“ಸಂಗಮ ಸಿರಿ ” ರಾಜ್ಯ ಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ

ಆದ್ಯೋತ್ ಸುದ್ದಿನಿಧಿ
ನಾಡಿನ ಹಿರಿಯ ಸಾಹಿತಿ ಡಾಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಪ್ರತಿಷ್ಠಾಪನೆಗೊಂಡ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ಇದರಿಂದ ಈ ವರ್ಷ ಕಾವ್ಯ ಕ್ಷೇತ್ರದಲ್ಲಿನ ಸಾಧಕರಿಗೆ ರಾಜ್ಯಮಟ್ಟದ “ಸಂಗಮ ಸಿರಿ” ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. 2023ರ ಸಾಲಿನಲ್ಲಿ ಪ್ರಕಟಗೊಂಡ ಕವನ ಸಂಕಲನದ ಎರಡು ಪ್ರತಿಗಳನ್ನು ಕಳಿಸಿಕೊಡಬೇಕು. ಈ ಪ್ರಶಸ್ತಿಯು 10,000 ರೂ. ಮೊತ್ತದೊಂದಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
ಎರಡು ವರ್ಷ ಈ ಪ್ರತಿಷ್ಠಾನದಿಂದ ವಚನ ಸಾಹಿತ್ಯದಲ್ಲಿನ ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು .ಈ ವರ್ಷ ಕಾವ್ಯ ಕ್ಷೇತ್ರಕ್ಕೆ ನೀಡಲು ನಿರ್ಧರಿಸಲಾಗಿದೆ .ಕವನ ಸಂಕಲನದ ಪುಸ್ತಕಗಳನ್ನು ಆ 16 ರೊಳಗೆ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಮನೆ ನಂ.338 ಎರಡನೇ ಹಂತ ಗೋಕುಲ ರಸ್ತೆ,ಹುಬ್ಬಳ್ಳಿ ಇಲ್ಲಿಗೆ ಕಳಿಸಿಕೊಡಲು ಕೋರಲಾಗಿದೆ ಮಾಹಿತಿಗೆ ಮೊ.9060933596, 9986476733 ಗೆ ಸಂಪರ್ಕಿಸಬಹುದು ಎಂದು ಪ್ರತಿಷ್ಠಾಮದ ಅಧ್ಯಕ್ಷ ಜಿ.ಬಿ. ಗೌಡಪ್ಪಗೊಳ,ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ತಿಳಿಸಿದ್ದಾರೆ.

About the author

Adyot

Leave a Comment