ಸಿದ್ದಾಪುರ ಬಿಳಗಿಯಲ್ಲಿ ಚಕ್ರವರ್ತಿ ಸೂಲಿಬೆಲೆಯವರ ದಿಕ್ಸೂಚಿ ಭಾಷಣ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಬಿಳಗಿಯಲ್ಲಿ ಸ್ಥಳೀಯ ನಮೋ ಬ್ರಿಗೇಡ್ ಸಂಘಟನೆಯವರು ಗುರುವಾರ ಚಕ್ರವರ್ತಿ ಸೂಲಿಬೆಲೆಯವರ ದಿಕ್ಸೂಚಿ ಭಾಷಣವನ್ನು ಏರ್ಪಡಿಸಿದ್ದಾರೆ
ದಿ.11 ಗುರುವಾರ ಸಂಜೆ 5.30ಕ್ಕೆ ಬಿಳಗಿಯ ಶ್ರೀರಾಮ ರೈಸ್ ಮಿಲ್ ಆವರಣದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಕಳೆದ ಹತ್ತು ವರ್ಷದಲ್ಲಿ ಪ್ರದಾನಿ ನರೇಂದ್ರ ಮೋದಿಯವರು ದೇಶದಲ್ಲಿ ವಿಕಾಸದ ಹಬ್ಬವನ್ನೆ ಮಾಡಿದ್ದಾರೆ.ಅಭಿವೃದ್ಧಿಯ ಕಲ್ಪನೆಯನ್ನು ವಿಸ್ತಾರಗೊಳಿಸಿದ್ದಾರೆ. ದೇಶವನ್ನು ಕತ್ತಲಲ್ಲೇ ಇಟ್ಟಿದ್ದ ವಿರೋಧಪಕ್ಷದವರಿಗೆ ಇದು ಸಮಸ್ಯೆಯಾಗಿದೆ‌.
ಅತ್ಯಾಧುನಿಕ ರಸ್ತೆಗಳು, ರೈಲುಗಳು, ಸೋಲಾರ್ ಪಾರ್ಕಗಳು ಹೊಸ ಭಾರತದ ಗುರುತುಗಳು. ಈಗ ಚಂದ್ರಯಾನದ ಯಶಸ್ಸನ್ನು ದೇಶದ ಮನೆ ಮನೆಗಳಲ್ಲಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ, ಸೈನ್ಯ-ಸೈನಿಕನಿಗೆ ಕಿಂಚಿತ್ತು ಅಪಮಾನವಾದರೂ ಭಾರತೀಯ ಸಿಡಿದೇಳುತ್ತಾನೆ.ಅಕ್ಕಪಕ್ಕದ ದೇಶದವರು ನಮ್ಮ ಜೊತೆಗೆ ಅನುಚಿತವಾಗಿವರ್ತಿಸಿದರೆ ತಕ್ಕಪಾಠವನ್ನು ಕಲಿಸಲಾಗುತ್ತಿದೆ ಇದಕ್ಕೆ ಉದಾಹರಣೆ ಮಾಲ್ಡಿವ್ಸ್ ದೇಶ.ಇದು ಹತ್ತು ವರ್ಷದಲ್ಲಾದ ಬದಲಾವಣೆ. . ಜಾತಿಯ ಹೆಸರಿನಲ್ಲಿ, ಪಂಥಗಳ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಮತ ಕೇಳದೇ ತಾವು ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡನ್ನು ಮುಂದಿಟ್ಟು ನಮ್ಮ ಬಳಿ ಮತ ಕೇಳಿದವರು ಮೋದಿಯವರು. ಈ ಎಲ್ಲ ಕಾರಣಗಳಿಂದ 2024 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಗೆಲುವು ಸಾಧಿಸಿ ಮತ್ತೆ ಪ್ರದಾನಿಯಾಗಬೇಕು ಈ ದಿಸೆಯಲ್ಲಿ ಸಂಘಟನೆ ನಡೆಸಲು ಚಕ್ರವರ್ತಿ ಸೂಲಿಬೆಲೆಯವರ ದಿಕ್ಸೂಚಿ ಭಾಷಣವನ್ನು ಏರ್ಪಡಿಸಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನಮೋ ಬ್ರಗೇಡ್ ಪ್ರಕಟಣೆಯಲ್ಲಿ ತಿಳಿಸಿದೆ.
ಮುಖ್ಯ ಭಾಷಣಕಾರರು
ಚಕ್ರವರ್ತಿ ಸೂಲಿಬೆಲೆಸಂಸ್ಥಾಪಕರು, ಯುವಾ ಬ್ರಿಗೇಡ್
ಜನವರಿ 11, 2024 , ಸಾಯಂಕಾಲ 5:30
ಶ್ರೀರಾಮ್ ರೈಸ್ ಮಿಲ್ ಆವರಣ ,
ಬಿಳಗಿ
9964425085/6361204292

About the author

Adyot

Leave a Comment