ಬನವಾಸಿ: ಕೊಲೆ ಪ್ರಕರಣ ಮೂವರು ಆರೋಪಿಗಳ ಬಂಧನ

ಆದ್ಯೋತ್ ಸುದ್ದಿನಿಧಿ:
ಸೆಪ್ಟಂವರ್-15 ರಂದು ಉತ್ತರಕನ್ನಡ ಜಿಲ್ಲೆ ಬನವಾಸಿ ಕೊರ್ಲಕಟ್ಟಾ ಅರಣ್ಯಪ್ರದೇಶದಲ್ಲಿ ಸಿಕ್ಕಿದ್ದ ಅಪರಿಚಿತ ಶವದ ಗುರುತು ಪತ್ತೆ ಹಚ್ಚುವಲ್ಲಿ ಮತ್ತು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾನಗಲ್ ತಾಲೂಕಿನ ಅಶೋಕ ಉಪ್ಪಾರ ಕೊಲೆಯಾದ ವ್ಯಕ್ತಿಯಾಗಿದ್ದು ಅವನ ಜೊತೆ ಕೆಲಸ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ಸುರಳೇಶ್ವರ,ನಿರಂಜನ ತಳವಾರ,ಗುಡ್ಡಪ್ಪ ತಿಳವಳ್ಳಿ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ.



ಹಣದ ವಿಚಾರವಾಗಿ ಮೂವರು ಆರೋಪಿಗಳು ಹಾಗೂ ಅಶೋಕ ಉಪ್ಪಾರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಇದೇ ಕಾರಣದಿಂದ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

About the author

Adyot

Leave a Comment