ಗ್ಯಾರಂಟಿ ಯೋಜನೆಯಿಂದ ಅಭಿವೃದ್ದಿ ಕುಂಠಿತವಾಗಿದೆ-ಆರ್.ವಿ.ದೇಶಪಾಂಡೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಕರ್ನಾಟಕ ಆಡಳಿತ ಸುಧಾರಣಾ ಅಧ್ಯಕ್ಷ ಆರ್ ವಿ ದೇಶಪಾಂಡೆ ಕಾರ್ಯಕರ್ತರ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇಶಪಾಂಡೆ,ಪ್ರತಿ ವರ್ಷ 58000 ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗಾಗಿ ಇಡಬೇಕಾಗುತ್ತದೆ.
ಗ್ಯಾರೆಂಟಿ ಯೋಜನೆಗೆ ಹಣ ಹೊಂದಿಸುವಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ. ಶಾಸಕರ ಮತ್ತು ಜನರ ಅಪೇಕ್ಷೆಯಂತೆ ಈವರೆಗೂ ನಿರೀಕ್ಷಿತ ಪ್ರಮಾಣದಲ್ಲಿಅಭಿವೃದ್ಧಿ ಆಗಿಲ್ಲ ಅನ್ನುವುದನ್ನು ಒಪ್ಪುತ್ತೆನೆ ಮುಖ್ಯವಾಗಿ ಮಹಿಳೆ ಹಾಗೂ ಬಡವರನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ಗ್ಯಾರಂಟಿ ತಂದಿದ್ದೇವೆ. ಈಗಾಗಲೇ ಸರ್ಕಾರದ ಆದಾಯ ಅಭಿವೃದ್ಧಿಸುತ್ತಾ ಇದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿಯತ್ತ ಹೆಚ್ಚಿನ ಒತ್ತು ನೀಡಲಾಗುವುದು. ಅರ್ಹತೆ ಇಲ್ಲದವರು ಕೂಡ ಕೆಲವರು ಬಿಪಿಎಲ್ ಕಾರ್ಡನ್ನು ಪಡೆದಿದ್ದಾರೆ ಆ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗಿದೆ ಅದರ ವರದಿ ಬಂದ ನಂತರ ತನಿಕೆಯಿಂದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ನಾಳೆ ಹೊನ್ನಾವರದಲ್ಲಿ ನಡೆಯಲಿರುವ ಮಾನವ ಸರಪಳಿ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಹಳಿಯಾಳದಿಂದ ಬೆಳಗ್ಗೆ ಹೊರಟು ಹೊನ್ನಾವರ ಬಂದು ತಲುಪುವುದು ಕಷ್ಟವಾಗುತ್ತದೆ ಆದ್ದರಿಂದ ಜೋಗದ ಸವಿ ನೋಡಿ ಜೋಗದಲ್ಲಿ ವಾಸ್ತವ್ಯ ಮಾಡಿ ನಾಳೆ ಹೊನ್ನಾವರಕ್ಕೆ ಹೋಗುವ ಉದ್ದೇಶದಿಂದ ಇಂದು ಜೋಗ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡುತ್ತೇನೆ ಎಂದರು

ಈ ವೇಳೆಯಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾವಂಕಾರ ,ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಕೆ ಜಿ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸೀಮಾ ಹೆಗಡೆ, ಅಲ್ಪಸಂಖ್ಯಾತ ಘಟಕದ ತಾಲೂಕ ಅಧ್ಯಕ್ಷ ಅಬ್ದುಲ್ ಷರಿಪ್ ಸಾಬ್ ಮುಂತಾದವರು ಉಪಸ್ಥಿತಿ ಇದ್ದರು

About the author

Adyot

Leave a Comment