ಜಿಲ್ಲೆಯ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸಲು ಸ್ಥಳ ನಿಗದಿ

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರು,ಸಂಘಟನೆಯವರು,ರಾಜಕೀಯ ಪಕ್ಷದವರು,
ತಮ್ಮ ಬೇಡಿಕೆಗಳ ಈಡೇರಿಕೆ,ಅನ್ಯಾಯ ವಿರುದ್ದ,ತಮ್ಮ ಹಕ್ಕುಗಳ ಬಗ್ಗೆ,ಇನ್ನು ಮುಂದೆ ಪ್ರತಿಭಟನೆಯನ್ನು ಎಲ್ಲೆಂದರಲ್ಲಿ ಮಾಡುವಂತಿಲ್ಲ
ಜಿಲ್ಲಾಧಿಕಾರಿಗಳು ಎಲ್ಲಾ11ತಾಲೂಕಿನಲ್ಲೂ ಪ್ರತಿಭಟನೆ ನಡೆಸಲು ಸ್ಥಳವನ್ನು ಗುರುತಿಸಿ ಅಲ್ಲೇ ಪ್ರತಿಭಟನೆ ನಡೆಸಲುಆದೇಶಿಸಿದ್ದಾರೆ.ಕೆಲವೊಂದು ತಾಲೂಕಿನಲ್ಲಂತೂ ಪ್ರತಿಭಟನೆ ನಡೆಸುವ ಸ್ಥಳಕ್ಕೂ ತಹಸೀಲ್ದಾರ ಕಚೇರಿಗೂ ಕಿಲೋಮೀಟರ್ ನಷ್ಟು ದೂರವಿದೆ.
ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಲ್ಲದ ಈ ಆದೇಶ ನಮ್ಮ ಜಿಲ್ಲೆಗೆ ಮಾಡಿರುವುದರ ಬಗ್ಗೆ ಸಾರ್ವಜನಿಕರಲ್ಲಿ ಅಸಮಧಾನವನ್ನು ಹುಟ್ಟು ಹಾಕಿದೆ.
ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಟನೆಗಳು ಆಗಿವೆ,ಆಗುತ್ತಲೂ ಇದೆ. ಕೆಲವು ನಿರ್ಧಿಷ್ಟ ಪ್ರತಿಭಟನೆಗಳನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ಶಾಂತ ರೀತಿಯಿಂದಲೆ ನಡೆದಿದೆ‌.ಹೆಚ್ಚಿನ ಪ್ರತಿಭಟನೆಗಳು ಮನವಿ ಸಲ್ಲಿಕೆಗೆ ಸೀಮಿತವಾಗಿರುತ್ತದೆ.
ಈ ಪ್ರತಿಭಟನೆಯಿಂದ ಸಾರ್ವಜನಿಕರಿಗಾಗಲಿ,ಇಲಾಖೆಯವರಿಗಾಗಲಿ ಯಾವುದೇ ತೊಂದರೆಯಾಗಿಲ್ಲ ಹೀಗಿರುವಾಗ ಎಲ್ಲೋ ಕುಳಿತು ಪ್ರತಿಭಟನೆ ಮಾಡಿ ಎನ್ನುವುದು ಸರಿಯಲ್ಲ.ಜಿಲ್ಲೆಯ ಜನರು ಶಾಂತಪ್ರಿಯರು,ಕಾನೂನನ್ನು ಗೌರವಿಸುವವರು ಇಂತಹ ಜಿಲ್ಲೆಯ ಮೇಲೆ ಅನವಶ್ಯಕ ಆದೇಶವನ್ನು ಹೇರುವ ಮೂಲಕ ಜಿಲ್ಲಾಧಿಕಾರಿಗಳೂ ಸೇರಿದಂತೆ ಎಲ್ಲಾ ಸರಕಾರಿ ಅಧಿಕಾರಿಗಳು ಜಿಲ್ಲೆಯ ಜನರ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
######
ಪ್ರತಿಭಟನೆ ಎಲ್ಲಿ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ
