“ಶ್ರೀಗಂಧ” ಚಿತ್ರದ ಚಿತ್ರೀಕರಣ ಪ್ರಾರಂಭ

ಆದ್ಯೋತ್ ಸುದ್ದಿನಿಧಿ:
ಶ್ರೀ ಸಿದ್ಧಿವಿನಾಯಕ ಪ್ರೊಡಕ್ಷನ್ ನ ಅಶ್ವಿನಿ ಆನಂದ ಜೋಶಿ ಅರ್ಪಿಸುವ ‘ಶ್ರೀ ಗಂಧ ’(ನಿನಗೆಷ್ಟು ಬಂಧನ) ಕನ್ನಡ ಚಲನಚಿತ್ರದ ಚಿತ್ರೀಕರಣ ಧಾರವಾಡದ ವಿನಾಯಕ ನಗರದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಕಲ್ಯಾಣ ಸಮಿತಿ ಅಧ್ಯಕ್ಷ, ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ ಕ್ಯಾಮರಾಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ಹ್ಯಾಟ್ರಿಕ್ ಡೈರಕ್ಟರ್ ನಾಗೇಂದ್ರ ಮಾಗಡಿ ಕ್ಲ್ಯಾಪ್ ತೋರಿಸುವ ಮೂಲಕ ಮೊದಲ ದೃಶ್ಯಕ್ಕೆ ಚಾಲನೆ ಕೊಟ್ಟರು .

ಡಾ.ವಿ.ನಾಗೇಂದ್ರಪ್ರಸಾದ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇನ್ನೂ ಹೆಚ್ಚೆಚ್ಚು ಚಲನಚಿತ್ರಗಳು ನಿರ್ಮಾಣವಾಗಲಿ, ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಸಿಕ್ಕಲಿ ಎಂದು ಚಿತ್ರ ತಂಡಕ್ಕೆ ಶುಭ ಕೋರಿದರು.
ನಾಗೇಂದ್ರ ಮಾಗಡಿ ಮಾತನಾಡಿ, ಚಿತ್ರರಂಗದಲ್ಲಿ ಈ ಭಾಗದ ಹಲವು ಪ್ರತಿಭೆಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಶ್ರಮಪಟ್ಟು ದುಡಿದರೆ ಅವಕಾಶಗಳು ತಾನಾಗೇ ಬರುತ್ತವೆ ಯಶಸ್ಸು ಖಂಡಿತ ದೊರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ನಿದೇಶಕ ಟಿ.ಎನ್.ನಾಗೇಶ್,ಕವಿವಿ ಸಿಂಡಿಕೇಟ್ ಸದಸ್ಯ ಕೋಟಿ ರಮೇಶ್,ಚಿತ್ರನಟ ಡಾ.ಕಲ್ಮೇಶ್ ಹಾವೇರಿಪೇಟ,ಡಾ.ಪ್ರಭು ಗಂಜಿಹಾಳ ,ಡಾ.ವೀರೇಶ ಹಂಡಗಿ .ನಿರ್ದೇಶಕ ಅರವಿಂದ ಮುಳಗುಂದ, ಬಿ.ಎಸ್.ಗುಜಗೊಂಡ, ಎಸ್.ಡಿ.ಸಾವಟಗಿ, ಎಮ್.ಎಸ್.ಸೂರ್ಯವಂಶಿ, ಎಸ್.ಡಿ.ಗುಡದಪ್ಪನವರ, ರಾಹುಲ್ ದತ್ತ ಪ್ರಸಾದ , ಬಸವರಾಜ ಹೂಗಾರ, ಲಕ್ಷ್ಮೀ ಬಡಿಗೇರ,ಆನಂದ ಜೋಶಿ, ಮಧು ಜೋಶಿ, ಮಹಾಂತೇಶ್ ಹಳ್ಳೂರ, ನಿರ್ಮಾಪಕ,ನಟ ರೇಣುಕುಮಾರ ಸಂಸ್ಥಾನಮಠ, ರಾಜೀವಸಿಂಗ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಗಂಧ ತಾರಾಗಣದಲ್ಲಿ ಆರುಂಧತಿ, ಶ್ರೀಯಾ ಪಾವನಾ, ಅರವಿಂದ ಮುಳಗುಂದ, ಆನಂದ ಜೋಶಿ, ರೇಣುಕುಮಾರ ಸಂಸ್ಥಾನಮಠ, ಮಹಾಂತೇಶ ಹಳ್ಳೂರ, ಎಂ.ಆರ್.ಪಾಲ್ತಿ, ಅವಿನಾಶ ಗಂಜಿಹಾಳ, ರಘು ತುಮಕೂರ, ರಾಕೇಶ , ಲಕ್ಷ್ಮೀ ಬಡಿಗೇರ, ಸುಮಾ ದೇಸಾಯಿ, ಪೂರ್ಣಿಮಾ ಪದಕಿ, ಮೇಘನಾ ಟಕ್ಕಳಕಿ, ಅಮೃತಾ,ಸಿದ್ದುಕೃಷ್ಣ ಡೇಕಣೆ,ವ್ಯಾಸರು ಜೋಶಿ, ಶಿವು ನಾಗೂರ, ಪಂಚಾಕ್ಷರಿ,ಮಂಜು ಸಂಶಿ ಅತಿಥಿ ಪಾತ್ರದಲ್ಲಿ ಚಿತ್ರನಿಮಾಪಕ, ನಟ ಡಾ.ಕಲ್ಮೇಶ ಹಾವೇರಿಪೇಟ್ ಮೊದಲಾದವರಿದ್ದಾರೆ.

ಛಾಯಾಗ್ರಹಣ,ಸಂಕಲನ, ರಾಹುಲ್ ದತ್ತಪ್ರಸಾದ , ಕಥೆ-ಸಂಭಾಷಣೆ ಮಧು ಜೋಶಿ, ಸಾಹಿತ್ಯ ಪ್ರಮೋದ ಜೋಶಿ, ಸಂಗೀತ ಮೊಸೆಸ್ ಗಿಲ್, ಪ್ರಸಾಧನ ಶ್ರೀಕಾಂತ ಕುಲಕರ್ಣಿ, ವಸ್ತ್ರಾಲಂಕಾರ ಕೀರ್ತಿ ಅರವಿಂದ್,ಸಹಾಯಕ ನಿರ್ದೇಶನ ಶ್ರೇಯಸ್ ಸಿಂಧೆ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರಚಾರಕಲೆ ವಿಶ್ವಪ್ರಕಾಶ ಮಲಗೊಂಡ , ಅವಿನಾಶ ಗಂಜಿಹಾಳ, ಸಹಕಾರ ಶ್ರೀಹರಿ ಜೋಶಿ, ನಾರಾಯಣ,ರಾಘವೇಂದ್ರ ಬಿಜಾಪೂರ,ಮುರಳಿ ಮುಳಗುಂದ ಚಿತ್ರಕಥೆ-ನಿರ್ದೇಶನ ಮೂರು ಕನ್ನಡ ಚಲನಚಿತ್ರಗಳನ್ನು ಮತ್ತು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಯುವ ಪ್ರತಿಭಾವಂತ ನಿರ್ದೇಶಕ ಅರವಿಂದ ಮುಳಗುಂದ ಮಾಡಿದ್ದು ಈ ಚಿತ್ರವನ್ನು ಅಕ್ಷಯ ಆನಂದ ಜೋಶಿ ನಿರ್ಮಿಸುತ್ತಿದ್ದಾರೆ.

About the author

Adyot

Leave a Comment