ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ 1೦೦ಕ್ಕೂ ಹೆಚ್ಚು ಸಿವಿಲ್ ಗುತ್ತಿಗೆದಾರರಿದ್ದು ಕಳೆದ ಒಂದು ವರ್ಷದಿಂದ ಕೆಲಸವಿಲ್ಲದೆ ಕುಳಿತಿದ್ದಾರೆ ಈಗ ಸರಕಾರದಿಂದ ಒಂದಿಷ್ಟು ಕಾಮಗಾರಿಗಳು ಮಂಜೂರಾಗಿದ್ದು ಇದರಲ್ಲಿ 5೦ಲಕ್ಷರೂಗಿಂತ ಕಡಿಮೆ ಇರುವ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ಸ್ಥಳೀಯ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸತೀಶ ಗೌಡರ್ ಹಾಗೂ ಕಾರ್ಯದರ್ಶಿ ಎ.ಜಿ.ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ತಾಲೂಕಿನ ಸಣ್ಣ ಸಣ್ಣ ಕಾಮಗಾರಿಗೂ ಬೇರೆ ತಾಲೂಕಿನವರು ಕಡಿಮೆ ಮೊತ್ತ ನಮೂದಿಸಿ ಟೆಂಡರ್ ಹಾಕುತ್ತಿದ್ದಾರೆ.ಬೇರೆ ತಾಲೂಕಿನಿಂದ ಬರುವವರಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿರುವುದಿಲ್ಲ ಇದರಿಂದ ಕಾಮಗಾರಿಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.ತಾಲೂಕಿನ ಗುತ್ತಿಗೆದಾರರು ಬೇರೆ ತಾಲೂಕಿನ ಕಾಮಗಾರಿ ಮಾಡುತ್ತಿಲ್ಲ. ನಿರುದ್ಯೋಗಿಗಳಾಗಿ ಕುಳಿತಿರುವ ನಮ್ಮ ಗುತ್ತಿಗೆದಾರರು ಮಾಡಿಕೊಂಡಿರುವ ಸಾಲ ತೀರಿಸಲಾರದೆ ಸಂಕಷ್ಟದಲ್ಲಿದ್ದಾರೆ ಇದೆಲ್ಲವನ್ನು ಪರಿಗಣಿಸಿ ಬೇರೆ ತಾಲೂಕಿನ ಯಾವುದೇ ಗುತ್ತಿಗೆದಾರರು ಹಾಗೂ ಜಿಲ್ಲಾ ಗುತ್ತಿಗೆದಾರರು ತಾಲೂಕಿನ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು ಒಂದುವೇಳೆ ಭಾಗವಹಿಸಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪೆಕಟಣೆಯಲ್ಲಿ ಎಚ್ಚರಿಸಿದ್ದಾರೆ.