ಆದ್ಯೋತ್ ಸುದ್ದಿನಿಧಿ:
ಶಿರಸಿ ಪಟ್ಟಣದ ಬಿಡ್ಕಿಭೈಲನಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಹಾಗೂ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಹಿಂದೂ ಧರ್ಮದ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಯನ್ನು. ಖಂಡಿಸಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ, ಅವರ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ಮಾಡಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಉದಯನಿಧಿ ಸ್ಟಾಲಿನ್ ಬೇಜವಾಬ್ದಾರಿಯಾಗಿ ಮಾತನಾಡಿರುವುದು ಖಂಡಿಸುತ್ತೇನೆ. ಜಗತ್ತಿಗೆ ಸನಾತನ ಧರ್ಮದ ಬಗ್ಗೆ ಗೊತ್ತಾಗಿದೆ. ಹಿಂದೂಸ್ಥಾನದ ಜನತೆ ಹಿಂದಿನಂತೆ ಇಲ್ಲ. ಜಗತ್ತಿಗೆ ತಿಳಿದಿದೆ. ಕಾಲ ಬದಲಾಗಿದೆ ಎಂಬುದನ್ನು ಹಿಂದೂ ಧರ್ಮ ವಿರೋಧಿಸುವವರು ಅರ್ಥಮಾಡಿಕೊಳ್ಳಬೇಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಲಿಷ್ಠ ಭಾರತ ರೂಪುಗೊಳ್ಳುತ್ತಿದ್ದು, ಅಯೋಧ್ಯಾದಲ್ಲಿ ಶ್ರೀರಾಮ ಮಂದಿರ ಸೇರಿದಂತೆ ಹಿಂದೂ ಧರ್ಮ ಮತ್ತೊಮ್ಮೆ ಬಲಿಷ್ಠವಾಗಿ ತಲೆ ಎತ್ತಲಿದೆ .ದೇಶದಲ್ಲಿ ಆರ್ಟಿಕಲ್ 370 ರದ್ದಾಗಿದೆ. ರಾಮ ಮಂದಿರ ನಿರ್ಮಾಣವಾಗುತ್ತಿದೆ. ಆದ್ದರಿಂದ ಗುಲಾಮಿ ಮಾನಸಿಕತೆಯಿಂದ ಹೊರ ಬರುತ್ತಿದ್ದೇವೆ. ಈ ಸಮಯದಲ್ಲಿ ಇಂತಹ ಪಕ್ಷದ ಮುಖಂಡರು ಹೇಳಿಕೆಗಳು ಗುಲಾಮಿ ಮಾನಸಿಕತೆಯನ್ನು ತೋರಿಸಿಕೊಡುತ್ತದೆ.
ಸ್ಟಾಲಿನ್ ಅವರ ಇಂತಹ ಹೇಳಿಕೆಗಳು ಇನ್ನು ಮುಂದೆ ನಡೆಯುವುದಿಲ್ಲ. ಇದಕ್ಕೆ ನಾವು ಪ್ರತಿಕ್ರಿಯೆ ನೀಡಬೇಕು ಇಲ್ಲದಿದ್ದರೆ ಇಂಥ ರಕ್ತ ಬೀಜಾ ಸುರರು ಹುಟ್ಟಿಕೊಳ್ಳುತ್ತಾರೆ.ದೇಶದ ಅನ್ನ ತಿಂದು ಇಂತಹ ಹೇಳಿಕೆ ನೀಡಿರುವ ಸ್ಟಾಲಿನ್ ಗೆ ದೇಶದಲ್ಲಿ ಅವಕಾಶವಿಲ್ಲ ಎಂಬುದನ್ನು ತೋರಿಸಿಕೊಡಬೇಕಾಗಿದೆ. ಸಂವಿಧಾನ ಬದ್ಧ ಪ್ರಮಾಣ ವಚನ ಸ್ವೀಕರಿಸಿದ ಸ್ಟಾಲಿನ್ ಮೇಲೆ ರಾಜ್ಯಪಾಲರು ಶಿಸ್ತು ಕ್ರಮ ಕೈಗೊಳ್ಳಬೇಕು.ಈ ದೇಶದಲ್ಲಿ ಜನರಲ್ಲಿ ಪ್ರೀತಿ ವಿಶ್ವಾಸ ಬೆಳೆಯಬೇಕು. ಹಿಂದುಗಳು ದೇಶದಾದ್ಯಂತ ಜನಜಾಗ್ರತಿ ಹೊಂದುವ ಅಗತ್ಯತೆ ಇದೆ. ಉದಯ ನಿಧಿ ಸ್ಟಾಲಿನ್ ಸಂವಿಧಾನದ ಆಶಯದ ವಿರುದ್ಧವಾಗಿ ಮಾತನಾಡಿದ್ದು ಅವರನ್ನು ರಾಜ್ಯಪಾಲರು ಶಾಸಕ ಸ್ಥಾನ ಹಾಗೂ ಸಚಿವ ಸ್ಥಾನದಿಂದ ವಜಾ ಮಾಡಬೇಕು.