ಬೇಲೆಕೇರಿ ಅದಿರು ನಾಪತ್ತೆ,6 ಪ್ರಕರಣದಲ್ಲೂ ಸತೀಶ್ ಸೈಲ್ ದೋಷಿ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಕಾರವಾರ ಬೇಲೆಕೇರಿ ಬಂದರಿನಿ0ದ 2೦1೦ರಲ್ಲಿ ಅದಿರು ನಾಪತ್ತೆಯಾಗಿದ್ದ ಎಲ್ಲಾ ಆರೂ ಪ್ರಕರಣದಲ್ಲೂ ಕಾರವಾರದ ಶಾಸಕ ಸತೀಶ ಸೈಲ್ ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ. ಆದರೆ ಶಿಕ್ಷೆ ಪ್ರಮಾಣವನ್ನೂ ಶುಕ್ರವಾರ ಪ್ರಕಟಿಸಲಾಗುವುದು ಈ ಹಿನ್ನೆಲೆಯಲ್ಲಿ ಕೂಡಲೇ ಶಾಸಕ ಸತೀಶ್ ಸೈಲ್ ಅವರನ್ನು ವಶಕ್ಕೆ ಪಡೆಯುವಂತೆ ಕೋರ್ಟ್ ನಿ
ದ ಸೂಚನೆ ನೀಡಲಾಗಿದೆ.

ಸಿಬಿಐನಿಂದ ಬೇಲೇಕೇರಿ ಅದಿರು ನಾಪತ್ತೆಗೆ ಸಂಬ0ಧಿಸಿದ0ತೆ ದಾಖಲಾದ 6 ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಚಾರ್ಜಶೀಟ್
ಸಲ್ಲಿಕೆ ಮಾಡಲಾಗಿತ್ತು.ಪ್ರಕರಣಕ್ಕೆ ಸಂಬAಧಿಸಿದ0ತೆ ಒಟ್ಟು 6ಪ್ರಕರಣಗಳಲ್ಲಿ ಇಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ವಾದ ಪ್ರತಿವಾದ ಆಲಿಸಿ ಅಂತಿಮ ಆದೇಶವನ್ನು ಹೊರಡಿಸಿದ್ದಾರೆ.

1ನೇ ಪ್ರಕರಣದಲ್ಲಿಂ೧ ಆರೋಪಿ ಮಹೇಶ್ ಬಿಳಿಯಾ ಂ೨ ಆರೋಪಿ ಸತೀಶ್ ಸೈಲ್ ,ಂ೩ ಇವರಿಗೆ ಸೇರಿದ ಕಂಪನಿ.
೨ನೇ ಪ್ರಕರಣದಲ್ಲಿ ಂ೧ ಆರೋಪಿ ಮಹೇಶ್ ಬಿಳಿಯಾ,ಂ೨ ಚೇತನ್ ಷಾ, ಂ೩ ಆರೋಪಿ ಸತೀಶ್ ಸೈಲ್ .
೩ನೇ ಪ್ರಕರಣದಲ್ಲಿ ಂ೧ ಮಹೇಶ್ ಬಿಳಿಯ, ಂ೨ ಆರೋಪಿ ಸೋಮಶೇಖರ್ , ಂ೩ ಆರೋಪಿ ಸತೀಶ್ ಸೈಲ್ .
೪ನೇ ಪ್ರಕರಣದಲ್ಲಿ ಂ೧ ಮಹೇಶ್ ಬಿಳಿಯೇ ,ಂ೨ ಸ್ವಸ್ತಿಕ್ ನಾಗರಾಜ್ ,ಂ೩ ಏಇಓ ಗೋವಿಂದರಾಜು , ಂ೪ ಸತೀಶ್ ಸೈಲ್ .
೫ನೇ ಪ್ರಕರಣದಲ್ಲಿ ಂ೧ ಮಹೇಶ್ ಬಿಳಿಯೇ,ಂ೨ ಮಹೇಶ್ ಕುಮಾರ್ ಕೆ, ಂ೩ ಸತೀಶ್ ಸೈಲ್.
೬ನೇ ಪ್ರಕರಣದಲ್ಲಿ ಂ೧ ಮಹೇಶ್ ಬಿಳಿಯೇ ,ಂ೨ -ಪ್ರೇಮಚಂದ್ ಗರ್ಗ, ಂ೩ -ಸುಶೀಲ್ ಕುಮಾರ್ ವಲೇಚ, ಂ೪- ಸತೀಶ್ ಸೈಲ್, ಂ೫ -ರಾಜ್ ಕುಮಾರ್
ಶಾಸಕ ಸತೀಶ್ ಸೈಲ್, ಅಂದಿನ ಅರಣ್ಯ ಸಂರಕ್ಷಣಾಧಿ ಮಹೇಶ್ ಬಿಳೆಯಿ ಸೇರಿ ಎಲ್ಲಾ ಆರೋಪಿಗಳು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.