ಮಾಡಿರುವುದು ಸರಿಯಲ್ಲ ಎಂದು ಜಿಲ್ಲಾ ರೈತಮುಖಂಡ ವೀರಭದ್ರ ನಾಯ್ಕ ಮಲವಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಎಲ್ಲಿ ಮಾಡಬೇಕು ಎನ್ನುವುದನ್ನು ಸರಕಾರದ ಅಧಿಕಾರಿಗಳು ತೀರ್ಮಾನಿಸುವುದಲ್ಲ. ಪ್ರತಿಭಟನೆ ಮಾಡುವುದು,ಸರಕಾರದ ಅಧಿಕಾರಿಗಳ ಗಮನ ಸೆಳೆಯಲು ಎಲ್ಲೋ ಮಾಡಲು ಬರುವುದಿಲ್ಲ. ಸಿದ್ದಾಪುರದಲ್ಲಂತೂ ಪ್ರತಿಭಟನೆಗೆ ನಿಗದಿಪಡಿಸಿದ ಸ್ಥಳಕ್ಕೂ,ತಹಸೀಲ್ದಾರ ಕಚೇರಿಗೂ ಕಿಲೋಮೀಟರ್ ದೂರವಿದೆ.ಅಲ್ಲದೆ ನೆಹರೂ ಮೈದಾನ ಮಕ್ಕಳಿಗೆ ಆಟ ಆಡಲು,ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸ್ಥಳ ಇಂತಹ ಸ್ಥಳದಲ್ಲಿ ಪ್ರತಿಭಟನೆಗೆ ಅವಕಾಶ ಕೊಟ್ಟಿರುವುದು ಸರಿಯಲ್ಲ. ನಮ್ಮ ಅಕ್ಕ-ಪಕ್ಕದ ಜಿಲ್ಲೆಯಲ್ಲಿ ಇಂತಹ ಆದೇಶ ಇಲ್ಲ‌.ಏನು ಮಾಡಿದರೂ ಜಿಲ್ಲೆಯಲ್ಲಿ ನಡೆಯುತ್ತದೆ ಎನ್ನುವ ಮನೋಭಾವನೆಯನ್ನು ಜಿಲ್ಲಾಧಿಕಾರಿಗಳು ಬಿಡಬೇಕು ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ವೀರಭದ್ರ ನಾಯ್ಜ ಆಗ್ರಹಿಸಿದ್ದಾರೆ.
#####
ಜಿಲ್ಲೆಯ ತಾಲೂಕಿನಲ್ಲಿ ಪ್ರತಿಭಟನೆ, ಧರಣಿ ಇತ್ಯಾದಿಗಳಿಗೆ ನಿಗದಿಪಡಿಸಿದ ಸ್ಥಳ
ಕಾರವಾರ:-
ತಾಲೂಕಾ ಆಡಳಿತ ಸೌಧದ ಗೇಟಿನ ಎದುರುಗಡೆಗೆ
ಅಂಕೋಲಾ
ಉಪಖಜಾನ ಪಕ್ಕದ ಕಛೇರಿ ಅವರಣದ ಹೊರಗಡೆ
ಕುಮಟಾ
ಮಣಕಿ ಗ್ರಾಮದ ಸ.ನಂ 74ಬ ನದರ ತಾಲೂಕಾ ಆಡಳಿತ ಸೌಧದ ಪಕ್ಕದಲ್ಲಿರುವ ಸೈಕ್ಲೋನ್ ಶೆಲ್ಟರ್ ಕಟ್ಟಡದ ಮುಂಭಾಗದಲ್ಲಿ
ಹೊನ್ನಾವರ
ತಾಲೂಕಾ ಆಡಳಿತ ಸೌಧ ಹಾಗೂ ಹೊನ್ನಾವರ ಪೊಲೀಸ್‌ ಠಾಣೆಗೆ ಲಗ್ತ ಇರುವ ಹೊನ್ನಾವರ ಗ್ರಾಮದ ಸ.ನಂ 578/1 ಕ್ಷೇತ್ರ 1-29-1.50 ಸರಕಾರಿ ಜಾಗ.
ಭಟ್ಕಳ
ತಾಲೂಕಿನ ಹಳೆ ತಹಶೀಲ್ದಾರ ಕಛೇರಿ ಪಕ್ಕದಲ್ಲಿರುವ ಸೂಸಗಡಿ ಗ್ರಾಮದ ಸ.ನಂ 573ಬ ಕ್ಷೇತ್ರ 0-10-0 ಜಾಗ
ಶಿರಸಿ
ತಾಲೂಕಾ ಆಡಳಿತ ಸೌಧದ ಎಡಭಾಗದಲ್ಲಿ
ಸಿದ್ದಾಪುರ
ಪಟ್ಟಣ ಪಂಚಾಯತ ವ್ಯಾಪ್ತಿಯ ನೆಹರೂ ಮೈದಾನ
ಯಲ್ಲಾಪುರ
ತಾಲೂಕಾ ಆಡಳಿತ ಸೌಧದ ಗೇಟಿನ ಎದುರುಗಡೆ
ಮುಂಡಗೋಡ
ತಾಲೂಕಾ ಆಡಳಿತ ಸೌಧದ ಮುಂಭಾಗದಲ್ಲಿ
ದಾಂಡೇಲಿ
ಸುಭಾಷ ನಗರದಲ್ಲಿರುವ ನಗರಸಭ ಸ್ಟೇಡಿಯಂ ಪೂರ್ವಭಾಗದಲ್ಲಿ 30 x 40 ಜಾಗದಲ್ಲಿ
ಜೊಯಿಡಾ
ತಾಲೂಕಾ ಕ್ರೀಡಾಂಗಣ ಜೋಯಿಡಾ

About the author

Adyot

Leave a Comment