನವನ್ನು ಧರ್ಮದರ್ಶಿಗಳಾದ ರಾಮಪ್ಪನವರ ನೇತೃತ್ವದಲ್ಲಿ ಸುಸೂತ್ರವಾಗಿ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಸಮಾಜದ ಸಂಘಟನೆಯ ದೃಷ್ಟಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಗಳಲ್ಲಿಯೂ ಕುಲಬಾಂಧವರ ಚಿಂತನಾ ಶಿಬಿರ ಮಾಡುವುದು ಹಾಗೂ ಸಾಮಾಜಿಕ ಮತ್ತು ರಾಜಕೀಯ ಅರಿವನ್ನು ಮೂಡಿಸುವುದು ನಮ್ಮ ಉದ್ದೇಶವಾಗಿದೆ ನಾವು ನಮ್ಮ ಸಮುದಾಯದ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಕಳೆದ 3 ವರ್ಷಗಳಿಂದ ನಮ್ಮ ಸಮುದಾಯದ ಗುರುಗಳಾದ ಪರಮಪೂಜ್ಯ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದೆವೆ ಇಂದಿನ ಸರ್ಕಾರವು ಕೆಲವೊಂದು ಬೇಡಿಕೆಗಳನ್ನು ಈಡೇರಿಸಿದ್ದು ಆದರೆ ಇನ್ನುವರೆಗೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಕಂಡುಬಂದಿದೆ ಕಾರಣ ನೂತನ ಕಾಂಗ್ರೆಸ್ ಪಕ್ಷದ ಸರ್ಕಾರದ ಮೇಲೆ ನಮ್ಮ ಸಮಾಜದ ನಿರೀಕ್ಷೆ ಇದೆ. ಈ ಸರ್ಕಾರವು ನಮ್ಮ ಬೇಡಿಕೆಗಳಿಗೆ ವಿಳಂಬ ಹಾಗೂ ಅಲಕ್ಷ್ಯ ಮಾಡಿದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ವೀರಭದ್ರ ನಾಯ್ಕ ಎಚ್ಚರಿಸಿದರು.