ಜನಪ್ರತಿನಿಧಿಗಳು ರಿಯಾಲಿಟಿ ಶೋ ನಲ್ಲಿ ಭಾಗವಹಿಸುವುದು ಎಷ್ಟು ಸರಿ?

ಆದ್ಯೋತ್ ಸುದ್ದಿನಿಧಿ:
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರರವರು ಟಿವಿ ಚಾನಲ್ ಒಂದರ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದಾರೆ.ಇದು ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದು ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

ಈ ರಿಯಾಲಿಟಿ ಶೋ ನೂರು ದಿನಗಳದ್ದಾಗಿದ್ದು ಹೊರಲೋಕದ ಸಂಪರ್ಕವಿಲ್ಲದೆ ಒಂದಿಷ್ಟು ಜನರ ಜೊತೆಗೆ ಒಂದು ಮನೆಯಲ್ಲಿ
ಇರಬೇಕಾಗಿದೆ.ಪ್ರದೀಪ ಈಶ್ವರ ಸ್ಪರ್ಧಿಯಾಗಿ ಹೋಗಿದ್ದಾರೋ,ಅತಿಥಿಯಾಗಿ ಹೋಗಿದ್ದಾರೋ ಸಂಬಂಧಿಸಿದ ಯಾರೂ ಸ್ಪಷ್ಟಪಡಿಸುತ್ತಿಲ್ಲ.

ಜನರಿಂದ ಆಯ್ಕೆಯಾಗಿ ಹೋದವರು ನೂರು ದಿನಗಳ ಕಾಲ ಜನರಿಗೆ ಸಿಗದೆ,ಜನರ ಸಮಸ್ಯೆಗಳಿಗೆ ಧ್ವನಿಯಾಗದೆ ಇರುವುದು ಸರಿಯಲ್ಲ. ಚಿಕ್ಕಬಳ್ಳಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.ರೈತರ ಸಮಸ್ಯೆ ಇದೆ ಅತಿ ಹೆಚ್ಚು ಟೊಮೋಟೊ ಬೆಳೆಯುವ ಪ್ರದೇಶವಾಗಿದ್ದು ಇದರ ಸಂರಕ್ಷಣೆ,ಮಾರಾಟದ ಬಗ್ಗೆ ಯೋಜನೆ ರೂಪಿಸ ಬೇಕಾಗಿದೆ,ರಸ್ತೆಗಳು ಹಳ್ಳಗಳಾಗಿವೆ ಮಳೆ ಕೈಕೊಟ್ಟು ಬರಗಾಲವಾಗಿದೆ ರೈತರು ಹತಾಶರಾಗಿದ್ದು ಅವರಿಗೆ ಧೈರ್ಯ ತುಂಬ ಬೇಕಾಗಿದೆ ಇಂತಹ ಸಮಯದಲ್ಲಿ ಕ್ಷೇತ್ರದ ಜನರ ಜೊತೆಗೆ ಇರಬೇಕಾದವರು ರಿಯಾಲಿಟಿ ಶೋ ಗೆ ಹೋಗಿ ಕುಳಿತಿರುವುದು ಸರಿಯಲ್ಲ ಎಂದು ಜನರು ಹೇಳುತ್ತಿದ್ದಾರೆ.

ಜನಪ್ರತಿನಿಧಿಯಾದವನು ಮನುಷ್ಯನೆ ಅವನಿಗೆ ಅವನದೇ ಆದ ಬೇಕು ಬೇಡಗಳು ಇರುತ್ತವೆ. ಯಾವುದೇ ಸಮಸ್ಯೆ ನೂರು ದಿನದಲ್ಲಿ ಬಗೆಹರಿಯಲು ಸಾಧ್ಯವಿಲ್ಲ ವಿಷಯಜ್ಞಾನ ಹೆಚ್ಚಿಸಿಕೊಳ್ಳಲು,ಅನುಭವಗಳಿಸಲು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ತಪ್ಪೇನು? ಎಂಬ ವಾದವೂ ಇದೆ.
ನಿಜಲಿಂಗಪ್ಪ,ಕಡಿದಾಳ ಮಂಜಪ್ಪ,ದೇವರಾಜ ಅರಸು,ವೀರೇಂದ್ರ ಪಾಟೀಲ,ರಾಮಕೃಷ್ಣ ಹೆಗಡೆ ಇಂತಹ ಮಹಾಮುತ್ಸದ್ದಿಗಳು ಜನಪ್ರತಿನಿಧಿಗಳಾಗಿ ಮುನ್ನಡೆಸಿದ ರಾಜ್ಯದಲ್ಲಿ ಇಂತಹ ಹುಚ್ಚಾಟದವರು ಜನಪ್ರತಿನಿಧಿಗಳಾಗಿದ್ದಾರಲ್ಲ ಎನ್ನುವ ಕೊರಗು ಒಂದಿಷ್ಟು ಜನರಲ್ಲಿ ಕಾಣಿಸಿದೆ
ರಿಯಾಲಿಟಿ ಶೋನಲ್ಲಿ ಶಾಸಕ ಪ್ರದೀಪ ಈಶ್ವರ ಭಾಗವಹಿಸಿರುವುದು ಸರಿಯೋ? ತಪ್ಪೊ? ಎಂಬ ಬಗ್ಗೆ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಸಲುವಾಗಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆದ್ಯೋತ್ ವೆಬ್ ನ್ಯೂಸ್ ಮತದಾನ ನಡೆಸುತ್ತಿದೆ ದಿ.10102023 ಮಂಗಳವಾರ ಬೆಳಿಗ್ಗೆ8 ರಾತ್ರಿ8 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದ್ದು ಸರಿ/ ತಪ್ಪುಗಳ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬೇಕು ಎಂದು ಕೋರುತ್ತಿದ್ದೆವೆ

About the author

Adyot

Leave a Comment