ಸಿದ್ದಾಪುರದಲ್ಲಿ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ 98ನೇ ಜನ್ಮ ದಿನಾಚರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಚೇತನಾ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ರಾಮಕೃಷ್ಣ ಹೆಗಡೆ ಚಿರಂತನದ ಸಹಯೋಗದೊಂದಿಗೆ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ 98ನೇ ಜನ್ಮದಿನದ ಪ್ರಯುಕ್ತ “ಹೆಗಡೆ ಮತ್ತು ಜಾತ್ಯಾತೀತತೆ” ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು

ಖ್ಯಾತ ಸಾಹಿತಿ ಮಹಾಬಲಮೂರ್ತಿ ಕೊಡ್ಲಕೆರೆ ಮಾತನಾಡಿ,
ಸೋಲನ್ನು ಗೆಲುವಿನ ಶಕ್ತಿಯನ್ನಾಗಿ ಪರಿವರ್ತಿಸುವ ಶಕ್ತಿ ರಾಮಕೃಷ್ಣ ಹೆಗಡೆಯವರಿಗಿತ್ತು ಹೆಗಡೆಯವರು ರಾಜಕೀಯದಲ್ಲಿ ಪ್ರಭಾವಿಗಳಾಗಿದ್ದಾಗ ವಿವಿಧ ರಂಗದಲ್ಲಿದ್ದ, ವಿವಿಧ ಧರ್ಮಗಳ, ಜಾತಿಯ ಮತ್ತು ವೈಚಾರಿಕತೆಯ ಪ್ರತಿಭೆಗಳನ್ನು ರಾಜಕೀಯಕ್ಕೆ ಪರಿಚಯಿಸಿದರು. ಹೆಗಡೆಯವರ ವೈಚಾರಿಕತೆ, ಆಡಳಿತ ವೈಖರಿ ಇಂದಿಗೂ ಜನಮಾನಸದಲ್ಲಿ ಎಷ್ಟು ಪ್ರಭಾವ ಬೀರಿದೆ ಎಂದರೆ ಇಂದಿಗೂ ರಾಜಕೀಯ ವಿಶ್ಲೇಷಣೆಗಳನ್ನು ಹೆಗಡೆಯವರ ವೈಚಾರಿಕತೆಯೊಂದಿಗೆ ತುಲನೆ ಮಾಡಿ ನೋಡಲಾಗುತ್ತದೆ. ಹೆಗಡೆಯವರು ಜಾತ್ಯಾತೀತತೆಯನ್ನು ತಮ್ಮ ಅಂತರಂಗದ ಶಕ್ತಿಯನ್ನಾಗಿರಿಸಿದ್ದರು. ಕೆನರಾ ಕ್ಷೇತ್ರದಲ್ಲಿ ಹೆಗಡೆಯವರು ಸೋಲಲು ಅವರ ಜಾತ್ಯಾತೀತ ನಿಲುವು ಕೂಡ ಕಾರಣವಾಗಿತ್ತು ಎಂದರು.

ಯಲ್ಲಾಪುರದ ಶ್ರೇಯಾ ಅವರ ಕುಂಚದಲ್ಲಿ ಮೂಡಿಬಂದ ಹೆಗಡೆಯವರ ಭಾವಚಿತ್ರದ ಅನಾವರಣ ಮಾಡಲಾಯಿತು.
ಸಭೆಯಲ್ಲಿ ಹೆಗಡೆಯವರ ಅಭಿಮಾನಿಗಳಾದ ಜಿ ಟಿ ಹೆಗಡೆ ತಟ್ಟಿಸರ ಮತ್ತು ದೇವಿದಾಸ ಶೇಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಜಿ ಟಿ ಹೆಗಡೆ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ರಾಮಕೃಷ್ಣ ಹೆಗಡೆ ಚಿರಂತನ (ರಿ) ದ ಅಧ್ಯಕ್ಷ ಶಶಿಭೂಷಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಟಿ ಎನ್ ಭಟ್ ನಿರೂಪಿಸಿದರು. ಜಿ ಕೆ ಭಟ್ ವಂದಿಸಿದರು.
ಸಿದ್ದಾಪುರ ಪಟ್ಟಣದ ಚೇತನಾ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆದ ಹೆಗಡೆ ಮತ್ತು ಜಾತ್ಯಾತೀತತೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಕ್ಕೆ ರಾಮಕೃಷ್ಣ ಹೆಗಡೆಯವರ ಭಾವಚಿತ್ರ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಲಾಯಿತು.

About the author

Adyot

Leave a Comment