ಅಂಕೋಲಾದಲ್ಲಿ ಗುಡ್ಡ ಕುಸಿತ 9 ಜನರ ಸಾವು,ಇನ್ನಷ್ಟು ಜನ ನಾಪತ್ತೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ಭಟ್ಕಳದಿಂದ ಕಾರವಾರದವರೆಗೆ ಘಟ್ಟದ ಮೇಲೆ ಹೋಗುವ ಎಲ್ಲಾ ರಸ್ತೆಗಳು ಬಂದ್ ಆಗಿದೆ


ರಸ್ತೆಗಳ ಮೇಲೆ ಗುಡ್ಡ,ಮರಗಳು ಕುಸಿದು ರಸ್ತೆ ಬಂದ್ ಆಗಿದೆ
ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು ಬಳಿ ಗುಡ್ಡ ಕುಸಿತದಿಂದ ಒಂಬತ್ತು ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್‌ ನೀರಿನಲ್ಲಿಕೊಚ್ಚಿ ಹೋಗಿದೆ. ಹೆದ್ದಾರಿ ಪಕ್ಕದಲ್ಲಿ ಕಾರು ಸೇರಿದಂತೆ ಒಟ್ಟೂ ಒಂಬತ್ತು ಜನ ನಾಪತ್ತೆಯಾಗಿದ್ದು ಮಣ್ಣಿನ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ ಶಂಕೆ ವ್ಯಕ್ತಪಡಿಸಲಾಗಿದೆ. ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಜಿಲ್ಲಾಡಳಿತದಿಂದ ಹೆದ್ದಾರಿ ಮೇಲೆನ ಮಣ್ಣಿನ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ.


ಸ್ಥಳಕ್ಕೆ ಭೇಟಿ ನೀಡಿದ ಸಂಸದ ಕಾಗೇರಿ

ಗುಡ್ಡಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ಕಾರವಾರದ ನೌಕಾನೆಲೆ ಪಕ್ಕದ ಜಾಗದಲ್ಲಿ ಜಲಾವೃತ ಉಂಟಾಗುವುದನ್ನು ತಡೆಯಲು ಅಗತ್ಯ ಕ್ರಮಕ್ಕೆ ನೌಕಾದಳದ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಹಳೆಯ ಸೇತುವೆಯಿಂದ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆ ಉಂಟಾಗಿದ್ದರಿಂದ ಸೇತುವೆ ತೆರವುಗೊಳಿಸುವ ಕೆಲಸ ಮಾಡಲು ತಿಳಿಸಲಾಗಿದೆ.ಮಳೆ ಇಳಿಕೆಯಾದ ಬಳಿಕ ನೌಕಾನೆಲೆಗೆ ಭೇಟಿ ನೀಡಿ ಇನ್ನೊಮ್ಮೆ ಪರಿಶೀಲನೆ ಮಾಡಲಾಗುವುದು. ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲಾಗುವುದು ಎಂದರು.

ಶಿರೂರಿನ ಘಟನೆ ನೋವು ತಂದಿದೆ. ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿರುವುದರಿಂದ ನದಿಯ ಅಕ್ಕಪಕ್ಕದ ಜನರಿಗೆ ತೊಂದರೆಯಾಗಬಹುದು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ತುತ್ತಾದವರ ನೆರವಿಗೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ಮಾಡದೆ ಧಾವಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ.ಹಿಂದೆ ಬಿಜೆಪಿ ಸರಕಾರ ಇದ್ದಾಗ ನೆರೆಪೀಡಿತ ಪ್ರದೇಶಗಳಲ್ಲಿ ಮನೆಗೆ ನೀರು ನುಗ್ಗಿದರೆ ಹತ್ತುಸಾವಿರರೂ.ಪರಿಹಾರ ನೀಡಲಾಗುತ್ತಿತ್ತು ರಾಜ್ಯಸರಕಾರ ಕೂಡಲೇ ಈ ಬಗ್ಗೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

About the author

Adyot

Leave a Comment