೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆಗೆ ಭುವನಗಿರಿಯಲ್ಲಿ ಚಾಲನೆ

ಆದ್ಯೋತ್ ಸುದ್ದಿನಿಧಿ:
ಡಿ.೨೦ ರಿಂದ ೨೨ರವರೆಗೆ ಮಂಡ್ಯದಲ್ಲಿ ನಡೆಯಲಿರುವ ೮೭ನೇ ಕನ್ನಡಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಹಿತ್ಯ ಸಮ್ಮೇಳನದ ಕುರಿತು ಜನರನ್ನು ಜಾಗೃತಗೊಳಿಸಲು ರಾಜ್ಯಾದ್ಯಂತ ಸಂಚರಿಸಲಿರುವ ಕನ್ನಡಜ್ಯೋತಿರಥ ಯಾತ್ರೆಗೆ ರವಿವಾರ ಜಿಲ್ಲಾ ಉಸ್ತುವಾರಿ ಸಚೀವ ಮಂಕಾಳ ವೈದ್ಯ ಹಾಗೂ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು.

ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಮಂಕಾಳು ವೈದ್ಯ,ಸಾಹಿತ್ಯ ಸಮ್ಮೇಳನವನ್ನು ಹಬ್ಬದ ರೂಪದಲ್ಲಿ ಆಚರಿಸಬೇಕೆಂದು ಸರ್ಕಾರ ನಿರ್ಧರಿಸಿದೆ.ಕರ್ನಾಟಕದ ಏಕೈಕ ಕನ್ನಡಾಂಬೆಯ ದೇಗುಲವಿರೋ ಭುವನಗಿರಿಯಲ್ಲಿ ಕನ್ನಡ ರಥಕ್ಕೆ ಚಾಲನೆ ನೀಡಿದ್ದೇವೆ. ಕರ್ನಾಟಕ ನಾಮಕರಣವಾಗಿ ೫೦ರ ಸಂಭ್ರಮ ನಡೆಯುತ್ತಿದೆ. ಇದನ್ನ ವಿಜೃಂಭಣೆಯಿAದ ಆಚರಿಸಿದ್ದೇವೆ. ಅದೇ ರೀತಿ ಸಾಹಿತ್ಯ ಸಮ್ಮೇಳನ ಆಗಬೇಕೆಂಬುದು ನಮ್ಮ ಉದ್ದೇಶ. ಇದಕ್ಕಾಗಿ ೩೦ ಕೋಟಿರೂ. ಅನುದಾನ ಬಿಡುಗಡೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ನುಡಿದಂತೆ ನಡೆದ ಸರಕಾರ ನಮ್ಮದು ಹೀಗಾಗಿ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಕೊರತೆ ಆಗದಂತೆ ನಡೆಯಲು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ.ರಾಜ್ಯದ ಹಾಗೂ ಜಿಲ್ಲೆಯ ಜನರು ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕನ್ನಡ ಜ್ಯೋತಿರಥವು ರಾಜ್ಯಾದ್ಯಂತ ಸಂಚರಿಸಲಿದೆ ಪ್ರತಿಯೊಂದು ಕಡೆ ರಥಕ್ಕೆ ಗೌರವ ನೀಡಬೇಕು. ಎಲ್ಲರೂ ಸೇರಿ ಸಮ್ಮೇಳನ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,ಕನ್ನಡವು ನಮ್ಮ ಬದುಕಿನ ಅಸ್ಮಿತೆಯಾಗಿದ್ದು ಬೇರೆ ರಾಜ್ಯದಿಂದ ಉದ್ಯೋಗಕ್ಕಾಗಿ ಇಲ್ಲಿಗೆ ಬಂದಿರುವವರು ಕನ್ನಡವನ್ನು ಕಲಿತು ಇಲ್ಲಿಯವರೆ ಆಗಬೇಕು ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚೀವರ ಜೊತೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ:ಮಹೇಶ್ ಜೋಶಿ ಮಾತನಾಡಿ,ತಾಯಿ ಭುವನೇಶ್ವರಿ ದೇವಿಯ ಸಾನಿಧ್ಯದಲ್ಲಿ ಬಹಳ ಭಕ್ತಿಯಿಂದ ಪೂಜೆಯನ್ನ ನೆರವೇರಿಸಿದ್ದೇವೆ.