ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮರಗಡಿ
ಗೌಳಿದೊಡ್ಡಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ್ದು ತೀವ್ರ ರಕ್ತಸ್ರಾವದಿಂದ ರೈತ ಮೃತಪಟ್ಟ ಘಟನೆ ಗುರುವಾರ ನಡೆದಿದೆ.


58 ವರ್ಷದ ಜಿಮ್ಮು ವಾಗು ತೋರವತ್ ಮೃತಪಟ್ಟ ರೈತನಾಗಿದ್ದು,ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕರಡಿ ದಾಳಿ ನಡೆಸಿದೆ.ಇದರಿಂದ ರೈತನ ತಲೆ,ಕುತ್ತಿಗೆ,ಬಲಕಾಲು ಮತ್ತು ಬಲಕೈಗೆ ತೀವ್ರ ಗಾಯವಾಗಿದೆ. ಇದರಿಂದ ರಕ್ತಸ್ರಾವವಾಗಿ ರೈತ ಮೃತಪಟ್ಟಿದ್ದಾನೆ ಎನ್ನಲಾಗಿದೆ.