—–
ಶಾಸಕ ಸತೀಶ್ ಸೈಲ್ ಮಾಲೀಕತ್ವದ ಕಂಪನಿ ವಿರುದ್ಧ ೨೦೧೩ ಸೆ.೧೩ ರಂದು ಸಿಬಿಐ ಪ್ರಥಮ ಮಾಹಿತಿ ವರದಿ ದಾಖಲಿಸಿತ್ತು. ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ೨೦೦೯ರ ಆರಂಭದಿAದ ಮೇ. ೨೦೧೦ರ ನಡುವೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಾಗೂ ಅದಿರು ಸಾಗಣೆ ಕುರಿತು ತನಿಖೆ ಆರಂಭಿಸಲಾಗಿತ್ತು.ಈ ಸಮಯದಲ್ಲೇ ಸಿಬಿಐ ದಾಖಲಿಸಿದ್ದ ಐದು ಪ್ರತ್ಯೇಕ ಎಫ್‌ಐಆರ್‌ಗಳ ಪೈಕಿ ಶಾಸಕ ಸತೀಶ್ ಸೈಲ್ ಮಾಲೀಕತ್ವ ಹೊಂದಿರುವ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ.ಪ್ರಮುಖ ಸ್ಥಾನ ಪಡೆದುಕೊಂಡಿದ್ದು. ಎಂಟು ತಿಂಗಳ ಅವಧಿಯಲ್ಲಿ ಸೈಲ್ ಮಾಲೀಕತ್ವದ ಕಂಪನಿ ಸುಮಾರು ೭.೨೩ ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲಿಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ತಿಳಿಸಿತ್ತು.೨೦೦೯ರಿಂದ ೨೦೧೦ರ ಮೇ ತಿಂಗಳವರೆಗೆ ಬೇಲಿಕೇರಿ ಬಂದರಿನ ಮೂಲಕ ಸುಮಾರು ೮೮. ೦೬ ಲಕ್ಷ ಮೆಟ್ರಿಕ್ ಟನ್ ಅದಿರು, ೭೩ ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ಹೋಗಿತ್ತು ಎಂಬುದನ್ನು ಸಿಇಸಿ ವರದಿಯಲ್ಲಿ ಪಟ್ಟಿ ಮಾಡಲಾಗಿತ್ತು.ಇಷ್ಟು ಪ್ರಮಾಣ ಅದಿರುವು ರಫ್ತಾಗಿದ್ದರೂ, ಕೇವಲ ೩೮. ೨೨ ಲಕ್ಷ ಮೆಟ್ರಿಕ್ ಟನ್‌ನಷ್ಟು ಅದಿರಿಗೆ ಮಾತ್ರವೇ ಅದಿರು ಕಳುಹಿಸಲು ಪರವಾನಗಿ (ಎಂಡಿಪಿ)ಯನ್ನು ಪಡೆಯಲಾಗಿತ್ತು. ಒಟ್ಟಾರೆ ಸುಮಾರು ೫೦ ಲಕ್ಷ ಮೆಟ್ರಿಕ್‌ನಷ್ಟು ಅದಿರು ಅಕ್ರಮವಾಗಿ ವಿದೇಶಗಳಿಗೆ ಹೋಗಿತ್ತು ಎಂಬುದನ್ನು ತನಿಖೆ ವೇಳೆ ಕಂಡುಕೊಳ್ಳಲಾಗಿತ್ತು.ಹೀಗೆ ರಫ್ತಾಗಿರುವ ಅದಿರನಲ್ಲಿ ೭. ೨೩ ಲಕ್ಷ ಮೆಟ್ರಿಕ್ ಟನ್ ಅದಿರನ್ನು ಕಳುಹಿಸಿರುವುದು ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ. ಎಂಬುದು ಆರೋಪ. ಜುಂಜುನ್‌ಬೈಲ್ ಸ್ಟಾಕ್‌ಯಾರ್ಡ್ ಸೇರಿದಂತೆ ಇತರೆ ಅದಿರು ಸಾಗಣೆದಾರರ ಜತೆ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ನಿಕಟ ವ್ಯವಹಾರ ನಡೆಸಿತ್ತು ಎಂಬುದಕ್ಕೆ ಸಿಬಿಐ ತನಿಖಾ ತಂಡ ದಾಖಲೆಗಳನ್ನು ಕಲೆ ಹಾಕಿ ವರದಿ ಸಲ್ಲಿಸಿತ್ತು.

——
ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಸಿಬಿಐ ೨೦೧೨ ರ ಸೆ. ೧೬ ರಂದು ಕಾರವಾರ- ಅಂಕೋಲಾ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು. ಇದರ ನಂತರ ೨೦೧೩ರ ಸೆ. ೨೦ ರಂದು ಸೈಲ್‌ರನ್ನು ಬಂಧಿಸಿತ್ತು. ಇದರಿಂದಾಗಿ ಸೈಲ್ ವರ್ಷಕ್ಕೂ ಅಧಿಕ ಕಾಲ ಜೈಲು ವಾಸ ಅನುಭವಿಸಬೇಕಾಯಿತು.ಅದರ ನಂತರ ೨೦೧೪ರ ಡಿಸೆಂಬರ್ ೧೬ಕ್ಕೆ ಜಾಮೀನು ಪಡೆದು ಹೊರಬಂದಿದ್ದರು. ನಂತರ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ ಸೋತಿದ್ದರು. ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಪಡೆದು ಕಾರವಾರ ವಿಧಾನಸಭಾ ಕ್ಷೇತ್ರದಿಂದ ಗೆಲವು ಕಂಡಿದ್ದರು.

About the author

Adyot

Leave a Comment