ಆದ್ಯೋತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಶಾಸಕ ಭೀಮಣ್ಣ ನಾಯ್ಕ,ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರದ ಚೆಕ್ ಹಾಗೂ ಸಾಂಕೇತಿಕವಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮಣ್ಣ ನಾಯ್ಕ,
ನಮ್ಮ ಸರಕಾರ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈ ಯೋಜನೆಗಳು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಗೃಹಲಕ್ಷ್ಮಿ ಯೋಜನೆ ಪ್ರತಿಮನೆಗೂ ತಲುಪ ಬೇಕು ಇಲ್ಲಿ ಪಕ್ಷ,ಜಾತಿ,ಧರ್ಮ ಯಾವುದನ್ನು ತರಬಾರದು ಅಧಿಕಾರಿಗಳಿಗೆ ಅವಶ್ಯಕತೆ ಇದ್ದರೆ ನಮ್ಮ ಕಾರ್ಯಕರ್ತರ ಸಹಾಯ ಪಡೆಯಬೇಕು ಎಂದು ಹೇಳಿದರು.
ತಹಸೀಲ್ದಾರ ಮಂಜುನಾಥ ಮುನ್ನೋಳ್ಳಿ ಮಾಹಿತಿ ನೀಡಿ,
ಜೂನ್ ತಿಂಗಳಲ್ಲಿ ವಾಡಿಕೆಯ ಮಳೆ ೬೩೧ ಮಿಮಿ ಮಳೆಯಾಗಬೇಕಿತ್ತು ಆದರೆ ಕೇವಲ ೨೩೯ ಮಿಮಿ ಮಳೆಯಾಗಿತ್ತು ಆದರೆ ಜುಲೈ ತಿಂಗಳಲ್ಲಿ ಇಲ್ಲಿಯವರೆಗೆ ೧೪೬೮ ಮಿಮಿ ಮಳೆಯಾಗಿದೆ ೯ ಕಚ್ಚಾಮನೆಗೆ ಹಾನಿಯಾಗಿದೆ ಕಳೆದ ವರ್ಷ ನೆರೆ ಬಂದ ಪ್ರದೇಶಗಳನ್ನು ಗುರುತಿಸಲಾಗಿದ್ದು ಪ್ರತಿದಿನ ಗಮನಿಸಲಾಗುತ್ತಿದೆ ಎಂದು ಹೇಳಿದರು.
ತಾಲೂಕಿನ ಕವಂಚೂರು,ನೆಜ್ಜೂರು,ಅರೆಂದೂರು ಭಾಗದಲ್ಲಿ ಬತ್ತದ ಬಿತ್ತನೆ ಮಾಡಲಾಗುತ್ತದೆ ಈ ಪ್ರದೇಶದಲ್ಲಿ ಕಳೆದ ಒಂದುವಾರದಿಂದ ಬಿತ್ತನೆ ಮಾಡಿದ ಗದ್ದೆಗಳು ನೀರಿನಲ್ಲಿ ಮುಳುಗಿದೆ.ಕೆಲವು ಕಡೆಗೆ ಬತ್ತದ ಮಡಿ ಮಾಡಿದ ಸಸಿಗಳೂ ನೀರಿನಲ್ಲಿ ಮುಳುಗಿದೆ ಎಂದು ಕೃಷಿ ಅಧಿಕಾರಿ ಹೇಳಿದರು.
ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದ ಭೀಮಣ್ಣ ನಾಯ್ಕ,
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಂದ ಹಿಡಿದು ಎಲ್ಲಾ ಇಲಾಖೆಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು,ಯಾವುದೇ ನೆಪ ಹೇಳಬಾರದು ಮನೆ ಹಾನಿ,ಬೆಳೆ ಹಾನಿಯಾದರೆ ಅಧಿಕಾರಿಗಳು ಮಾನವೀಯತೆಯಿಂದ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ರಸ್ತೆಗಳು ಬಂದ್ ಆಗದಂತೆ ನೋಡಿಕೊಳ್ಳಬೇಕು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ ಹೆಚ್ಚಾಗುತ್ತಿದೆ ಜಂಗಲ್ ಕಟ್ಟಿಂಗ್ ಮಾಡದ ಕಾರಣ ಈ ರೀತಿ ಆಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ ತಕ್ಷಣ ಜಂಗಲ್ ಕಟಿಂಗ್ ಮಾಡಿ ವಿದ್ಯುತ್ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದುಸೂಚಿಸಿದರು.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಭೀಮಣ್ಣ ನಾಯ್ಕ,ಕಾಂಗ್ರೆಸ್ ಪಕ್ಷ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಜನರಿಗೆ ಯಾವ ಗ್ಯಾರಂಟಿಗಳನ್ನು ನೀಡಿತ್ತೊ ಅದನ್ನು ಜಾರಿಗೆ ತರುತ್ತಿದೆ.ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಗೆ ನಮ್ಮ ಕ್ಷೇತ್ರದಲ್ಲೂ ಚಾಲನೆ ನೀಡಲಾಗಿದೆ. ಅಧಿವೇಢನ ಮುಗಿಸಿ ಬಂದವನು ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆನೆ ಜಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಳೆಯಿಂದ ಅನಾಹುತವಾದರೆ ತಕ್ಷಣ ಪರಿಹಾರ ನೀಡಲು ಹಾಗೂ ಅಧಿಕಾರಿಗಳು ರಜೆಯನ್ನು ಹಾಕದೆ ಕೇಂದ್ರ ಸ್ಥಾನದಲ್ಲಿರುವಂತೆ ಸೂಚಿಸಿದ್ದೆನೆ ಎಂದು ಹೇಳಿದರು.
ಮಳೆಯಿಂದ ಮನೆ ಕುಸಿದ ಬಗ್ಗೆ ಬಹಳ ಕಡಿಮೆ ಪರಿಹಾರ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಭೀಮಣ್ಣ ನಾಯ್ಕ,ಮನೆ ಕಟ್ಟುವಾಗ ಸರಕಾರ ನೀಡುವ ಹಣದ ಜೊತೆಗೆ ನಮ್ಮ ಹಣವನ್ನು ಹಾಕಿ ಸುಭದ್ರವಾಗಿ ಮನೆಕಟ್ಟಿಕೊಳ್ಳಬೇಕು. ಆತುರದಲ್ಲಿ ಮನೆಕಟ್ಟಿ ಮಳೆ ಬಂದಾಗ ಕುಸಿದು ಬೀಳುತ್ತದೆ. ಭೂಮಿ ಇಲ್ಲದ ಬಡವರಿಗೆ ಭೂಮಿಯನ್ನು ನೀಡಿ ಮನೆಕಟ್ಟಲು ಸಹಾಯಧನವನ್ನೂ ನೀಡಬೇಕು ಎಂದು ಹಿಂದೆ ನಾನು ಆಗ್ರಹಿಸಿದ್ದೆ ಈಗಲೂ ನಾನು ಇದನ್ನೆ ಹೇಳುತ್ತೇನೆ ಬಹಳಷ್ಟು ಹಿಂದುಳುದವರ್ಗದವರಿಗೆ ಸರಿಯಾದ ಭೂಮಿ ಇರುವುದಿಲ್ಲ ಇಂತಹವರಿಗೆ ಭೂಮಿ ನೀಡಿ ಮನೆಕಟ್ಟಿಸಿ ಕೊಡಬೇಕು ಎಂದು ಸರಕಾರವನ್ನು ಆಗ್ರಹಿಸುತ್ತೇನೆ ಎಂದು ಹೇಳಿದರು.