ಆದ್ಯೋತ್ ಸುದ್ದಿನಿಧಿ:
ಕಳೆದ ವರ್ಷ ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಎಸ್ ಎಸ್ ಎಲ್ ಸಿ ಯ ನಕಲಿ ಅಂಕಪಟ್ಟಿ ನೀಡಿ ಕೆಲಸಕ್ಕೆ ಸೇರಿದ್ದಾರೆ ಎಂದು ಆರೋಪಿಸಿ ಶಿರಸಿ ಅಂಚೆ ನಿರೀಕ್ಷಕ ಮಂಜುನಾಥ ರಾಮಪ್ಪ ದೊಡ್ಡಮನಿ 14 ಜನರ ಮೇಲೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೋಹನ ರುಕ್ಮಾ ನಾಯ್ಕ ಗುರುಮಿಟ್ಕಲ್ ಯಾದಗಿರಿ,ಹನುಮಂತ ಭೀಮಪ್ಪ ಮದಿಹಳ್ಳಿ ಗೋಕಾಕ ಬೆಳಗಾವಿ,ವಿಠ್ಠಲ್ ಬಸಪ್ಪ ಹೊಸೂರು ರಾಯಭಾಗ ಬೆಳಗಾವಿ,
ದುಂಡಪ್ಪ ರಾಮಪ್ಪ ಅಶಿರೊಟ್ಟಿ ಗೋಜಾಕ,ಶರಣಕುಮಾರ ಮೋತಿಲಾಲ ಚಂದಾಪುರ ಕಲಬುರಗಿ,ಸುರೇಶ ಸಿವಪ್ಪ ಕುಡಗಿ ಬಸವನಬಾಗೇವಾಡಿ,ವಿಜಯಪುರ,ಅಮೃತ ಅರವಿಂದಬಾಬು ನಾಯಕ ಬಾಗಲಕೋಟ,ಸಚಿನ ಮಾರುತಿ ಭಜಂತ್ರಿ ಬಸವನಬಾಗೇವಾಡಿ ವಿಜಯಪುರ,ಮಮಿತಾ ಬಾಬು ರಾಥೋಡ ಅಂಕಲಗಿ ವಿಜಯಪುರ,ಸತೀಶ ಮೊತಿಲಾಲ ರಾಥೋಡ ಬಸವನಬಾಗೇವಾಡಿ ವಿಜಯಪುರ,ಆಕಾಶ ಶ್ರೀನಿವಾಸ ಭಜಂತ್ರಿ ವಡವಡಗಿ ಬಸವನಬಾಗೇವಾಡಿ,ಮೋಹನ ನಾಮದೇವ ಚವ್ಹಾಣ ಅಂಕಲಗಿ ವಿಜಯಪುರ,ದಿಲೀಪ ಧನಸಿಂಗ ಪವಾರ ತಿಕೋಟಾ ವಿಜಯಪುರ,ರವಿ ಮಹದೇವಪ್ಪ ದಡ್ಡಿ ಗೋಕಾಕ ಬೆಳಗಾವಿ
ಇವರು ನಕಲಿ ಅಂಕಪಟ್ಟಿ ನೀಡಿ ಕೆಲಸಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಕಲಿ ಅಂಕಪಟ್ಟಿ ಹಾವಳಿ ರಾಜ್ಯಾದ್ಯಂತ ಇದ್ದು ಹೆಸ್ಕಾಂ,ಗ್ರಾಮೀಣಾಭಿವೃದ್ಧಿ ಇಲಾಖೆ,ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಇಂತಹ ನಕಲಿ ಅಂಕಪಟ್ಟಿ ನೀಡಿ ಕೆಲಸಗಿಟ್ಟಿಸಿಕೊಂಡವರು ಇದ್ದಾರೆ ಈ ಬಗ್ಗೆ ಸಮಗ್ರ ತನಿಖೆ ನಡೆಯ ಬೇಕು ಸತ್ಯಾಂಶ ಹೊರಬರಲು ಸಿಐಡಿ ತನಿಖೆಯನ್ನು ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