ಸಚೀವ ಮಂಕಾಳು ವೈದ್ಯರಿಂದ ಗೃಹಜ್ಯೋತಿ ಯೋಜನೆಗೆ ಚಾಲನೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಗೃಹಜ್ಯೋತಿ ಕಾರ್ಯಕ್ರಮವನ್ನು ಸಚೀವ ಮಂಕಾಳು ವೈದ್ಯ ಚಾಲನೆ ಮಾಡಿದರು.
ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡಲು ಉದ್ದೇಶಿಸಿರುವ 5 ಗ್ಯಾರಂಟಿ ಯೋಜನೆಯಲ್ಲಿ ಗೃಹ ಜ್ಯೋತಿ ಯೋಜನೆ ಮಹತ್ವದ್ದಾಗಿದೆ. ದೇಶದ ಯಾವುದೇ ರಾಜ್ಯದಲ್ಲಿ ಅನುಷ್ಠಾನ ಮಾಡದೇ ಇರುವ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಪ್ರಥಮ ಬಾರಿಗೆ ಅನುಷ್ಠಾನ ಮಾಡುತ್ತಿದೆ.
ಉಚಿತ ವಿದ್ಯುತ ನೀಡುವ ಮೂಲಕ ಬಡವರಿಗೆ ಹಾಗೂ ಜನ ಸಾಮಾನ್ಯರಿಗೆ ಜಾರಿ ಮಾಡುವ ಯೋಜನೆಯನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಒಟ್ಟೂ 4,18092 ಜನ ಗೃಹ ಜ್ಯೋತಿ ವಿದ್ಯುತ್ ಗ್ರಾಹಕರಿದ್ದು ಎಲ್ಲರಿಗೂ ಈ ಯೋಜನೆ ಜಾರಿಯಾಗಲಿ ಎಂಬದು ನಮ್ಮ ಉದ್ದೇಶವಾಗಿದೆ.ಈ ಯೋಜನೆಗೆ ಜಿಲ್ಲೆಗೆ ಪ್ರತಿ ತಿಂಗಳಿಗೆ 28 ಕೋಟಿ ರೂ ಮತ್ತು 1 ವರ್ಷಕ್ಕೆ 300 ಕೋಟಿ ಹಣ ಅವಶ್ಯಕತೆ ಉಂಟಾಗಲಿದೆ ಎಂದು ಹೇಳಿದರು.
ಕುಮಾರಸ್ವಾಮಿಯವರು ಹತಾಶರಾಗಿ ವಿನಾಃ ಕಾರಣ ಸಚಿವರ ಹಾಗೂ ಸರ್ಕಾರದ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ನಾವೇನೂ ಗ್ಯಾರಂಟಿ ಯೋಜನೆ ಮಾಡುತ್ತಿದ್ದೇವೆ ನಮ್ಮದು ನುಡಿದಂತೆ ನಡೆದಿದ್ದೇವೆ.ಬಿಜೆಪಿ ಸರ್ಕಾರ ತಮ್ಮ ಅಧಿಕಾರಾವಧೀಯ ಕೊನೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 4 ರಿಂದ 5 ಸಾವಿರ ರೂ ಕಾಮಗಾರಿಗಳ ಅನುಮೋದನೆ ನೀಡಿ, ಹಣ ಮಂಜೂರು ಮಾಡದೇ ಹಾಗೇ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿ ಯೋಜನೆ ಕೊಟ್ಟ ನಂತರ ದಿವಾಳಿಯಾಗಲಿದೆ ಎಂದು ಸರ್ಕಾರದ ಮೇಲೆ ಪ್ರತಿನಿತ್ಯ ಆರೋಪ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು ಇದು ಬಿಜೆಪಿ ಪಕ್ಷದವರು ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದ ಅವರು ನಮ್ಮ ಗ್ಯಾರಂಟಿ ಯೋಜನೆಯಿಂದಾಗಿ ಬಡ ಹಾಗೂ ಜನ ಸಾಮಾನ್ಯರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಯೋಜನೆಯನ್ನು ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಿದ್ದಾರೆ. ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಚುನಾವಣಾ ಪೂರ್ವದಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಬಡ ಹಾಗೂ ಜನ ಸಾಮಾನ್ಯರ ಮತ್ತು ಮಹಿಳಾ ವರ್ಗದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಅವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಈ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಹೇಳಿದರು.

About the author

Adyot

Leave a Comment