ಆದ್ಯೋತ್ ಸುದ್ದಿನಿಧಿ:
ರಾಜ್ಯಸರಕಾರದ ಸಚೀವ ಜಮೀರ್ ಅಹ್ಮದ್ ತೆಲಂಗಾಣದ ಚುನಾವಣೆ ಪ್ರಚಾರದಲ್ಲಿ ಮುಸ್ಲಿಂ ಸ್ಪೀಕರ್‌ರನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಮುಸ್ಲಿಮರನ್ನು ಸ್ಪೀಕರ್ ಮಾಡಿರುವುದರಿಂದ ಬಿಜೆಪಿ ಶಾಸಕರು ಸಲಾಂ ನಮಸ್ಕಾರ ಮಾಡುವಂತಹ ಸ್ಥಿತಿಯನ್ನು ಕರ್ನಾಟಕದಲ್ಲಿ ನಾವು ತಂದಿದ್ದೇವೆ ಎಂದು ಹೇಳಿದ್ದಾರೆ ಇದು ಸಭಾಧ್ಯಕ್ಷ ಸ್ಥಾನಕ್ಕೆ ಅವಮಾನಿಸುವ ಕೆಲಸವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೇ ಅವರನ್ನು ವಜಾ ಮಾಡಬೇಕು,ಸಭಾಧ್ಯಕ್ಷ ಯು.ಟಿ.ಖಾದರ್ ಜಮೀರ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.
ಅವರು ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆಗ್ರಹ ಮಾಡಿದ್ದಾರೆ.
ಸಭಾದ್ಯಕ್ಷ ಸ್ಥಾನ ಸಂವಿಧಾನಿಕ ಹುದ್ದೆಯಾಗಿದ್ದು ಅದಕ್ಕೆ ಜಾತಿ,ಧರ್ಮ,ಪ್ರಾದೇಶಿಕತೆಯನ್ನು ಅಂಟಿಸುವುದು ಸರಿಯಲ್ಲ ರಾಜಕೀಯ ಸ್ವಾರ್ಥಕ್ಕೆ ಇಂತಹ ಹೇಳಿಕೆಗಳನ್ನು ಕೊಡಬಾರದು ಚುನಾವಣೆಯಲ್ಲಿ ಭಾಷಣ ಮಾಡಲಿ ಯಾರೂ ಬೇಡ ಎನ್ನುವುದಿಲ್ಲ ಜಮೀರ್ ಹೇಳಿಕೆಯ ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಇದ್ದಾರೆ ಕಾಂಗ್ರೆಸ್ ಸರಕಾರ ಇಂತಹ ತುಷ್ಟೀಕರಣ ರಾಜಕೀಯ ಮಾಡುತ್ತಿರುವುದು ಸ್ಪಷ್ಟ ಎಂದು ಹೇಳಿದರು.
ಹೊಸಶಿಕ್ಷಣ ನೀತಿ ಜಾರಿಗೆ ತರಲು ಆಗ್ರಹಿಸಿ ಸಹಿ ಸಂಗ್ರಹ
ಕಳೆದ ನಾಲ್ಕುವರ್ಷದಿಂದ ಚಿಂತನಮಂಥನ ನಡೆಸಿ ಪ್ರಧಾನಿ ನರೇಂದ್ರ ಮೋದಿಯವರು ಹೊಸಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ ಆದರೆ ಸಿದ್ದರಾಮಯ್ಯ ಸರಕಾರ ಇದನ್ನು ಬಿಟ್ಟು ರಾಜ್ಯಶಿಕ್ಷಣ ನೀತಿ ತರುತ್ತೇನೆ ಪಠ್ಯಪುಸ್ತಕ ಬದಲಾವಣೆ ಮಾಡುತ್ತೇವೆ ಎಂದು ಹೊರಟಿದ್ದಾರೆ ಈ ಬಗ್ಗೆ ಶಿಕ್ಷಣ ಸಚೀವ ಮಧುಬಂಗಾರಪ್ಪನವರು ತನಗೇನು ಗೊತ್ತಿಲ್ಲ ಇದು ಕ್ಯಾಬಿನೆಟ್
ತೀರ್ಮಾನ ಎನ್ನುತ್ತಾರೆ ಅವರ ಗಮನಕ್ಕೂ ಬರದೆ ಬದಲಾವಣೆಯಾಗುತ್ತಿದೆ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆವೆ ಅದಕ್ಕೆ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ ಎಡಪಂಥೀಯರ ಕೈಗೊಂಬೆಯಾಗಿರುವ ಸಿದ್ದರಾಮಯ್ಯನವರು ಒಟ್ಟಾರೆ ಶಿಕ್ಷಣ ಕ್ಷೇತ್ರದಲ್ಲಿ ಗೊಂದಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ರಾಜ್ಯದ ಕೆಲವು ಶಿಕ್ಷಣ ಸಂಸ್ಥೆಗಳು,ಸಂಘಟನೆಗಳು ಹಾಗೂ ನಮ್ಮ ಪಕ್ಷದವರು ಸೇರಿ ನ.೧೫ ರಿಂದ ನ.೩೦ರವರೆಗೆ ಹೊಸಶಿಕ್ಷಣ ನೀತಿಯನ್ನು ಜಾರಿಗೆ ತರುವಂತೆ ಸಹಿಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಕಾನೂನು ಹದಗೆಟ್ಟಿದೆ
ರಾಜ್ಯದ ಎಲ್ಲಾ ಭಾಗದಲ್ಲಾಗಿರುವಂತೆ ಸಿದ್ದಾಪುರದಲ್ಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಕಾಂಗ್ರೆಸ್ ಪಕ್ಷದವರೆ ಪ್ರತಿಭಟನೆ ನಡೆಸಿ ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆಗೆ ಒತ್ತಡ ತರುತ್ತಿದ್ದಾರೆ ಪೊಲೀಸ್ ಠಾಣೆಯಲ್ಲಿ ಅಪರಾಧಿಗಳನ್ನು ಬಂಧಿಸಬೇಕೋ ಬೇಡವೋ ಎಂಬ ಗೊಂದಲ ಉಂಟಾಗಿದೆ, ಬೆಳ್ಳಟ್ಟೆಯಲ್ಲಿ ಗಂಧದಮರ ಕಳ್ಳತನ ನಿರಂತರವಾಗಿ ನಡೆಯುತ್ತಿದೆ ಅರಣ್ಯ ಅಧಿಕಾರಿಗಳಿಗೆ ಕಳ್ಳರ ಬಗ್ಗೆ ಮಾಹಿತಿ ಇದ್ದರೂ ಒತ್ತಡದಿಂದ ಬಂಧಿಸಲಾರದವರಾಗಿದ್ದಾರೆ ಸಾರಾಯಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಮಹಿಳಾ ಸಂಘಟನೆಗಳವರು,ಪ್ರಜ್ಞಾವAತ ನಾಗರೀಕರು ಧ್ವನಿ ಎತ್ತಲು ಅನುಮಾನ ಪಡುತ್ತಿದ್ದಾರೆ ಒಟ್ಟಾರೆ ತಾಲೂಕಿನಲ್ಲಿ ಸಾರ್ವಜನಿಕರಿಗೆ,ಅಧಿಕಾರಿಗಳಿಗೆ ಭಯದ ವಾತಾವರಣ ಇದೆ ಶಾಸಕರು,ಉಸ್ತುವಾರಿ ಸಚೀವರು,ಸರಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನದಿನಗಳಲ್ಲಿ ಅನಾಹುತವಾಗುತ್ತದೆ ಎಂದು ಕಾಗೇರಿ ಎಚ್ಚರಿಸಿದರು.