ಕಾರವಾರದಲ್ಲಿ ಅಂಬೇಡ್ಕರಗೆ ಅವಮಾನ ಮಾಡಿದವರನ್ನು ಬಂಧಿಸಲು ಆಗ್ರಹ

ಆದ್ಯೋತ್ ಸುದ್ದಿನಿಧಿ:
ಹಲವಾರು ವರ್ಷದಿಂದ ಕಾರವಾರದ ಪಂಚತಾರ ಹೊಟೆಲ್ ಸಮೀಪದ ರಿಕ್ಷಾನಿಲ್ದಾಣಕ್ಕೆ ಅಂಬೇಡ್ಕರ ಹೆಸರಿದ್ದು ಕಳೆದ ಮೂರು-ನಾಲ್ಕು ದಿನದ ಹಿಂದೆ ಕೆಲವರು ಅಂಬೇಡ್ಕರ್ ಭಾವಚಿತ್ರ ಹಾಗೂ ನಾಮಫಲಕವನ್ನು ಹರಿದು,ಕಾಲಲ್ಲಿ ತುಳಿದು ಅವಮಾನ ಮಾಡಿದ್ದಾರೆ ಇಂತಹ ದುಷ್ಕರ್ಮಿಗಳನ್ನು ಇಲ್ಲಿಯವರೆಗೂ ಬಂಧಿಸದೆ ಬಿಟ್ಟಿರುವುದು ಆಶ್ಚರ್ಯ ಉಂಟು ಮಾಡುತ್ತಿದ್ದು ಕೂಡಲೇ ಈ ದುಷ್ಕರ್ಮಿಗಳನ್ನು ಬಂಧಿಸಿ ಎಸ್.ಸಿ.ಎಸ್.ಟಿ. ದೌರ್ಜನ್ಯ ಕೇಸ್ ದಾಖಲಿಸಬೇಕು ಎಂದು ದಲಿತಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಸ್.ಫಕೀರಪ್ಪ ಮುಂಡಗೋಡು ಹೇಳಿದ್ದಾರೆ

ಈ ಕುರಿತು ಅವರು ಸಿದ್ದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾರವಾರ ಘಟನೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ,ಪೊಲೀಸ್ ವರಿಷ್ಠರಿಗೆ ದೂರು ನೀಡಲಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಯಾರನ್ನೋ ರಕ್ಷಿಸುವ ಕೆಲಸವನ್ನು ಮಾಡಲಾಗುತ್ತಿದೆ ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಒಳಗಾಗಿದ್ದಾರೆ ತಕ್ಷಣದಲ್ಲಿ ದೌರ್ಜನ್ಯ ಎಸಗಿದವರನ್ನು ಬಂಧಿಸಿ ಎಸ್‌ಸಿ ಎಸ್‌ಟಿ ದೌರ್ಜನ್ಯ ಕೇಸ್ ದಾಖಲಿಸದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಗಳ ಕಚೇರಿಯ ಎದುರು ಹಾಗೂ ತಾಲೂಕು ಕೇಂದ್ರದಲ್ಲಿ ತಹಸೀಲ್ದಾರ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಆದರೆ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ದಲಿತರು ತಲೆತಲಾಂತರದಿಂದ ಅರಣ್ಯ ಭೂಮಿಯಲ್ಲಿ ಮನೆಕಟ್ಟಿಕೊಂಡು ಬೇಸಾಯ ಮಾಡಿಕೊಂಡು ಇದ್ದಾರೆ ಆದರೆ ಅರಣ್ಯ ಇಲಾಖೆಯವರು ಮತ್ತು ಸಂಬಂಧಿಸಿದ ಇಲಾಖೆಯವರು ಜಿಪಿಎಸ್ ಮಾಡಿಕೊಡದೆ ತೊಂದರೆ ಕೊಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ದಲಿತರಿಗೆ ಭೂಮಿ ಮಂಜೂರು ಮಾಡಿಕೊಡಬೇಕು ಸರಕಾರ ದಲಿತರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಮಾಡುತ್ತಿದೆ ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳವರು ಈ ಯೋಜನೆಗಳಿಗೆ ಸಾಲ ನೀಡುತ್ತಿಲ್ಲ ಅಲ್ಲದೆ ಆಸ್ತಿ ಅಡಮಾನವಿಡುತ್ತೆನೆಂದರೂ ಸಾಲ ಕೊಡುತ್ತಿಲ್ಲ ಇದರಿಂದ ನಮ್ಮ ಜನಾಂಗದವರು ಸ್ವಂತ ಉದ್ಯೋಗ ಮಾಡಲಾಗದೆ ಅಸಹಾಯಕರಾಗಿದ್ದಾರೆ ಸಿದ್ದಾಪುರ ತಾಲೂಕು ಸೇರಿದಂತೆ ಎಲ್ಲಾ ಕಡೆಗಳಲ್ಲೂ ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ಅಂಗಡಿಗಳಲ್ಲೂ ಅಕ್ರಮಸಾರಾಯಿ ಮಾರಾಟ ಮಾಡಲಾಗುತ್ತಿದೆ ಇದರಿಂದ ಯುವ ಜನಾಂಗ ಹಾಳಾಗುತ್ತಿದ್ದು ಕೂಡಲೆ ಈ ಅಕ್ರಮ ಸಾರಾಯಿ ಮಾರಾಟವನ್ನು ತಡೆಯಬೇಕು ಇಲ್ಲವಾದಲ್ಲಿ ದಲಿತಸಂಘರ್ಷ ಸಮಿತಿ ಉಗ್ರಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.

