ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕರ್ನಾಟಕ ರಾಜ್ಯಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಸ್ಥಳೀಯ ಶಾಖೆಯ ಅಧ್ಯಕ್ಷ ಕೃಷ್ಣ ನಾಯ್ಕ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ
ಕೆಲಸಕ್ಕೆ ಚಾವಡಿ ನೀಡಿ ಕೆಲಸ ಹೇಳಿ ಎಂಬ ಘೋಷಣೆಯೊಂದಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್ ನಾಯ್ಕ್ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ನಮಗೆ ಗ್ರಾಮಚಾವಡಿ ಇಲ್ಲ ಗ್ರಾಮ ಚಾವಡಿ ಇದ್ದರೂ ಕೂಡ ಒಂದೇ ಚಾವಡಿಯಲ್ಲಿ 4-5 ಜನ ಗ್ರಾಮ ಲೆಕ್ಕಿಗರು ಗ್ರಾಮ ಆಡಳಿತ ಅಧಿಕಾರಿಗಳು ಕೆಲಸ ಮಾಡುತ್ತಾ ಇದ್ದಾರೆ.ನಮ್ಮ ಮೂಲ ಕೆಲಸವನ್ನು ನಿಗದಿ ಮಾಡಬೇಕು.ಅತ್ಯಲ್ಪ ಪ್ರಯಾಣ ಭತ್ಯೆಯನ್ನು ನೀಡುತ್ತಿದ್ದು ಇದನ್ನು ಹೆಚ್ಚಿಸಬೇಕು. ತಾಂತ್ರಿಕ ಕೆಲಸಗಳಿಗೆ ತಾಂತ್ರಿಕ ಉಪಕರಣಗಳನ್ನು ಕೊಡಬೇಕು.15 ಕ್ಕಿಂತ ಹೆಚ್ಚು ಮೊಬೈಲ್ ಆಪ್ ಗಳನ್ನು ಕೊಟ್ಟು ಎಲ್ಲಾ ಆಪ್ ಗಳಲ್ಲಿ ಪ್ರಗತಿ ಸಾಧಿಸಿರಿ ಎಂದರೆ ಆಗುವುದಿಲ್ಲ ಒಂದೊಂದೇ ಕೆಲಸ ಹೇಳಿ ನಿಗದಿ ಮಾಡಿ ಗುರಿ ಸಾಧಿಸಿದರೆ ನಾವು ಮಾಡಬಹುದು; ಹತ್ತೆಂಟು ಕೆಲಸಗಳು ಮತ್ತು ನಮ್ಮ ನಿಗದಿತ ಕೆಲಸಗಳ ಜೊತೆ ಮೊಬೈಲ್ ಆಪ್ ಗಳನ್ನು ಬಿಡುಗಡೆ ಮಾಡುವುದರ ಮೂಲಕ ಗುಡ್ಡಗಾಡು ಪ್ರದೇಶವಾದಂತಹ ಸಿದ್ದಾಪುರ ತಾಲೂಕು ಒಂದೊಂದು ಕಿಲೋಮೀಟರ್ ಗೆ ಒಂದೊಂದು ಮನೆ ಇದೆ ಅಲ್ಲೆಲ್ಲ ನಾವು ಹೋಗಿ ಕೆಲಸ ಮಾಡಬೇಕು ಸ್ವಲ್ಪ ಸಮಯ ಬೇಕಾಗುತ್ತದೆ ಅದಕ್ಕಾಗಿ ಸಮಯ ಕೊಡಬೇಕು ಎಂದು ಹೇಳಿದರು.
ಮೊಬೈಲ್ ಮತ್ತು ವೈಫೈ ಸೌಲಭ್ಯದ ಜೊತೆಗೆ ತಾಂತ್ರಿಕ ಕೆಲಸಗಳಿಗೆ ಸಂಬಂಧಪಟ್ಟಂತ ತರಬೇತಿ ಎಲ್ಲವನ್ನು ಕೊಡಬೇಕು
ಯಾಕೆಂದರೆ ನಾವು ತಾಂತ್ರಿಕ ಅಧಿಕಾರಿಗಳಾಗಿ ಕೆಲಸಕ್ಕೆ ಸೇರಿಲ್ಲ. ನಮಗೆ ಮೂಲ ಉದ್ದೇಶ ಕಂದಾಯ ವಸೂಲಿ ಮತ್ತು ಚುನಾವಣೆ ಮತ್ತು ಇತರ ಕೆಲಸಗಳು ಬಿಟ್ಟರೆ ಉಳಿದಂತ ಯಾವುದೇ ತಾಂತ್ರಿಕ ಕೆಲಸಗಳನ್ನು ಕೊಡುವುದಾದರೆ ನಮಗೆ ಆ ಮಟ್ಟದ ವೇತನವನ್ನು ಕೂಡ ಸರ್ಕಾರ ನಿಗದಿ ಮಾಡಬೇಕಾಗುತ್ತದೆ.ರಾಜ್ಯಾದ್ಯಂತ 25 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ಗ್ರಾಮ ಲೆಕ್ಕಿಗರಿಗೆ ಇನ್ನೂ ಪಧೊನ್ನತ್ತಿ ಆಗಿಲ್ಲ. ಪೊಲೀಸ್ ಇಲಾಖೆಯಲ್ಲಿ ಔರಾದ್ಕರ್ ವರದಿಯ ಪ್ರಕಾರ ಏಳು ವರ್ಷಗಳಿಗೆ ಒಂದು ಪ್ರಮೋಷನ್ ಇದೆ.ಆದರೆ ನಮಗೆ ಇಲ್ಲ
ಇದು ಯಾವ ನ್ಯಾಯ ಸರ್ಕಾರ ನಮಗೆ ಸರಿಯಾಗಿ ಸ್ಪಂದನೆ ಮಾಡುವವರೆಗೂ ಮುಷ್ಕರವನ್ನು ಮುಂದುವರಿಸುತ್ತೇವೆ.ಸರಕಾರ ಪ್ರತಿಭಟನೆಗೆ ಸ್ಪಂದಿಸದಿದ್ದರೆ ಮೊಬೈಲ್ ಆಪ್ ಗಳನ್ನು ಬಂದ್ ಮಾಡಿ ಸಾಮೂಹಿಕ ರಜೆ ಹಾಕುವುದರ ಮೂಲಕ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ತಹಸೀಲ್ದಾರ ಮಧುಸೂಧನ ಕುಲಕರ್ಣಿ,ಗ್ರಾಮಲೆಕ್ಕಾಧಿಕಾರಿಗಳ ಬೇಡಿಕೆ ನ್ಯಾಯಯುತವಾಗಿದೆ ನಿಮ್ಮ ಮನವಿಯನ್ನು ಸರಕಾರಕ್ಕೆ ಕಳುಹಿಸಲಾಗುವುದು.ರಾಜ್ಯಸರಕಾರ ನೀಡುವ ಬೆಸ್ಟ್ ತಹಸೀಲ್ದಾರ ಪ್ರಶಸ್ತಿ ನನಗೆ ಬಂದಿದೆ ಇದಕ್ಕೆ ಗ್ರಾಮಲೆಕ್ಕಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಪರಿಶ್ರಮ ಹಾಗೂ ಪ್ರಾಮಾಣಿಕ ಕಾರ್ಯನಿರ್ವಹಣೆಯಿಂದಾಗಿಯೇ ಈ ಪ್ರಶಸ್ತಿ ಬರಲು ಸಾಧ್ಯವಾಗಿದೆ ಎಂದು ಹೇಳಿದರು.