ಧಾರವಾಡದಲ್ಲಿ ಶೈಕ್ಷಣಿಕ ಸಮಾವೇಶ,ಪ್ರಶಸ್ತಿ ಪ್ರಧಾನ,ಉಪನ್ಯಾಸ ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಧಾರವಾಡ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಹರ ಘಟಕವತಿಯಿಂದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ದೆಹಲಿಯ ಎ.ಐ.ಪಿ.ಟಿ.ಎಫ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ,ಪ್ರಾಥಮಿಕ ಶಾಲೆಯಲ್ಲಿ ವಿಷಯವಾರು ಶಿಕ್ಷಕ ಹಾಗೂ ತರಗತಿಗೊಬ್ಬ ಶಿಕ್ಷಕವಿದ್ದರೆ ಅತ್ಯುತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.ಇತ್ತೀಚಿನ ದಿನದಲ್ಲಿ ಕಲಿಕೆ ಕೆಲಸಕ್ಕಿಂತ ಶಿಕ್ಷಣೇತರ ಚಟುವಟಿಕೆಯಲ್ಲಿ ಹೆಚ್ಚು ಸಮಯ ವ್ಯರ್ಥವಾಗುತ್ತಿದ್ದು ಶಿಕ್ಷಕರ ಮೇಲೆ ಒತ್ತಡ ಹೆಚ್ಚುತ್ತಿದೆ. ಶಾಲೆಗೆ ಆಗಮಿಸುವ ಮಕ್ಕಳಿಗೆ ಸರಕಾರಿ ಯೋಜನೆಯಲ್ಲಿ ಹಾಲು, ಮೊಟ್ಟೆ ಸೇರಿದಂತೆ ಪೋಷ್ಠಿಕಾಂಶ ವಿತರಣೆ ಮಾಡುವಲ್ಲಿ ಶಾಲಾ ಸಿಬ್ಬಂದಿ ನಿರತರಾಗುತ್ತಿದ್ದಾರೆ. ಭೋದಕೇತರ ಕೆಲಸ ಹೆಚ್ಚಾದರೆ ಮಕ್ಕಳಿಗೆ ಶಿಕ್ಷಣ ನೀಡಲು ಸಮಯವಿಲ್ಲದಂತಾಗುತ್ತದೆ ಈ ನಿಟ್ಟಿನಲ್ಲಿ ಇಲಾಖೆಯು ಶಿಕ್ಷಕರಿಗೆ ಬೋಧಕೇತರ ಕೆಲಸ ನೀಡದೇ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.

ಎಸ್ಸೆಸ್ಸೆಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ ಕಾರಣ ಏನೆಂದರೆ ಪ್ರಾಥಮಿಕ ಶಾಲೆಗಳಿಗೆ ವಿಷಯವಾರು ಶಿಕ್ಷಕರ ನೇಮಕವಿಲ್ಲ. ಶಾಲೆಯಲ್ಲಿನ ಶಿಕ್ಷಕನೇ ತರಗತಿ ಎಲ್ಲಾ ವಿಷಯ ಮಕ್ಕಳಿಗೆ ಭೋಧಿಸಲು ಹೇಗೆ ಸಾಧ್ಯ. ಶಿಕ್ಷಕರ ಕೆಲಸಕ್ಕೆ ತಕ್ಕಂತೆ ಬಡ್ತಿಯಿಲ್ಲ ಜೊತೆಗೆ ವೇತನದಲ್ಲೂ ತಾರತಮ್ಯವಿದೆ. ಇತ್ತೀಚೆಗೆ ೭ ನೇ ವೇತನ ಆಯೋಗ ಜಾರಿ ಮಾಡಿದಾಗ ಅದರಲ್ಲಿ ಶಿಕ್ಷಕರಿಗೆ ವೇತನ ಶ್ರೇಣಿ ನೀಡುವಲ್ಲಿ ಹಾಗೂ ಪ್ರತ್ಯೇಕ ಸೌಲಭ್ಯ ನೀಡಿಲ್ಲ. ಇದನ್ನು ನಾವು ವಿರೋಧಿಸುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಕ ಸಂಘ ಹಾಗೂ ಸಂಘಟನೆ ಶಿಕ್ಷಕರ ಪರವಾಗಿ ನಿಂತು ಕೆಲಸ ಮಾಡಲಿದೆ. ಹೀಗಾಗಿ ನಮ್ಮ ಸಂಘಕ್ಕೆ ಹೆಚ್ಚು ಬಲ ತುಂಬುವ ಜಾವಾಬ್ದಾರಿ ಸಮಸ್ತ ಶಿಕ್ಷಕರ ಮೇಲಿದೆ ಎಂದರು.

ಸಾ.ಶಿ.ಇ.ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಮಾತನಾಡಿದರು.ಕ.ರಾ.ಪ್ರಾ.ಶಾ.ಶಿ. ಸಂಘದ ಶಹರ ಅಧ್ಯಕ್ಷೆ ಶಾಂತಾ ಶೀಲವಂತ ಅಧ್ಯಕ್ಷತೆವಹಿಸಿದ್ದರು, ಡಾ. ವೀಣಾ ಬಿರಾದಾರ ಶೈಕ್ಷಣಿಕ ಉಪನ್ಯಾಸ ನೀಡಿದರು. ಡೈಟ್ ಪ್ರಾಚಾರ್ಯ ಜಯಶ್ರೀ ಕಾರೇಕರ, ನೌಕರ ಸಂಘದ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಕ.ರಾ.ಪ್ರಾ.ಶಾ.ಶಿ. ಸಂಘದ ರಾಜ್ಯ ಉಪಾಧ್ಯಕ್ಷ ವೈ.ಎಚ್.ಬಣವಿ, ಜಿಲ್ಲಾಧ್ಯಕ್ಷ ವಿ.ಎಫ್.ಚುಳಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಅಡವೇರ, ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ನೌಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಯಡಳ್ಳಿ. ಅಶೋಕ ಎನ್ ವ್ಯೆ. ಎ. ಎನ್ ಶೇಖ. ಎನ್ ಆರ್ ಪಟೇಲ್. ವೀಣಾ ಹೊಸಮನಿ. ಎನ್ ಸಿ ಪಾಟೀಲ್ ವೇದಿಯಲ್ಲಿದ್ದರು. ರಮೇಶ ಲಿಂಗದಾಳ ಪ್ರಾಸ್ತಾವಿಕ ಮಾತನಾಡಿದರು. ಎಂ.ಆರ್.ಕಬ್ಬೇರ ನಿರೂಪಿಸಿ ಸ್ವಾಗತಿಸಿದರು. ಸಮಾರಂಭದಲ್ಲಿ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

About the author

Adyot

Leave a Comment