ದಸಂಸನ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಕೆ.ಶಿವಾನಂದ ಮಾತನಾಡಿ,ಸಿದ್ದಾಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯವರ ದೌರ್ಜನ್ಯ ಮಿತಿಮೀರಿದೆ. ಬೇಡ್ಕಣಿ ಗ್ರಾಮದ ಸರ್ವೆನಂ.೩೭ರಲ್ಲಿ ಹಂಗಾಮಿ ಲಾಗಾಣಿ ಮಂಜೂರಾಗಿದ್ದು ಆದರೆ ಅರಣ್ಯ ಅಧಿಕಾರಿಗಳು ಇದನ್ನು ಖುಲ್ಲಾಪಡಿಸಲು ಮುಂದಾಗಿದ್ದಾರೆ. ಅಲ್ಲದೆ ದಲಿತ ಕಾಲೋನಿಗೆ ಓಡಾಡುವ ರಸ್ತೆಗಳ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ದಲಿತರ ಮೇಲಾಗುತ್ತಿರುವ ಈ ದೌರ್ಜನ್ಯವನ್ನು ಜಿಲ್ಲಾಧಿಕಾರಿಗಳು ತಡೆಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಲಿತಸಂಘರ್ಷಸಮಿತಿಯ ಪದಾಧಿಕಾರಿಗಳಾದ ಗೋಪಾಲ ನಡಕೋಣೆ,ಅಣ್ಣಪ್ಪ ಹಸಲರ್,ಶಿವರಾಮ ಬೆಳ್ಳಟ್ಟೆ,ಲಕ್ಷö್ಮಣ ಬೋರ್ಕರ್,ಸಂತೋಷ ಕಟ್ಟೆಮನೆ,ಹುಲಿಯಪ್ಪ ಬೋವಿ ವಡ್ಡರ್ ಮುಂತಾಧವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ದಲಿತಸಂಘರ್ಷ ಸಮಿತಿಯ ಮಾಸಿಕ ಸಭೆಯನ್ನು ನಡೆಸಲಾಯಿತು.
——–
ಇತ್ತೀಚೆಗೆ ಸಚೀವ ಡಿ.ಸುಧಾಕರರವರು ದಲಿತ ಕುಟುಂಬದವರ ಜಮೀನನನ್ನು ಅನ್ಯಾಯದಿಂದ ಕಬಳಿಕೆ ಮಾಡಿದ್ದಲ್ಲದೆ ಸಂಬAಧಿಸಿದ ಕೇಸ್ ನ್ಯಾಯಾಲಯದಲ್ಲಿರುವಾಗ ರೌಡಿಗಳನ್ನು ಬಿಟ್ಟು ಭೂಕಬಳಿಕೆ ಮಾಡಲು ಹೊರಟಿರುವುದಲ್ಲದೆ ದಲಿತ ಕುಟುಂಬದವರ ಮೇಲೆ,ಮಹಿಳೆಯರ ಮೇಲೆ ದೌರ್ಜನ್ಯವನ್ನು ಎಸಗಿದ್ದಾರೆ. ಸರಕಾರ ಸಚೀವರ ನಡೆಯನ್ನು ಬೆಂಬಲಿಸುತ್ತಿರುವುದು ನಾಚಿಕೆಗೇಡಿತನವಾಗಿದ್ದು ಮುಖ್ಯಮಂತ್ರಿಗಳು ಕೂಡಲೇ ಈ ಸಚೀವರನ್ನು ಸಂಪುಟದಿAದ ವಜಾಗೊಳಿಸಬೇಕು ಅವರ ಮೇಲೆ ಎಸ್‌ಸಿಎಸ್‌ಟಿ ದೌರ್ಜನ್ಯ ಕೆಸ್ ದಾಖಲಿಸಿ ಬಂಧಿಸಬೇಕು ಎಂದು ಎಸ್ ಫಕೀರಪ್ಪ ಆಗ್ರಹಿಸಿದರು.
—–

About the author

Adyot

Leave a Comment