ಅರಣ್ಯ ಸಚೀವರ ಪತ್ರ ಬಹಿರಂಗ,ಆತಂಕದಲ್ಲಿ ಅರಣ್ಯ ಒತ್ತುವರಿದಾರರು

ಆದ್ಯೋತ್ ಸುದ್ದಿನಿಧಿ:
ಈ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುನ್ನಲೆಗೆ ಬಂದು ಜಿಲ್ಲೆಯ ಬಿಜೆಪಿ ಘಟಾನುಘಟಿ ನಾಯಕರ ಸೋಲಿಗೆ ಕಾರಣವಾದ ಅರಣ್ಯ ಅತಿಕ್ಮಣದಾರರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬ ವಿಷಯ ಭೂತ ಈಗ ಪುನಃ ಎದ್ದು ಬಂದಿದೆ.

ಇದಕ್ಕೆ ಕಾರಣ ಅರಣ್ಯ ಸಚೀವ ಈಶ್ವರ ಖಂಡ್ರೆಯವರು ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗೆ ಸೆಪ್ಟಂಬರ್ 22ರಂದು ಬರೆದ ಪತ್ರ ಬಹಿರಂಗವಾಗಿರುವುದು‌.
ಸರಕಾರ,ಕೋರ್ಟನ ಆದೇಶಗಳಿದ್ದರೂ ಅತಿಕ್ರಮಣಗೊಂಡ ಭೂಮಿಯನ್ನು ಖುಲ್ಲಾ ಪಡಿಸುವ ಕೆಲಸ ಆಗಿಲ್ಲ ಇದಕ್ಕೆ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯೇ ಕಾರಣ ಕಂದಾಯ ಇಲಾಖೆಯವರೊಡನೆ ಸಮನ್ವಯ ಸಾಧಿಸಿ ಈ ಕೆಲಸವನ್ನು ಮಾಡಬೇಕಾಗಿತ್ತು.
ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಒತ್ತುವರಿ ಪ್ರಕರಣಗಳನ್ನು ತೆರವುಗೊಳಿಸಲು ಹಾಗೂ ನ್ಯಾಯಾಲಯ ಮತ್ತು ಇಲಾಖೆಯ ವಿವಿಧ ಹಂತಗಳಲ್ಲಿ ಬಾಕಿಯಿರುವ ಒತ್ತುವರಿ ತೆರವು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಹಾಗೂ ಅಗತ್ಯ ಅನುಸರಣಾ ಕ್ರಮಗಳನ್ನು ಕಾಲಮಿತಿಯಲ್ಲಿ ಕೈಗೊಳ್ಳಲು ರಾಜ್ಯಮಟ್ಟದ ಒಂದು ಕಾರ್ಯಪಡೆ ಹಾಗೂ ಹೆಚ್ಚು ಒತ್ತುವರಿ ಪ್ರಕರಣಗಳರುವ ಬೆಂಗಳೂರು ನಗರ ಜಿಲ್ಲೆಗೆ ಒಂದು ಪ್ರತ್ಯೇಕ ಕಾರ್ಯಪಡೆಯನ್ನು ರಚಿಸುವುದು ಸೂಕ್ತವೆಂದು ಅಭಿಪ್ರಾಯಿಸಲಾಗಿದೆ. ಇಲಾಖೆಯ ಉನ್ನತಮಟ್ಟದ ಅಧಿಕಾರಿಯ ನೇತೃತ್ವದ ಕಾರ್ಯಪಡೆಯನ್ನು, ಕಂದಾಯ ಇಲಾಖೆ, ಗೃಹ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಇತರೆ ಸಂಬಂಧಿತ ಇಲಾಖೆಯ ಅಧಿಕಾರಿಗಳು / ನುರಿತ ವಿಷಯತಜ್ಞರನ್ನೊಳಗೊಂಡಂತೆ ರಚಿಸಬೇಕಾಗಿರುತ್ತದೆ.
ಅರಣ್ಯ ಇಲಾಖೆಯ ಹಾಗೂ ಕಂದಾಯ ಇಲಾಖೆಯಲ್ಲಿ ನಿಯಮಾನುಸಾರ ಅನುಸರಿಸುವ ಪದ್ಧತಿ ಹಾಗೂ ಲಭ್ಯವಿರುವ ಮಾಹಿತಿ ಮತ್ತು ತಂತ್ರಜ್ಞಾನವನ್ನು ಬಳಸಿ ಅರಣ್ಯದ ಭೌಗೋಳಿಕ ಪ್ರದೇಶಗಳಲ್ಲಾಗಿರುವ ಬದಲಾವಣೆಯ (ಉಪಗ್ರಹದ ಹಿಂದಿನ ಮತ್ತು ಇಂದಿನ ನಕ್ಷೆ ಬಳಸುವುದು) ಮಾಹಿತಿಯನ್ನು ಪರಿಗಣಿಸುವುದು. ಜೊತೆಗೆ ನ್ಯಾಯಾಲಯದಲ್ಲಿರುವ ಒತ್ತುವರಿ ಪ್ರಕರಣಗಳ ವಿಚಾರದಲ್ಲಿ ಸೂಕ್ತ ದಾಖಲೆ ಒದಗಿಸಲು, ಅಫಿಡವಿಟ್‌ ಸಲ್ಲಿಸಲು ಸರ್ಕಾರಿ ವಕೀಲರಿಗೆ ನೆರವಾಗಲು ಮತ್ತು ಅರಣ್ಯ ಒತ್ತುವರಿ, ಅಕ್ರಮ ಮರ ಕಡಿತಲೆ, ದಾಸ್ತಾನಿನ ಸಂದರ್ಭದಲ್ಲಿ online FIR ಸಲ್ಲಿಸಲು ವ್ಯವಸ್ಥೆ ಮಾಡಬೇಕಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ, ತಮ್ಮ ಅಭಿಪ್ರಾಯದೊಂದಿಗೆ ಕಡತವನ್ನು ಮಂಡಿಸಬೇಕು. ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಈ ಕುರಿತು ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,ರಾಜ್ಯ ಕಾಂಗ್ರೆಸ್ ಸರ್ಕಾರ ಅರಣ್ಯ ಅತಿಕ್ರಮಣ ದಾರರ ವಿಚಾರದಲ್ಲಿ ಬೇಜವಾಬ್ದಾರಿ ಯಿಂದ ನಡೆದುಕೊಳ್ಳುತ್ತಿದೆ.ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೆಪ್ಟೆಂಬರ-22 ರಂದು ನ್ಯಾಯಾಲಯ ಮತ್ತು ಅರಣ್ಯ ಇಲಾಖೆ ಯಲ್ಲಿನ ಒತ್ತುವರಿ ಪ್ರಕರಣಗಳನ್ನು ತೆರುವುಗೊಳಿಸಲು ಸಂಬಂಧಿಸಿ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯ ಮುಖ್ಯ ಕಾರ್ಯದರ್ಶಿ ಗಳಿಗೆ ಬರೆದ ಟಿಪ್ಪಣಿಯು ಅರಣ್ಯ ಅತಿಕ್ರಮಣದಾರರ ಜೀವನದ ಭದ್ರತೆಯನ್ನು ಪ್ರಶ್ನಿಸುವ ಪತ್ರವಾಗಿದೆ. ಇದನ್ನು ಭಾರತೀಯ ಜನತಾ ಪಕ್ಷ ಖಂಡಿಸುತ್ತವೆ.
ಅತಿಕ್ರಮಣದಾರರನ್ನು ಹೀನಾಯವಾಗಿನೋಡಬಾರದು.ಹಗಲುವೇಷದ ಹೋರಾಟದಿಂದ ನ್ಯಾಯ ಸಿಗುವುದಿಲ್ಲ. ರಾಜಕಾರಣ ಮಾಡದೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು.ಜಿಲ್ಲೆಯ ಕಾಂಗ್ರೆಸ್ ನಾಯಕರು ಎನು ಮಾಡುತ್ತಿದ್ದಾರೆ.ಯಾವುದೇ ಕಾರಣಕ್ಕೂ ಅರಣ್ಯ ಅತಿಕ್ರಮಣ ದಾರರನ್ನು ಒಕ್ಕಲೆಬ್ಬಿಸಲು ನಾವು ಬಿಡುವುದಿಲ್ಲ.ಅವರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ.

