ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನ ಸರಕುಳಿ ಪ್ರೌಢಶಾಲೆಯಲ್ಲಿ ಗುರುವಾರ
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ
ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಗುರುಮನೆ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಗದಂಬಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ಜಿ.ಹೆಗಡೆ ತ್ಯಾರಗಲ್
ಪತ್ರಿಕಾರಂಗ ಇಂದು ಅತ್ಯಂತ ಮಹತ್ವವಾಗಿದ್ದು ಇದು ದೃಶ್ಯ ಮಾಧ್ಯಮಕ್ಕಿಂತ ಹೆಚ್ಚು ಪ್ರಭಾವಶಾಲಿ ಆಗಿದೆ. ಪತ್ರಿಕೆ ಸಮಾಜದ ಹಾಗೂ ಸರ್ಕಾರದ ಕಣ್ಣುಗಳನ್ನು ತೆರೆಸುವಂತಹುದಾಗಿದೆ ಇಂದು ಪತ್ರಿಕೆ ಜನರಿಗೆ ಸುಲಭವಾಗಿ ಸಿಗುತ್ತಿದ್ದರೂ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಹೇಳಿದರು.
ಸರಕುಳಿ ಸಹಿಪ್ರಾ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಶಾಂತ ಹೆಗಡೆ ಮೇಲ್ಗಿರಿ ತಾಲೂಕು ಪತ್ರಕರ್ತರ ಮಾಹಿತಿ ಬಿಡುಗಡೆಮಾಡಿದರು.
ಕ್ಷೇತ್ರಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ಮಾತನಾಡಿ ಪತ್ರಿಕೆಯ ಶಕ್ತಿ ಅಗಾಧವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆ ಸಮಾಜ ಹಾಗೂ ಸರ್ಕಾರವನ್ನು ಎಚ್ಚರಿಸುವ ಕನ್ನಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಕರ್ತರು ಇಂದು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಪತ್ರಕರ್ತರ ಸಂಘಟನೆ ಕುರಿತು ಮಾತನಾಡಿ ಸರ್ಕಾರ ಪತ್ರಕರ್ತರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ನೀಡಬೇಕೆಂದು ಆಗ್ರಹಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಬಸವರಾಜ್ ಪಾಟೀಲ್ ಮುಂಡಗೋಡ ಮಾತನಾಡಿದರು.
ಅಧ್ಯಕ್ಷತೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿವಹಿಸಿದ್ದರು.
ಪ್ರೌಢಶಾಲೆಯ ಮುಖ್ಯಾಧ್ಯಾಪಕ ಕೃಷ್ಣಮೂರ್ತಿ ಹೆಗಡೆ, ಸಹಿಪ್ರಾ ಶಾಲೆಯ ಮುಖ್ಯಾಧ್ಯಾಪಕಿ ಕಲ್ಪನಾ ವೈದ್ಯ ಉಪಸ್ಥಿತರಿದ್ದರು.
ಸನ್ಮಾನ: ಹಿರಿಯ ಪತ್ರಕರ್ತರಾದ ನರೇಂದ್ರ ಹೆಗಡೆ ಹೊಂಡಗಾಶಿ ದಂಪತಿಯನ್ನು ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದಿAದ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಶ್ರೀನಿವಾಸ ಶಾನಭಾಗ ಹಾರ್ಸಿಕಟ್ಟಾ ಅವರಿಗೆ ಗುರುಮನೆ ದತ್ತಿನಿಧಿ ಪ್ರಶಸ್ತಿಯನ್ನು ಕೆಕ್ಕಾರ ನಾಗರಾಜ ಭಟ್ಟ ಪ್ರದಾನ ಮಾಡಿ ಗೌರವಿಸಿದರು. ನರೇಂದ್ರ ಹೆಗಡೆ ಹಾಗೂ ಶ್ರೀನಿವಾಸ ಶಾನಭಾಗ ಅನಿಸಿಕೆ ವ್ಯಕ್ತಪಡಿಸಿದರು.
ಅಂಕಿತಾ ಸಂಗಡಿಗರು ಹಾಗೂ ರೇಖಾ ಹೆಗಡೆ ಹೊಂಡಗಾಶಿ ಪ್ರಾರ್ಥನೆ ಹಾಡಿದರು. ಪತ್ರಕರ್ತರಾದ ಸುಜಯ ಭಟ್ಟ, ಶ್ರೀಧರ ಹೆಗಡೆ, ನಾಗರಾಜ ಭಟ್ಟ, ಶಿವಶಂಕರ ಕೋಲಸಿರ್ಸಿ, ರಮೇಶ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.
#######
ಚಿತ್ರದುರ್ಗ ಜಿಲ್ಲಾಗುತ್ತಿಗೆದಾರರಸಂಘದ ನೂತನ ನಿರ್ದೇಶಕರಾಗಿ ಭರಮಸಾಗರದ ಎಸ್ ಎಮ್ ಎಲ್ ಪ್ರವೀಣರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು
.