ಆದ್ಯೋತ್ ಒಳನೋಟ


ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಅದರಲ್ಲೂ ಮುಸ್ಲಿಂ ಸಮಾಜದವರನ್ನು ಓಲೈಸುವ ಕೆಲಸ ಮಾಡುತ್ತಿದೆ ಎಂಬ ಆರೋಪವನ್ನು ಬಿಜೆಪಿ,ಜೆಡಿಎಸ್ ಪಕ್ಷಗಳು ಆರೋಪಿಸುತ್ತಿವೆ ಇದಕ್ಕೆ ತಕ್ಕನಾಗಿ ಸರಕಾರದ ವರ್ತನೆಯೂ ಹಾಗೆಯೇ ಇದೆ.
ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ಸ ಪಡೆದಿರುವುದು, ಹಿಜಾಬ್ ಗಲಾಟೆಯ ಕುಂದಾಪುರ ಕಾಲೇಜ್ ಪ್ರಿನ್ಸಿಪಾಲ್‌ರಿಗೆ ಸಿಗಬೇಕಾಗಿದ್ದ ಪ್ರಶಸ್ತಿಯನ್ನು ತಡೆಹಿಡಿದಿರುವುದು,ಕೆಲವು ಉಗ್ರಚಟುವಟಿಕೆಗಳಲ್ಲಿ ಭಾಗವಹಿಸಿರುವವರನ್ನು ಸಮರ್ಥಿಸಿರುವುದು ಹೀಗೆ ಸಾಲು ಸಾಲು ತುಷ್ಟಿಕರಣದ ಉದಾಹರಣೆ ನೀಡುತ್ತಾರೆ ಈಗ ಹೊಸ ಸೇರ್ಪಡೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗುತ್ತಿರುವುದು ದೊಡ್ಡ ವಿವಾದವಾಗಿ ಬದಲಾಗುತ್ತಿದೆ. ಯಾವುದೇ ಪಕ್ಷದವರಾಗಿರಲಿ ಒಂದು ಧರ್ಮ,ಒಂದು ಜಾತಿಯವರಿಂದ ಅಧಿಕಾರ ಪಡೆಯಲು ಸಾಧ್ಯವಿಲ್ಲ ಕೇವಲ ಮತಗಳಿಕೆಗಾಗಿ,ಅಧಿಕಾರಕ್ಕಾಗಿ ಇಂತಹ ನಿರ್ಧಾರಮಾಡುವುದು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಂತೆ ಕಾಂಗ್ರೆಸ್ ಪಾಠಕಲಿಯುವಷ್ಟರಲ್ಲಿ ಹಾನಿಯಾಗುವ ಎಲ್ಲಾ ಸಾಧ್ಯತೆ ಇದೆ.
ಬಿ.ಎಸ್. ಯಡಿಯೂರಪ್ಪ,ಈಶ್ವರಪ್ಪ ಮುಂತಾದ ನಾಯಕರು ರೈತಪರವಾಗಿ,ಜನರ ಪರವಾಗಿ ಹೋರಾಟ ನಡೆಸಿ ರಾಜ್ಯದಲ್ಲಿ ಬಿಜೆಪಿಯನ್ನು ಸಶಕ್ತವಾಗಿ ಕಟ್ಟಿದ್ದರು. ಆದರೆ ಸರಕಾರ ನಿರಂತರವಾಗಿ ತಪ್ಪು ಮಾಡುತ್ತಿದ್ದರು,ಜನರು ಸಂಕಷ್ಟದಿಂದ ನರಳುತ್ತಿದ್ದರು ಬಿಜೆಪಿ ಅವರ ಧ್ವನಿಯಾಗುತ್ತಿಲ್ಲ.
ವಾಲ್ಮೀಕಿ ಹಗರಣದ ಹೋರಾಟವನ್ನು ಕೈಬಿಟ್ಟಿದೆ.ಮುಡಾ ಹಗರಣದ ವಿರುದ್ದ ಕೇಂದ್ರಮಂತ್ರಿ ಕುಮಾರಸ್ವಾಮಿಯವರು ಎತ್ತಿದಷ್ಟು ಗಟ್ಟಿಧ್ವನಿಯನ್ನು ಬಿಜೆಪಿಯವರು ಎತ್ತುತ್ತಿಲ್ಲ.ಈಗ ವಕ್ಪ್ ವಿರುದ್ದ ಹೋರಾಟದಲ್ಲಿ ಬಿಜೆಪಿಯಲ್ಲೆ ಗಟ್ಟಿ ಧ್ವನಿ ಹೊಂದಿರುವ ಯತ್ನಾಳ್ ರನ್ನು ಪಕ್ಕಕ್ಕೆ ಸರಿಸುವ ಪ್ರಯತ್ನಾಗುತ್ತಿದೆ.ಒಳಜಗಳದಿಂದ ವಿಧಾನಸಭೆಯ ಚುನಾವಣೆಯಲ್ಲಿ ಹೀನಾಯ ಸೋಲನ್ನು ಪಡೆದರು ಬುದ್ದಿ ಕಲಿತಿಲ್ಲ ತನ್ನ ಪದಾಧಿಕಾರಿಗಳಿಗೆ ಸದಸ್ಯತ್ವ ಮಾಡುವ ಗುರಿಯನ್ನು ನೀಡಿ ಕಾರ್ಪೋರೇಟ್ ಕಂಪನಿಯಂತೆ ವರ್ತಿಸುತ್ತಿದೆ. ಕೇವಲ ಸದಸ್ಯತ್ವ ಮಾಡುವುದರಿಂದ ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಜನರು ತಮ್ಮ ಧ್ವನಿಯಾಗುವವರಿಗೆ ಅಧಿಕಾರ ನೀಡುತ್ತಾರೆ ಇದನ್ನು ಬಿಜೆಪಿ ಮರೆತಿದೆ. ವಿಶ್ವದ ಅತಿದೊಡ್ಡ ಪಕ್ಷ ಎಂದು ಬೀಗುವ ಪಕ್ಷ ಕೆಲವು ಕಡೆಗಳಲ್ಲಿ ಸಿಮೀತವಾಗಿರುವ ಪ್ರಾದೇಶಿಕ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಇದರಿಂದ ಪಕ್ಷಕಟ್ಟಲು ಸಾಧ್ಯವೇ?