ಈ ಬಗ್ಗೆ ಕಳೆದ 30 ವರ್ಷದಿಂದ ಹೋರಾಟ ನಡೆಸುತ್ತಿರುವ
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸಚಿವರ ಟಿಪ್ಪಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿವಿಧ ಹಂತಗಳಲ್ಲಿ ಬಾಕಿ ಇರುವ ಒತ್ತುವರಿ ತೆರವು ಪ್ರಕರಣ ತ್ವರಿತವಾಗಿ ಕಾಲಮಿತಿಯಲ್ಲಿ ಜರುಗಿಸಲು ರಾಜ್ಯಮಟ್ಟದ ಕಾರ್ಯಪಡೆ ರಚಿಸುವ ಅಭಿಪ್ರಾಯ ವ್ಯಕ್ತಪಡಿಸಿ, ಲಿಖಿತ ಟಿಪ್ಪಣೆಯ ಮೂಲಕ ನಿರ್ಧೇಶನವನ್ನ ಅರಣ್ಯ ಸಚಿವರು ಹಿರಿಯ ಅಧಿಕಾರಿಗೆ ನಿಡಿರುವುದರಿಂದ ಅರಣ್ಯವಾಸಿಗಳಲ್ಲಿ ಆತಂಕ ಉಂಟಾಗಿದೆ ಮನಮೋಹನಸಿಂಗ್ ಪ್ರಧಾನ ಮಂತ್ರಿಯಾಗಿರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಾಗುವಳಿ ಹಕ್ಕಿಗೆ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳಿಗೆ ನೀಡಬೇಕಾದ ಕಾನೂನು ಬದ್ಧ ರಕ್ಷಣೆ ಹಾಗೂ ಹಕ್ಕಿನ ಕುರಿತು ಉಲ್ಲೇಖಿಸದೇ, ಹಳೆಯ ಅರಣ್ಯ ಒತ್ತುವರಿ ಪ್ರದೇಶದಿಂದ ಒಕ್ಕಲೆಬ್ಬಿಸುವ ಕುರಿತು ಕಾನೂನು ಕ್ರಮ ಬಿಗಿಗೊಳಿಸಲು ನಿರ್ಧೇಶನ ನೀಡಿರುವುದು ಹಾಗೂ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿರುವುದು ವಿಷಾದಕರ
ಅರಣ್ಯ ಒತ್ತುವರಿ ಹಾಗೂ ಅರಣ್ಯ ಕಾಯಿದೆ ಅಡಿಯಲ್ಲಿ ಇನ್ನೀತರ ಕಾನೂನು ಉಲ್ಲಂಘನೆಗೆ ಸಚಿವರು ಆನ್‌ಲೈನ್ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ದಾಖಲಿಸಲು ಸೂಚನೆ ನೀಡಿರುವುದು ಆಘಾತಕಾರಿ ಬೆಳವಣಿಗೆ ಆಗಿದ್ದು ಇದರ ದುರಪಯೋಗ ಅರಣ್ಯವಾಸಿಗಳ ಮೇಲೆ ಆಗಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ

About the author

Adyot

Leave a Comment