ಆದ್ಯೋತ್ ಸುದ್ದಿನಿಧಿ:
ಬಿ.ಕೆ.ಹರಿಪ್ರಸಾದರಿಗೆ ಸಚೀವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಸಿದ್ದಾಪುರದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷ ರಾಜೇಶ ನಾಯ್ಕ ಕೋಲಸಿರ್ಸಿ ಸುದ್ದಿಗೋಷ್ಠಿ ನಡೆಸಿದರು
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣರಾದ ಬಿ.ಕೆ.ಹರಿಪ್ರಾಸದರಿಗೆ ಸಚೀವ ಸ್ಥಾನ ಕೊಡದೆ ಅನ್ಯಾಯ ಮಾಡಲಾಗಿದ್ದು ಕೂಡಲೇ ಅವರಿಗೆ ಸಚೀವ ಸ್ಥಾನ ನೀಡಬೇಕು
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಗೆಲುವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಎಷ್ಟು ಕಾರಣರೋ ಹರಿಪ್ರಸಾದರು ಅಷ್ಟೆ ಕಾರಣರು. ಕಳೆದ ೪೦ ವರ್ಷದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿಬೆಳೆಸಿರುವ ಹಿಂದುಳಿದ ವರ್ಗದ ನಾಯಕ ಹರಿಪ್ರಸಾದರಿಗೆ ಅನ್ಯಾಯ ಮಾಡಲಾಗುತ್ತಿದೆ. ನಮ್ಮ ಸಮುದಾಯ ಕಾಮಗ್ರೆಸ್ ಬೆನ್ನಿಗೆ ನಿಂತಿರುವುದರಿAದಲೇ ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಮ್ಮ ಜಿಲ್ಲೆಯಲ್ಲಿ ನಾಲ್ಕು ಶಾಸಕರನ್ನು ಗೆಲ್ಲಿಸಿರುವುದು,ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕರ ಗೆಲುವಿಗೆ ನಮ್ಮ ಸಮಾಜವೇ ಕಾರಣ. ಹಿಂದೆ ಬಿಜೆಪಿ ಸರಕಾರದಲ್ಲಿ ನಮ್ಮ ಸಮಾಜದ ಇಬ್ಬರಿಗೆ ಮಂತ್ರಿ ಸ್ಥಾನವನ್ನು ನೀಡಲಾಗಿತ್ತು ಆದರೆ ಈಗ ಒಬ್ಬರಿಗೆ ಮಾತ್ರ ನೀಡಲಾಗಿದೆ
ತಮ್ಮ ಗೆಲುವಿಗೆ ಕಾರಣವಾದ ಸಮಾಜವನ್ನು ಅದರ ಮುಖಂಡರಾದ ಹರಿಪ್ರಸಾದರನ್ನು ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ನಡೆಯನ್ನು ನಾವು ಖಂಡಿಸುತ್ತೆವೆ ಅಲ್ಲದೆ ಹರಿಪ್ರಸಾದರಿಗೆ ಮಂತ್ರಿಸ್ಥಾನ ನೀಡದಿದ್ದರೆ ಮುಂಬರುವ ಸ್ಥಳೀಯ ಸಂಸ್ಥೆ ಸೇರಿದಂತೆ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸರಿಯಾದ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಣ್ಣಪ್ಪ ನಾಯ್ಕ ಶಿರಳಿಗೆ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.