ಕೊನೆಗೂ ದರ್ಶನಗೆ ಜಾಮೀನು ಮಂಜೂರಾಗಿದೆ. ಆರೋಗ್ಯದ ಕಾರಣ ನೀಡಿ ಅವರಿಗೆ ಜಾಮೀನು ಸಿಕ್ಕಿದೆ ಅವರ ಅಭಿಮಾನಿಗಳು ಗೆಲುವಿನ ಸಂಭ್ರಮದಲ್ಲಿದ್ದಾರೆ.ಆದರೆ ಜಾಮೀನು ಅವಧಿ ಕೇವಲ ಒಂದೂವರೆ ತಿಂಗಳು ಮಾತ್ರ. ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾಯುತ್ತಿದ್ದಾರೆ.ವಿಜ್ಞಾನಿಗಳು ಹೊಸ ಆವೀಷ್ಕಾರದ ಬಗ್ಗೆ ಚಿಂತಿಸುತ್ತಿದ್ದಾರೆ ದೇಶದ ಅಭಿವೃದ್ಧಿಗೆ ಹಲವಾರು ಜನರು
ಪರಿಶ್ರಮ ಪಡುತ್ತಿದ್ದಾರೆ ಆದರೆ ಇವರೆಲ್ಲರಿಗೂ ಜೈ ಎನ್ನಬೇಕು ಎಂಬ ಭಾವನೆಯೇ ನಮಗಿಲ್ಲ. ಮೆರಾ ಭಾರತ್ ಮಹಾನ್

About the author

Adyot

Leave a Comment