ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ತಾಲೂಕು ಕ್ರೀಡಾಂಗಣದಲ್ಲಿ ಸ್ಥಳೀಯ ಬಿಜೆಪಿ,ಕೋಲಸಿರ್ಸಿ ಗ್ರಾಪಂ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸ್ವಚ್ಛತಾಕಾರ್ಯಕ್ರಮ ನಡೆಯಿತು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚೀವ ಎ.ನಾರಾಯಣಸ್ವಾಮಿ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಾಳೆ ಗಾಂಧಿ ಜಯಂತಿಯ ಪ್ರಯುಕ್ತ ಇಡೀ ದೇಶದಾದ್ಯಂತ ಪ್ರತಿಯೊಬ್ಬರು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಸಂದೇಶ ನೀಡಿದ್ದಾರೆ ಆ ಸಂದೇಶದ ಅನುಸಾರವಾಗಿ ಪ್ರತಿಯೊಬ್ಬರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಈ ಸೇವಾ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ಖಾದಿ ಮಾರಾಟಕ್ಕೆ ಗಾಂಧೀಜಿ ಒತ್ತು ಕೊಟ್ಟಿದ್ದರು. ಅದೇ ರೀತಿ ಮೋದಿಯವರು ಖಾದಿ ಮಾರಾಟಕ್ಕೆ ಒತ್ತು ನೀಡುತ್ತಿದ್ದಾರೆ ಹಾಗಾಗಿ ನಾಳೆ ಗಾಂಧಿ ಜಯಂತಿ ದಿನದಂದು ಖಾದಿ ಬಳಕೆಯ ಕುರಿತು ಸ್ವಚ್ಛತಾ ಆಂದೋಲನದ ಜೊತೆ ಖಾದಿ ಬಳಕೆಯ ಕುರಿತು ದೇಶಾದ್ಯಂತ ಅಭಿಯಾನ ಆಗಲಿದೆ. ಎಲ್ಲರೂ ಖಾದಿಯನ್ನು ಬಳಸುವ ಮೂಲಕ ಖಾದಿಯನ್ನು ಉಳಿಸಬೇಕು ಎಂದು ಹೇಳಿದರು.
ನರೇಂದ್ರ ಮೋದಿ ಅವರ ಬಗ್ಗೆ ಇಂದು ಇಡೀ ವಿಶ್ವವೇ ಹೆಮ್ಮೆಯಿಂದ ಮಾತನಾಡುತ್ತಿದೆ ಮೂಲಭೂತ ಸೌಕರ್ಯಗಳನ್ನು ನೀಡುವುದರ ಜೊತೆಗೆ ಪ್ರತಿಯೊಬ್ಬರಿಗೂ ಮನೆ ಹಾಗೂ ನೆಲೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ ಅದರ ಜೊತೆ ಜೊತೆಗೆ ಇಡೀ ದೇಶದ ಸಂಸ್ಕೃತಿಯನ್ನು ಇಡೀ ದೇಶದ ಜ್ಞಾನವನ್ನು ವಿಜ್ಞಾನವನ್ನು ಜಿ-೨೦ ಮುಖಾಂತರ ಈ ದೇಶದಲ್ಲಿರುವ ಅನೇಕ ಟೂರಿಸಂ ಸ್ಥಳಗಳನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೂ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ. ಮಹಿಳೆಯರಿಗೆ ಶೇ.೩೩ ಮೀಸಲಾತಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು ಅದನ್ನು ಮೋದಿಯವರ ನೇತೃತ್ವದಲ್ಲಿ ಈಡೇರಿಸಲಾಗಿದೆ ಎಂದರು
ಮಾಜಿಸ್ಪೀಕರ್ ವಿಶ್ವೇಶ್ವರ ಹೆಗಡೆ ಮಾತನಾಡಿ, ಚಿತ್ರದುರ್ಗದ ಸಂಸದರಾದ ಎ. ನಾರಾಯಣ ಸ್ವಾಮಿ ರವರು ನಮಗೆಲ್ಲ ಚಿರಪರಿಚಿತರಾಗಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿ ಉತ್ತಮ ರೀತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರು ಸ್ವಯಂ ಪ್ರೇರಿತರಾಗಿ ಇಂದಿನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮಗೆ ಅತೀವ ಸಂತೋಷವಾಗಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಕ್ಟೋಬರ್ ೧ ನೇ ತಾರೀಕು ೧೦ರಿಂದ ೧೧ ಗಂಟೆಯವರೆಗೆ ಇಡೀ ದೇಶಾದ್ಯಂತ ಎಲ್ಲರೂ ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಬೇಕೆಂದು ಹೇಳಿದ್ದಾರೆ. ಕೇಂದ್ರ ಸಚಿವರೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಿದ್ದಾಪುರ ಜನತೆಗೆ ಹಾಗೂ ಈ ಜೆಲ್ಲೆಯ ಜನತೆಗೆ ಬಹಳ ಹೆಮ್ಮೆ ತರುವ ವಿಷಯವಾಗಿದೆ ಎಂದು ಹೇಳಿದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ, ಮುಖಂಡರಾದ ರವಿ ಹೆಗಡೆ, ಡಾ.ಶಶಿಭೂಷಣ ಹೆಗಡೆ ರಾಘವೇಂದ್ರ ಶಾಸ್ತಿç,ತಿಮ್ಮಪ್ಪ ಹಿತ್ತಲಕೊಪ್ಪ,ಆದರ್ಶ ಪೈ,ವಿನಾಯಕ ಕೆ.ಆರ್. ಕೋಲಸಿರ್ಸಿ ಗ್ರಾಪಂ ಸಿಬ್ಬಂದಿಗಳು,ಧನ್ವಂತರಿ ಕಾಲೇಜ್‌ನ ಪ್ರಿನ್ಸಿಪಾಲ್ ಡಾ.ರೂಪಾ ಭಟ್ಟ ಮತ್ತು ವಿದ್ಯಾರ್ಥಿಗಳು. ನಿವೇದಿತಾ ಮಹಿಳಾಮಂಡಳಿಯ ಸದಸ್ಯರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.