ಮುಂಡಗೋಡ ಟಿಬೆಟಿಯನ್ ಕ್ಯಾಂಪನಲ್ಲಿ ಯುವಕನ ಕೊಲೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಮುಂಡಗೋಡನ ಟಿಬೆಟಿಯನ್ ಕ್ಕಾಂಪ್ ನಂಬರ್ 4ರಲ್ಲಿ ಯುವಕನ ಕೊಲೆ ನಡೆದಿದ್ದು ಆರೋಪಿಗೂ ತೀವ್ರವಾದ ಗಾಯವಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ.

ಜಮಯಾಂಗ್ ಲೋಬ್ಸಂಗ್ ಮೃತಪಟ್ಟವನಾಗಿದ್ದು ಗೊನಪ್ ಚೊಡೇಕ್ ಗಾಯಗೊಂಡಿರುವ ಆರೋಪಿಯಾಗಿದ್ದಾನೆ
ಮೃತಪಟ್ಟವನು ಹಾಗೂ ಆರೋಪಿ ಇಬ್ಬರೂ ನಿರಾಶ್ರಿತ ಕ್ಯಾಂಪನ ನಿವಾಸಿಗಳಾಗಿದ್ದು ಮಂಗಳವಾರ ರಾತ್ರಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.

ಜಗಳ ವಿಕೋಪಕ್ಕೆ ಹೋಗಿದ್ದು ಮಾರಕ ಆಯುಧಗಳಿಂದ ಬಡಿದಾಡಿಕೊಂಡಿದ್ದಾರೆ ಮೃತ ಜಮಾಯಂಗ್ ಲೋಬ್ಸಂಗ್ ಆರೋಪಿತ ಗೊನಪ್ ಜೊಡೇಕ್ ಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದರೆ.ಗೊನಪ್ ಚಾಕುವಿನಿಂದ ಇರಿದಿದ್ದಾನೆ ಇದರಿಂದ ಜಮಾಯಂಗ್ ಸ್ಥಳದಲ್ಲೆ ಮೃತಪಟ್ಟರೆ ಗೊನಪನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About the author

Adyot

Leave a Comment