ಗುಂಡು ಸಿಡಿದು ಕೂಲಿಕಾರನಿಗೆ ಗಾಯ: ಬಸ್ ನಲ್ಲೇ ಹೃದಯಾಘಾತವಾಗಿ ವೃದ್ಧ ಸಾವು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕು ಬಕ್ಕಳ ಗ್ರಾಮದಲ್ಲಿ ಬಂದೂಕಿನಿಂದ ಗುಂಡು ಸಿಡಿದು ಕೂಲಿಕೆಲಸ ಮಾಡುತ್ತಿದ್ದ ವ್ಯಕ್ತಿ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಬಕ್ಕಳ ಗ್ರಾಮದ ದೇವರು ಪರಮೇಶ್ವರ ಭಟ್ಟ ಎನ್ನುವವರು ತೋಟಕ್ಕೆ ಬಂದ ಮಂಗಗಳನ್ನು ಓಡಿಸಲು ಬಂದೂಕು ಸಿಡಿಸಿದಾಗ ತೋಟದಲ್ಲಿ ಕೆಲಸ ಮಾಡುತ್ತಿದ್ದ ಔಡಾಳ ಗ್ರಾಮದ ಕೇಶವ ರಾಮಾ ಮರಾಠಿ ಎನ್ನುವ ಯುವಕನ ಮುಖ ಮತ್ತು ಭುಜದ ಭಾಗಕ್ಕೆ ತೀವ್ರ ಗಾಯವಾಗಿದೆ ಪೊಲಿಸ್ ಪ್ರಕರಣ ದಾಖಲಾಗಿದೆ.
######
ಬಸ್ ನಲ್ಲಿ ಹೃದಯಾಘಾತ ವೃದ್ಧ ಸಾವು
ಬೆಂಗಳೂರಿನಿಂದ ಹಳಿಯಾಳಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಮುಂಡಗೋಡನಲ್ಲಿ
ನಡೆದಿದೆ.
ಮುಂಡಗೋಡು ತಾಲೂಕಿನ ಶಿಂಗನಹಳ್ಳಿ ಗ್ರಾಮದ ಅರ್ಜುನ ಪರಸಪ್ಪಗೌಡ ಪಾಟೀಲ ಮೃತಪಟ್ಟವರಾಗಿದ್ದು ಕಾತೂರು – ಮುಂಡಗೋಡು ಮಧ್ಯೆ ಹೃದಯಾಘಾತವಾಗಿದೆ. ಸಹಪ್ರಯಾಣಿಕರು ಪ್ರಾಥಮಿಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ವೃದ್ಧ ಮೃತಪಟ್ಟಿದ್ದಾನೆ ಎನ್ನಲಾಗಿದೆ.
#####

About the author

Adyot

Leave a Comment