ಇದು ಪುಣ್ಯಭೂಮಿ, ಶಕ್ತಿಸ್ಥಳ. ವಿಜ್ಞಾನಕ್ಕೆ ಸವಾಲು ಹಾಕೋ ಪವಾಡಗಳು ನಡೆದಾಗ ಇಂತಹ ಕ್ಷೇತ್ರಗಳು ಬೆಳಕಿಗೆ ಬರುತ್ತವೆ. ಭುವನಗಿರಿ ಅಂತಹ ಒಂದು ಪವಾಡವನ್ನೇ ಸೃಷ್ಟಿಸಿದ ಕ್ಷೇತ್ರ. ಅಧ್ಯಾತ್ಮದಲ್ಲಿ ನಂಬಿಕೆ, ವಿಶ್ವಾಸ ಮುಖ್ಯ. ಅಂತಹ ವಿಶ್ವಾಸ ಇಟ್ಟು ಭುವನಗಿರಿಗೆ ಬಂದಿದ್ದೇವೆ. ೮೬ನೇ ಸಾಹಿತ್ಯ ಸಮ್ಮೇಳನ ೧೧ ಲಕ್ಷ ಜನಸಂಖ್ಯೆಯೊAದಿಗೆ ದಾಖಲೆ ನಿರ್ಮಾಣ ಮಾಡಿತು. ಇದು ಕನ್ನಡ ದೇವತೆಯ ಪವಾಡಕ್ಕೆ ಸಾಕ್ಷಿ. ಇದೊಂದು ಐತಿಹಾಸಿಕ ಕ್ಷಣ. ಈ ಜಿಲ್ಲೆಯಲ್ಲಿನ ಕನ್ನಡವನ್ನ ಕೇಳಿದಾಗ ತುಂಬಾ ಹೆಮ್ಮೆಯಾಗುತ್ತೆ. ಬೇರೇ ಭಾಷೆಯನ್ನು ಮಾತೃಭಾಷೆಯನ್ನಾಗಿ ಹೊಂದಿದ್ರೂ ಕೂಡ ಕನ್ನಡವನ್ನ ಅತಿಯಾಗಿ ಪ್ರೀತಿಸೋ ಜನರಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಕನ್ನಡ ಆಡಳಿತ ಭಾಷೆಯಾಗಿ ಸ್ಥಾಪಿತವಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿದ್ದು ಜಿಲ್ಲಾಧಿಕಾರಿ ಲಕ್ಷಿö್ಮÃಪ್ರೀಯಾ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಗೌರವ ಕಾರ್ಯದರ್ಶಿ ಪದ್ಮಿನಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಮಂಗಲಾ ನಾಯ್ಕ, ತಹಶೀಲ್ದಾರ್ ಮಧುಸೂದನ ಕುಲಕರ್ಣಿ ಇಒ ದೇವರಾಜ್ ಹಿತ್ತಲಕೊಪ್ಪ, ಪಪಂ ಮುಖ್ಯಾಧಿಕಾರಿ ಜಗದೀಶ್ ಆರ್ ನಾಯ್ಕ್,ಉಪಸ್ಥಿತರಿದ್ದರು.
ಉಪವಿಭಾಗಾಧಿಕಾರಿ ಕಾವ್ಯಾರಾಣಿ ಪ್ರಾಸ್ತಾವಿಕ ಮಾತನಾಡಿದರು.ಜಿಲ್ಲಾ ಕಸಾಪ ಅಧ್ಯಕ್ಷ ಬಿ ಎನ್ ವಾಸರೆ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ವಂದನಾರ್ಪಣೆ ಮಾಡಿದರು.

ಸಭಾ ಕಾರ್ಯಕ್ರಮದ ನಂತರ ಶ್ರೀದೇವಿಯ ಆಲಯದಲ್ಲಿ ಬೆಳಗಿಸಿದ ಜ್ಯೋತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮೆರವಣಿಗೆಯಲ್ಲಿ ಕಲಾತಂಡಗಳು,ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್,ಕನ್ನಡಪರ ಸಂಘಟನೆಗಳು,ಲಯನ್ಸ್ ಕ್ಲಬ್,ನಿವೃತ್ತ ನೌಕರರ ಸಂಘ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

About the author

Adyot

Leave a Comment