ಮಾಜಿ ಸಚೀವ ಎಚ್.ಆಂಜನೇಯರಿಗೆ ವಿಧಾನಪರಿಷತ ಟಿಕೆಟ್ ನೀಡಲು ಆಗ್ರಹ

ಆದ್ಯೋತ್ ಸುದ್ದಿನಿಧಿ:
ಮಾಜಿ ಸಚಿವ ಎಚ್ ಆಂಜನೇಯರಿಗೆ ಸೇವಾ ಅನುಭವ ಸಂಘಟನೆ ಸಾಮರ್ಥ್ಯ ಇದ್ದು, ಕಾಂಗ್ರೆಸ್ ಪಕ್ಷಕ್ಕೆ, ಸರ್ಕಾರಕ್ಕೆ ತುಂಬಾ ಅವಶ್ಯಕತೆಯಾಗಿದೆ ಇವರ ಸೇವೆಯನ್ನು ಗುರುತಿಸಿ ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂದು ಭರಮಸಾಗರ ಕಾಂಗ್ರೆಸ್ ಮುಖಂಡ ಎಸ್ಎಂಎಲ್ ಪ್ರವೀಣ್ ಆಗ್ರಹಿಸಿದ್ದಾರೆ.

ರಾಜ್ಯದ ಧೀಮಂತ ನಾಯಕ,ಹಿರಿಯ ರಾಜಕಾರಣಿ,ಎಚ್ ಆಂಜನೇಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದಾವಣಗೆರೆ ನಗರಸಭೆ ಸದಸ್ಯರಾಗಿ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಎಸ್ಸಿ ಎಸ್ಟಿ ಕಾರ್ಪೊರೇಷನ್ ರಾಜ್ಯ ಅಧ್ಯಕ್ಷರಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವಾದಳ ರಾಜ್ಯಾಧ್ಯಕ್ಷರಾಗಿ ಯುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಾಗಿ ರಾಜ್ಯದ ಸಮಾಜ ಕಲ್ಯಾಣ ಹಿಂದುಳಿದ ವರ್ಗದ ಸಚಿವರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕೆಪಿಸಿಸಿ ರಾಜ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಸಿದ್ದರಾಮಯ್ಯ ಅವರ ಮಂತ್ರಿಮಂಡಲದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದಾಗ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ. ಎಸ್ ಈ ಪಿ ಮತ್ತು ಎಸ್ ಟಿ ಪಿ ಕಾಯಿದೆ ಜಾರಿಗೊಳಿಸುವ ಕೀರ್ತಿ ಹಾಗೂ ವಸತಿ ಕಲ್ಯಾಣ ಇಲಾಖೆಗಳ ಬದಲಾವಣೆಗಳನ್ನು ಮಾಡಿದ್ದಾರೆ ಇವರು ಕಾಲಾವಧಿಯಲ್ಲಿ ಮುರಾಜಿ ದೇಸಾಯಿ ವಸತಿ ಶಾಲೆಗಳು ಅತ್ಯುತ್ತಮ ಗುಣಮಟ್ಟದಲ್ಲಿ ನಿರ್ಮಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವನ್ನು ನಿರ್ಮಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಆದೇಶಿಸಿದ್ದರು. ಗಿರಿಜನರ ಹಾಡಿಗಳಲ್ಲಿ ವಾಸ್ತವ ಮಾಡಿ ಬಡವರ ಕಷ್ಟ ಕಾರ್ಪಣ್ಯಗಳನ್ನು ಸ್ಪಂಧಿಸಿದ್ದರು.ಮಾಜಿ ಪ್ರಧಾನಿ ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಭವನವನ್ನು ನಿರ್ಮಿಸಿದ್ದಾರೆ ರಾಜ್ಯದಂತೆ ಡಾ.ಬಿ.ಆರ್ ಅಂಬೇಡ್ಕರ್ ಭವನ, ಬಸವ ಭವನ ಕನಕ ಭವನ ಗಳನ್ನು ನಿರ್ಮಿಸಿದ್ದಾರೆ.
ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎಚ್ ಆಂಜನೇಯನ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸ ಮಾಡಿ ಮಾದಿಗ ಸಮುದಾಯದ ಸಭೆಗಳನ್ನು ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿ ಹಗಲಿರುಳು ತಮ್ಮ ಸೇವೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸಿದ್ದಾರೆ .
ಎಚ್ ಆಂಜನೇಯ ಸೇವೆ ಅನುಭವ ಅವರ ಸಂಘಟನೆ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕರ್ನಾಟಕದ ಸರ್ಕಾರಕ್ಕೆ ತುಂಬಾ ಅವಶ್ಯಕತೆಯಾಗಿದೆ ಆದ್ದರಿಂದ ಇವರು ಸೇವೆಯನ್ನು ಗುರುತಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಧಾನಪರಿಷ ಸದಸ್ಯರನ್ನಾಗಿ ಮಾಡಬೇಕೆಂದು ಪ್ರವೀಣ ಆಗ್ರಹಿಸಿದ್ದಾರೆ.

About the author

Adyot

Leave a Comment