ವಿಧಾನಪರಿಷತ್ ಚುನಾವಣೆ ಸಮಬಲ ಸ್ಥಾಪಿಸಿದ ಬಿಜೆಪಿ- ಕಾಂಗ್ರೆಸ್, ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಜೆಡಿಎಸ್

ಆದ್ಯೋತ್ ಸುದ್ದಿನಿಧಿ:
ರಾಜ್ಯಾದ್ಯಂತ ಡಿ.10ರಂದು ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲವನ್ನು ಸಾಧಿಸಿದ್ದು ತಲಾ 11 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.
ಆದರೆ ಜೆಡಿಎಸ್ ಹಾಸನ ಹಾಗೂ ಮೈಸೂರಿನಲ್ಲಿ
ಗೆಲುವು ಸಾಧಿಸಿದರೂ ಕಳೆದ ಬಾರಿ ಗೆದ್ದುಕೊಂಡಿದ್ದ 3 ಸ್ಥಾನವನ್ನು ಕಳೆದುಕೊಂಡಿದೆ. ಇನ್ನೂ ಬೆಳಗಾವಿಯಲ್ಲಿ ಲಖನ್ ಜಾರಕಿಹೊಳಿ ಗೆಲುವನ್ನು ಸಾಧಿಸಿದ್ದರೂ ಪ್ರಥಮ ಪ್ರಾಶಸ್ತ್ಯ ಮತವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.ಆದಾಗ್ಯೂ ಜಾರಕಿಹೊಳಿ ಸಹೋದರರು ತಮ್ಮನ್ನು ಯಾವ ಪಕ್ಷದವರೂ ಕಡೆಗಣಿಸುವಂತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ಅವಿಭಜಿತ ದಕ್ಷಿಣಕನ್ನಡದಲ್ಲಿ ಕೋಟಾ ಶ್ರೀನಿವಾಸ ಪೂಜಾರಿಯವರು ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ.


ಮೈಸೂರು, ರಾಯಚೂರು, ಬೆಳಗಾವಿ, ಮಂಡ್ಯ,ಧಾರವಾಡ,ದಕ್ಷಿಣಕನ್ನಡ,ಕೋಲಾರ,ಬೆಂಗಳೂರು ಗ್ರಾಮಾಂತರ,ತುಮಕೂರು,ವಿಜಯಪುರ,ಬೀದರನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಉತ್ತರ ಕನ್ನಡ, ಧಾರವಾಡ,ಶಿವಮೊಗ್ಗ,ದಕ್ಷಿಣಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ವಿಜಯಪುರ, ಬಳ್ಳಾರಿ, ಬೆಂಗಳೂರು ನಗರ,ಕೊಡಗು,ಕಲಬುರಗಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಹಾಸನದಲ್ಲಿ ದೇವೆಗೌಡರ ಕುಟುಂಬದ ಮತ್ತೊಂದು ಕುಡಿ ಸೂರಜ್ ರೇವಣ್ಣ ಗೆಲುವಿನ ಮೂಲಕ ರಾಜಕೀಯ ಪ್ರವೇಶ ಮಾಡಿದ್ದಾರೆ ಆದರೆ ಹಳೆಮೈಸೂರು ಭಾಗದಲ್ಲೂ ಜೆಡಿಎಸ್ ಸೋಲುವುದರೊಂದಿಗೆ ರಾಜ್ಯಾದ್ಯಂತ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.

ಉತ್ತರಕನ್ನಡದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಆದ್ಯೋತ್ ನ್ಯೂಸ್ ಸಮೀಕ್ಷೆಯಲ್ಲಿ ವ್ಯಕ್ತವಾಗಿತ್ತು. ಅದೇ ಪ್ರಕಾರ ಬಿಜೆಪಿಯ ಗಣಪತಿ ಉಳ್ವೇಕರ್ 183 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಆರ್.ವಿ.ದೇಶಪಾಂಡೆ ಮತ್ತು ಶಿವರಾಮ ಹೆಬ್ಬಾರ ನಡುವಿನ ಸಮರ ಎಂದೇ ಬಿಂಬಿತವಾಗಿದ್ದ ಈ ಚುನಾವಣೆಯಲ್ಲಿ
ಹೆಬ್ಬಾರ ಗೆಲುವಿನ ನಗೆ ಬೀರಿದ್ದಾರೆ.


ಬಿಜೆಪಿಯ ಗಣಪತಿ ಉಳ್ವೇಕರ್1514 ಮತವನ್ನು ಪಡೆದರೆ ಕಾಂಗ್ರೆಸ್ ನ ಭೀಮಣ್ಣ ನಾಯ್ಕ 1331 ಮತವನ್ನು ಪಡೆದಿದ್ದಾರೆ.ಪಕ್ಷೇತರ ಅಭ್ಯರ್ಥಿಗಳಾಗಿದ್ದ ದತ್ತಾತ್ರೇಯ ನಾಯ್ಕ- 3 ಸೋಮಶೇಖರ ವಿ.ಎಸ್.-1ಈಶ್ವರ ಗೌಡ- 4 ಮತಗಳನ್ನು ಪಡೆದಿದ್ದಾರೆ. 54 ಮತಗಳು ತಿರಸ್ಕೃತವಾಗಿದೆ.

About the author

Adyot

Leave a Comment