ತಮಿಳುನಾಡಿನ ಜನ ನಿಮ್ಮನ್ನು ಧಿಕ್ಕರಿಸುತ್ತಾರೆ. ಆಸೆ ಆಮಿಷಗಳ ಮೂಲಕ ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ಮಾಡುತ್ತಿರುವ ದುಷ್ಟ ಶಕ್ತಿಗಳನ್ನು ಎದುರಿಸಲು ಹಾಗೂ ಪ್ರತಿಭಟಿಸಲು ಹಿಂದೂಗಳು ಶಕ್ತಿ ವೃದ್ಧಿಸಿಕೊಳ್ಳಬೇಕು. ಸನಾತನ ಧರ್ಮ ಘಾಸಿಗೊಳಿಸಿದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ನೀಡಬೇಕು ಎಂದರು
ಆರ್.ಎಸ್.ಎಸ್.ಮುಖಂಡ ಸೀತಾರಾಮ ಭಟ್ಟ ಮಾತನಾಡಿ,
ಉದಯ್ ನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಗಳಿಗೆ ದೇಶದಾದ್ಯಂತ ಪ್ರತಿಕ್ರಿಯೆ ಬರುತ್ತಿದೆ. ಈ ಹೇಳಿಕೆಯನ್ನು ಐ.ಎನ್.ಡಿ.ಐ.ಘಟಬಂಧನದಲ್ಲಿ 50ರಷ್ಟು ಪ್ರತಿಶತ ಪಕ್ಷಗಳು ವಿರೋಧ ಮಾಡುತ್ತಿವೆ ಮತ್ತು 50ರಷ್ಟು ಪ್ರತಿಶತ ಪಕ್ಷಗಳು ಬೆಂಬಲಿಸುತ್ತಿವೆ.ಇದರ ಮರ್ಮವನ್ನು ಹಿಂದುಗಳು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರ ವ್ಯಾಪಿ ಹೇಳಿಕೆ ನೀಡುತ್ತಿದ್ದಾರೆ. ನಾವು ಹಿಂದೂಗಳು ವೋಟ್ ಬ್ಯಾಂಕ್ ಆಗಿಪರಿವರ್ತಿತರಾಗಿಲ್ಲ. ಆದ್ದರಿಂದ ಇಂತವರು ವೋಟ್ ಬ್ಯಾಂಕ್ ಕಡೆ ಮುಖ ಮಾಡುತ್ತಿದ್ದಾರೆ.ಹಿಂದುಗಳನ್ನು ಓಲೈಸದಿದ್ದರೆ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬ ವಾತಾವರಣ ಸೃಷ್ಟಿಯಾಗಬೇಕು ಆದ್ದರಿಂದ ಹಿಂದುಗಳು ಜಾಗ್ರತರಾಗಬೇಕು ಜಾತಿ ಜಾತಿ ಎಂಬುದನ್ನು ಬಿಟ್ಟು ಒಂದಾಗಬೇಕು ಎಂದರು
ವಿ.ಹೆಚ್.ಪಿ ಮುಖಂಡ ಕೇಶವ ಮರಾಠಿ ಮಾತನಾಡಿ,
ಇವತ್ತಿನ ಹಿಂದೂ ಮನ್ವಂತರದಲ್ಲಿ ಐಎನಡಿಐ ಎಂಬ ರಾಕ್ಷಸರು ಸೇರಿದ್ದಾರೆ. ಅವರು ಇವನ ಹೇಳಿಕೆಯ ಬಗ್ಗೆ ಸ್ಪಷ್ಟತೆ ನೀಡಬೇಕು.ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ.
ಹಿಂದೂ ಧರ್ಮದ ಬಗ್ಗೆ ಮಾತನಾಡಲು ಯಾರಿಗೂ ಬಿಡುವುದಿಲ್ಲ ಎಂದರು.
ಹರೀಶ ಕರ್ಕಿ ಮಾತನಾಡಿ,ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಕಿತ್ತೆಸೆಯಬೇಕೆಂದು ಮಾತನಾಡುತ್ತಾನೆ.ಕೆಲವರು ಹಿಂದುಗಳನ್ನು ಕೆಣಕುವುದನ್ನು ಮೊದಲಿನಿಂದ ಮಾಡುತ್ತಾ ಬಂದಿದ್ದಾರೆ.ಈ ಮೂಲಕವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ.
ತಮಿಳುನಾಡಿನ ಹಿಂದೂಗಳು ಅವರಿಗೆ ಸರಿಯಾದ ಬುದ್ಧಿ ಕಲಿಸುತ್ತಾರೆ ಎಂದರು.