ಆದ್ಯೋತ್ ಸುದ್ದಿನಿಧಿ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದ ಪ್ರಾಧಿಕಾರದಿಂದ ಕ್ಯಾದಗಿ ಗ್ರಾಪಂ ವ್ಯಾಪ್ತಿಯ ಬಿಳುಮನೆ ಗ್ರಾಮದ ಇಬ್ಬರು ರೈತರಿಗೆ ಒಕ್ಕಲೆಬ್ಬಿಸುವ ನೋಟೀಸ್ ನೀಡಲಾಗಿದ್ದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಾದಿಕಾಲದಿಂದಲೂ ಸಾಗುವಳಿ ಮಾಡುತ್ತಿದ್ದು ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಸಲ್ಲಿಸಿದ ಅರ್ಜಿ ಮಂಜೂರಿಗೆ ಸಂಬAಧಪಟ್ಟಂತೆ ವಿಚಾರಣೆ ಹಂತದಲ್ಲಿರುವಾಗ ಒಕ್ಕಲೆಬ್ಬಿಸುವ ನೊಟೀಸ್ ನೀಡುವ ಮೂಲಕ ಅರಣ್ಯ ಅಧಿಕಾರಿಗಳು ಆತಂಕ ಮತ್ತು ಮಾನಸಿಕ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಬಿಳುಮನೆ ಗ್ರಾಮದ ಕನ್ನಾ ಪುಟ್ಟಾ ನಾಯ್ಕ ಹಾಗೂ ಕನ್ನಾ ಮಾರ್ಯಾ ನಾಯ್ಕ ಎನ್ನುವವರು ಅನಾದಿಕಾಲದಿಂದಲೂ ಅರಣ್ಯಭೂಮಿಯ ಸಾಗುವಳಿ ಮಾಡುತ್ತಿದ್ದಾರೆ ಸುಮಾರು ೩೫ ವರ್ಷದ ಹಿಂದಿನಿಂದಲೂ ಅಡಿಕೆ,ತೆಂಗು,ಹಣ್ಣುಹAಪಲ ಹಾಗೂ ಭತ್ತ ಬೆಳೆದು ಜೀವನನಿರ್ವಹಣೆ ಮಾಡುತ್ತಿದ್ದಾರೆ.ಇವರಿಗೆ ಜುಲೈ-೩ ರಂದು ಪ್ರಾಧಿಕಾರದ ನ್ಯಾಯಾಲಯಕ್ಕೆ ಹಾಜರಿರಿಬೇಕೆಂದು ನೊಟೀಸ್ ನೀಡಲಾಗಿದೆ.
ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಅರ್ಜಿ ಸಲ್ಲಿಸಿರುವಾಗ ಅರಣ್ಯವಾಸಿಗಳ ಅರ್ಜಿಗೆ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಂತಿಲ್ಲ,ಹೊರಹಾಕುವಂತಿಲ್ಲ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಆದರೂ ಅರಣ್ಯ ಇಲಾಖೆ ಈ ರೀತಿಯ ನೊಟೀಸ್ ನೀಡಿರುವುದು ಖಂಡನೀಯ. ಈ ಹಿಂದೆ ಕಾಗೋಡು ತಿಮ್ಮ÷ಪ್ಪ ಸಭಾಧ್ಯಕ್ಷರಿದ್ದ ಸಂದರ್ಭದಲ್ಲಿ ರಾಜ್ಯಸರಕಾರ ೩ ಎಕರೆಗಿಂತ ಕಡಿಮೆ ಇರುವ ಒತ್ತುದಾರರನ್ನು ಮುಂದಿನ ಸೂಚನೆಯವರೆಗೆ ಒಕ್ಕಲೆಬ್ಬಿಸಬಾರದು ಎಂದು ಆದೇಶ ಮಾಡಿತ್ತು ಈ ಆದೇಶವನ್ನು ಉಲ್ಲಂಘಿಸಿ ಅರಣ್ಯಾಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.